Get Updates
Get notified of breaking news, exclusive insights, and must-see stories!

KCET Results 2023: ವಿಭಾಗವಾರು ಫಲಿತಾಂಶಗಳನ್ನು ನೋಡುವುದು ಹೇಗೆ?, ಮೂರು ಲಿಂಕ್‌ಗಳು ಇಲ್ಲಿವೆ ಗಮನಿಸಿ

ಕರ್ನಾಟಕ, ಜೂನ್‌ 15: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET 2023) ಫಲಿತಾಂಶವು ಗುರುವಾರ (ಜೂನ್‌ 15) ಪ್ರಕಟವಾಗಿದೆ. ಪ್ರಾಧಿಕಾರ ಕಚೇರಿಯಲ್ಲಿ ಇಂದು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಹಾಗಾದರೆ ವಿಭಾಗವಾರು ಫಲಿತಾಂಶಗಳ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

ಬಿಎಸ್‌ಸಿ ವಿಭಾಗ

1. ಬೈರೇಶ್ - ಮಂಗಳೂರಿನ ಎಕ್ಸ್‌ಪರ್ಟ್ ಪ್ರಿ-ಯೂನಿವರ್ಸಿಟಿ ಕಾಲೇಜು ವಿದ್ಯಾರ್ಥಿ: ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

2. ಅನಯಾರಾಗ್ ರಂಜನನ್‌: ರಾಯಚೂರಿನ ಪ್ರಮಾಣ ಪಿಯು ಕಾಲೇಜು: ದ್ವಿತೀಯ ರ‍್ಯಾಂಕ್

3. ಕಾರ್ತಿಕ್ ಮನೋಹರ್ ಸಿಂಹಸನ್‌: ರಾಜಸ್ಥಾನದ ಲೇಡಿ ಅನ್ಸೂಯಾ ಸಿಂಘಾನಿ ಅವರ ಅಕಾಡೆಮಿ ಆಫ್ ಎಜುಕೇಶನ್‌: ತೃತೀಯ

KCET Results 2023 Toppers List: Course Wise Results Analysis In Kannada

ಬಿಎನ್‌ವೈಎಸ್‌ ವಿಭಾಗ

1. ಪ್ರತೀಕ್ಷಾ ಆರ್ - ಬೆಂಗಳೂರಿನ ಶ್ರೀ ಕುಮಾರನ್ಸ್ ಕಾಲೇಜು: ಪ್ರಥಮ ರ‍್ಯಾಂಕ್

2. ಭೈರೇಶ್ ಎಸ್.ಎಚ್- ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಕು: ದ್ವಿತೀಯ

3. ಸೃಜನ್ ಎಂ.ಎಚ್ - ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜು: ತೃತೀಯ

ಬಿ ಫಾರ್ಮಾದಲ್ಲಿ ವಿಭಾಗ

1. ಪ್ರತೀಕ್ಷಾ ಆರ್- ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್ ಕಾಂಪೋಸಿಟ್ ಪ್ರಿ-ಯೂನಿವರ್ಸಿಟಿ ಕಾಲೇಜು ವಿದ್ಯಾರ್ಥಿನಿ: ಪ್ರಥಮ

ಮಾಳವಿಕಾ ಕಪೂರ್- ಬೆಂಗಳೂರಿನ ಮಹೇಶ್ ಪಿಯು ಕಾಲೇಜು: ದ್ವಿತೀಯ

ಮಾಧವ್ ಸೂರ್ಯ ತಾಡೆಪಲ್ಲಿ- ಬೆಂಗಳೂರಿನ ನಾರಾಯಣ್ ಇ ಟೆಕ್ನೋ ಶಾಲೆ: ತೃತೀಯ

ವೆಟನರಿ ಸೈನ್ಸ್ ವಿಭಾಗ

ವೆಟನರಿ ಸೈನ್ಸ್ ವಿಭಾಗದಲ್ಲಿ ಮಾಳವಿಕ ಕಾಪೂರ್​ ಮೊದಲ ರ‍್ಯಾಂಕ್ ಪಡೆದಿದ್ದು, ಸಿಇಟಿಯಲ್ಲಿ ಒಟ್ಟು 97.222 ಅಂಕಗಳನ್ನು ಗಳಿಸಿದ್ದಾರೆ. ಇವರು ಚಾಮರಾಜಪೇಟೆಯ ಮಹೇಶ್ ಪಿಯು ಕಲೇಜಿನ ವಿಧ್ಯಾರ್ಥಿನಿ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೃಷಿ ವಿಭಾಗ

ಇನ್ನು ಕೃಷಿ ವಿಭಾಗದಲ್ಲಿ ಮಂಗಳೂರಿನ ಎಕ್ಸ್​ಪರ್ಟ್ ಯುನಿವರ್ಸಿಟಿ ಕಾಲೇಜ್ ವಿಧ್ಯಾರ್ಥಿಯಾದ ಬೈರೇಶ್ ಎಸ್.ಎಚ್ ಪ್ರಥಾನ ರ‍್ಯಾಂಕ್ ಪಡೆದಿದ್ದಾರೆ. ಕ್ವಾಲಿಫೈನಲ್ಲಿ 99.75 ಅಂಕ ಪಡೆದಿದ್ದು, ಸಿಟಿಟಿಯಲ್ಲಿ 93.75 ಅಂಕ ಪಡೆದು ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.

