CET ಫಲಿತಾಂಶ: ಹುಬ್ಬಳ್ಳಿ ವಿದ್ಯಾನಿಕೇತನ ಕಾಲೇಜು ವಿದ್ಯಾರ್ಥಿಯ ವಿಶೇಷ ಸಾಧನೆ
ಹುಬ್ಬಳ್ಳಿ, ಜೂನ್ 15: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET 2023) ಫಲಿತಾಂಶವು ಗುರುವಾರ (ಜೂನ್ 15) ಪ್ರಕಟವಾಗಿದೆ. ಪ್ರಾಧಿಕಾರ ಕಚೇರಿಯಲ್ಲಿ ಇಂದು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ವಿಘ್ನೇಶ್ - ಪ್ರಥಮ, ಅರ್ಜುನ್ ಕೃಷ್ಣಸ್ವಾಮಿ - ದ್ವಿತೀಯ, ಸಮೃದ್ಧ್ ಶೆಟ್ಟಿ - ತೃತೀಯ , ಎಸ್.ಸುಮೇಧ್ - 4ನೇ ಸ್ಥಾನ ಹಾಗೂ ಮಾಧವ ಸೂರ್ಯ - 5ನೇ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಸಮೃದ್ಧ ಶೆಟ್ಟಿ ಮೂರನೇ ರ್ಯಾಂಕ್ ಪಡೆದಿದ್ದು, ಸಮೃದ್ಧ ಶೆಟ್ಟಿ ತಮ್ಮ ಓದು ಹಾಗೂ ಸಿಇಟಿ ಯಶಸ್ಸಿನ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಸಮೃದ್ಧ ಶೆಟ್ಟಿ ಶೇ 97.167 ಅಂಕ ಗಳಿಸಿದ್ದಾರೆ. ಸಮೃದ್ಧ ಶೆಟ್ಟಿ ತಮ್ಮ ಓದಿನ ಕ್ರಮ ಹಾಗೂ ಸಿಇಟಿ ಫಲಿತಾಂಶದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನನಗೆ ಮೊದಲಿನಿಂದಲೂ ಎಂಜಿನಿಯರಿಂಗ್ ಮಾಡಬೇಕು ಎನ್ನುವುದಯ ತಲೆಯಲ್ಲಿ ಇತ್ತು. ಯಾವುದೇ ಕಾರಣಕ್ಕೂ ಮೆಡಿಕಲ್ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂಬ ದೃಢ ನಿರ್ಧಾರ ಮಾಡಿದ್ದೆ. ಅಲ್ಲದೇ ಆ ನಿಟ್ಟಿನಲ್ಲೇ ತಯಾರಿಯೂ ನಡೆಸಿದ್ದೆ. ಆ ಕಾರಣಕ್ಕೆ ಪಿಯುಸಿಯಲ್ಲಿ ಜೀವವಿಜ್ಞಾನ ಬಿಟ್ಟು ಗಣಿತಶಾಸ್ತ್ರ (ಸ್ಟ್ಯಾಟಿಸ್ಟಿಕ್) ಆಯ್ಕೆ ಮಾಡಿದ್ದೆ. ಕುಂದಾಪುರದ ಬೈಂದೂರು ತಾಲೂಕಿನ ಕಾಲ್ತೋಡು ನಮ್ಮ ಊರು. ಅಪ್ಪ ಶೇಖರ ಶೆಟ್ಟಿ ಉದ್ಯಮಿಯಾಗಿದ್ದಾರೆ, ತಾಯಿ ಜ್ಯೋತಿ ಶೆಟ್ಟಿ ಗೃಹಿಣಿ. ನಾನು ವಿದ್ಯಾನಿಕೇತನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದೆ. ನನ್ನ ಓದಿಗೆ ಮನೆಯವರ ಸಹಕಾರವೂ ಸಾಕಷ್ಟಿತ್ತು ಎಂದಿದ್ದಾರೆ.
ಮಂಗಳೂರು ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿ ಬೈರೇಶ್ ಅಭೂತಪೂರ್ವ ಸಾಧನೆ
ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಬಿಎಸ್‌ಸಿ ವಿಭಾಗದಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಬೈರೇಶ್ ಬಿಎಸ್‌ಸಿ ವಿಭಾಗದಲ್ಲಿ 720ರಲ್ಲಿ 710 ಅಂಕಗಳನ್ನು ಗಳಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಈ ದೇಶದಲ್ಲಿ 48ನೇ ಸ್ಥಾನವನ್ನು ಪಡೆದಿದ್ದಾರೆ.
ಕೋಲಾರ ಜಿಲ್ಲೆಯ ಹರೀಶ್ ಎಸ್.ಬಿ ಮತ್ತು ರಾಧಮ್ಮ ದಂಪತಿ ಪುತ್ರರಾಗಿರುವ ಬೈರೇಶ್, ವೈದ್ಯನಾಗುವ ಆಸೆ ಹೊಂದಿದ್ದಾರೆ. ತನ್ನ ಸಾಧನೆ ಬಗ್ಗೆ ಮಾತನಾಡಿರುವ ಅವರು, ಚಿಕ್ಕಂದಿನಿಂದಲೂ ವೈದ್ಯರ ಬಗ್ಗೆ ಗೌರವ ಇತ್ತು. ಹಾಗೆಯೇ ವೈದ್ಯನಾಗುವ ಗುರಿಯೊಂದಿಗೆ ಎಂಬಿಬಿಎಸ್ ಪ್ರವೇಶ ಪಡೆಯುತ್ತಿದ್ದೇನೆ. ಮುಂದೆ ಕಾರ್ಡಿಯೋಲಾಜಿಯಲ್ಲಿ ವಿಶೇಷ ತರಬೇತಿ ಪಡೆದು ಹೃದಯರೋಗ ವೈದ್ಯನಾಗುವ ಗುರಿ ಇದೆ ಎಂದಿದ್ದಾರೆ.












Click it and Unblock the Notifications