CET Exam 2024: ವೃತ್ತಿಪರ ಕೋರ್ಸ್‌ಗಳ 'ಸಿಇಟಿ ಪರೀಕ್ಷೆ' ದಿನಾಂಕ ಘೋಷಣೆ, ಕೋರ್ಸ್-ವೇಳಾಪಟ್ಟಿ ಮಾಹಿತಿ
ಬೆಂಗಳೂರು, ಡಿಸೆಂಬರ್ 24: ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸ್‌ಗಳ 'ಸಾಮಾನ್ಯ ಪ್ರವೇಶ ಪರೀಕ್ಷೆ' (CET) 2024ಕ್ಕೆ ದಿನಾಂಕ ನಿಗದಿ ಮಾಡಿದ್ದು, ಶನಿವಾರ ವೇಳಾಪಟ್ಟಿ ಪ್ರಕಟಿಸಿದೆ. ಯಾವ ಕೋರ್ಸ್‌ಗಳು, ಪರೀಕ್ಷೆ ಆರಂಭ ಬಗ್ಗೆ ತಿಳಿಯಿರಿ.
ಇಂಜಿನಿಯರಿಂಗ್, ಫಾರ್ಮಸಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಕೃಷಿಯಂತಹ ಕೋರ್ಸ್‌ಗಳಿಗೆ 2024 ರ ಏಪ್ರಿಲ್ 20 ಮತ್ತು 21 ರಂದು CET-2024 ಅನ್ನು ನಡೆಸಲು ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.

ಮುಂದಿನ ತಿಂಗಳು ಜನವರಿ 10ರಿಂದ ಅರ್ಜಿಗಳ ನೋಂದಣಿ ಮತ್ತು ಭರ್ತಿ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ಅವರು ಮೊನ್ನೆಯಷ್ಟೇ ಮಾಹಿತಿ ನೀಡಿದರು. ಮೊದಲ ಬಾರಿಗೆ, ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಿಗೆ ಪರೀಕ್ಷೆ ಮತ್ತು ಕೌನ್ಸೆಲಿಂಗ್‌ಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಸಬೇಕಿದೆ.
ಕೋರ್ಸ್‌ಗಳನ್ನು ಸೇರಬಯಸುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ ತಮ್ಮ ಸರಿಯಾದ ಆರ್‌ಡಿ (ಕಂದಾಯ ದಾಖಲೆಗಳು) ಸಂಖ್ಯೆಯನ್ನು ನಮೂದಿಸುವಂತೆ ಪ್ರಾಧಿಕಾರ ಸೂಚಿಸಿದೆ. ಅದು ಇಲ್ಲದೆ ಪ್ರಕ್ರಿಯೆಯು ಅಪೂರ್ಣವಾಗಿರುತ್ತದೆ. ಅಭ್ಯರ್ಥಿಯು ಆರ್‌ಡಿ ಸಂಖ್ಯೆ ಇಲ್ಲದೆ ಜಾತಿ ಪ್ರಮಾಣಪತ್ರ ಹೊಂದಿದ್ದರೆ, ಅವರು ಆರ್‌ಡಿ ಸಂಖ್ಯೆ ಹೊಂದಿರುವ ಹೊಸ ಪ್ರಮಾಣಪತ್ರ ಪಡೆಯಬೇಕು ಅಥವಾ ಅವರು ಜಾತಿ ಮೀಸಲಾತಿಗೆ ಅರ್ಹತೆ ಸಿಗುವುದಿಲ್ಲ ಎಂದು ತಿಳಿಸಿದೆ..
ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ
ಬಿಪಿಟಿ, ಆರ್ಕಿಟೆಕ್ಚರ್, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಬಿಪಿಒ ಕೋರ್ಸ್‌ಗಳಿಗೆ ಆಕಾಂಕ್ಷಿ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಸಹ ಭರ್ತಿ ಮಾಡಬೇಕು. ಹೆಚ್ಚಿನ ಪ್ರಶ್ನೆಗಳಿಗೆ [email protected] ಗೆ ಮೇಲ್ ಮಾಡುವಂತೆ ಪ್ರಾಧಿಕಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ವಿವಿಧ ಕೋರ್ಸ್‌ಗಳಿಗೆ ಯಾವಾಗ ಕಾಮನ್ ಎಂಟ್ರನ್ಸ್ ಟೆಸ್ಟ್ (CET-2024) ನಡೆಸುತ್ತಾರೆ ಎಂದು ಕಾದಿದ್ದ ಅಭ್ಯರ್ಥಿಗಳು ಇದೀಗ, ನಿಮ್ಮ ಇಷ್ಟದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುತ್ತಿರುವ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು.












Click it and Unblock the Notifications