ನ್ಯಾಚೂರೋಪತಿ ಹಾಗೂ ಯೋಗ ವಿಭಾಗ

ನ್ಯಾಚೂರೋಪತಿ ಹಾಗೂ ಯೋಗದ ವಿಭಾಗದಲ್ಲಿ ಪದ್ಮನಾಭನಗರದ ಕುಮಾರನ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಪ್ರತೀಕ್ಷಾ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಇವರು 98.661 ಅಂಕ ಪಡೆದು ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 10 ವಿಧ್ಯಾರ್ಥಿಗಳು ಟಾಪರ್ಸ್

ವಿಘ್ನೇಶ್ ನಾಟರಾಜ್ ಕುಮಾರ್ ಇಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಇವರು ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಕಳಿಸಿದ್ದು, ಸಿಟಿಇಯಲ್ಲಿ 96.111 ಅಂಕ ಪಡೆದಿದ್ದಾರೆ. ಒಟ್ಟು 97.111% ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ

ಇಂಜಿನಿಯರಿಂಗ್ ವಿಭಾಗ: ಟಾಪ್‌ 5

1. ವಿಘ್ನೇಶ್​ - ಪ್ರಥಮ

2. ಅರ್ಜುನ್ ಕೃಷ್ಣಸ್ವಾಮಿ- ದ್ವಿತೀಯ

3. ಸಮೃದ್ಧ್​ ಶೆಟ್ಟಿ - ತೃತೀಯ

4. ಎಸ್.ಸುಮೇಧ್​ - 4ನೇ ಸ್ಥಾನ

5. ಮಾಧವ ಸೂರ್ಯ - 5ನೇ ಸ್ಥಾನ

ಸಾಮಾನ್ಯ ಪ್ರವೇಶ ಪರೀಕ್ಷೆ (KCET)ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಪರೀಕ್ಷೆಯಲ್ಲಿ ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪತಿ, ಡಿ ಫಾರ್ಮ ಕೋರ್ಸ್,​ ಬಿಎಸ್‌ಸಿ ನರ್ಸಿಂಗ್​ಗೆ ಪ್ರವೇಶ ಪರೀಕ್ಷೆ ನಡೆದಿದ್ದು, ಈ ಬಾರಿ ಸಿಇಟಿಯಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು, ವಿವರ ಇಲ್ಲಿದೆ

114,565 ಹುಡುಗರು ಪರೀಕ್ಷೆಗೆ ಹಾಜರಾಗಿದ್ದು. ಈ ಪೈಕಿ 71,800 ಬಿಎನ್‌ವೈಎಸ್, 96,577 ವಿದ್ಯಾರ್ಥಿಗಳು ಎಂಜಿನಿಯರಿಂಗ್‌ನಲ್ಲಿ ಅರ್ಹತೆ ಪಡೆದಿದ್ದಾರೆ. ಇನ್ನು 71,067 ವಿದ್ಯಾರ್ಥಿಗಳು ಬಿಎಸ್‌ಸಿ ಕೃಷಿಯಲ್ಲಿ ಅರ್ಹತೆ ಪಡೆದಿದ್ದರೆ, 71,796 ವಿದ್ಯಾರ್ಥಿಗಳು ಬಿವಿಎಸ್‌ಸಿ ಕೋರ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಕೆಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು, ವಿವರ ಇಲ್ಲಿದೆ

ಒಟ್ಟು 129,780 ಬಾಲಕಿಯರು ಕೆಸಿಇಟಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 94,946 ವಿದ್ಯಾರ್ಥಿನಿಯರು ಬಿಎಸ್‌ವೈಎಸ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. 106,804 ವಿದ್ಯಾರ್ಥಿನಿಯರು ಎಂಜಿನಿಯರಿಂಗ್‌ನಲ್ಲಿ, 93,120 ವಿದ್ಯಾರ್ಥಿನಿಯರು ಬಿಎಸ್‌ಸಿ ಕೃಷಿ, 94,960 ವಿದ್ಯಾರ್ಥಿನಿಯರು ವೆಟರ್ನರಿ ಕೋರ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಇನ್ನು ಹೆಚ್ಚುವರಿಯಾಗಿ 108,760 ವಿದ್ಯಾರ್ಥಿನಿಯರು ಬಿಫಾರ್ಮ ಕೋರ್ಸ್‌ಗೆ ಅರ್ಹರಾಗಿದ್ದರೆ, 108,791 ವಿದ್ಯಾರ್ಥಿನಿಯರು ಡಿ ಫಾರ್ಮಗೆ ಅರ್ಹತೆ ಪಡೆದಿದ್ದಾರೆ. ಬಿಎಸ್‌ಸಿ ನರ್ಸಿಂಗ್ ವಿಭಾಗದಲ್ಲಿ 94,972 ವಿದ್ಯಾರ್ಥಿನಿಯರು ಅರ್ಹತೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಫಲಿತಾಂಶ ನೋಡುವ ವಿಧಾನ

1. ಕೆಇಎ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ಗೆ ಭೇಟಿ ನೀಡಿ.

2. ಮುಖಪುಟದಲ್ಲಿ ಯುಜಿಸಿಇಟಿ -2023 ಫಲಿತಾಂಶದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

3. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತೊಂದು ಪುಟ ಓಪನ್‌ ಆಗುತ್ತದೆ.

4. ನಂತರದ ಪುಟದಲ್ಲಿ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಮತ್ತು ಪಾಸ್‌ವರ್ಡ್‌ ನಮೂದಿಸಿ ಲಾಗಿನ್ ಆಗಿ

5. ಅಗತ್ಯವಿರುವ ವಿವರಗಳನ್ನು ನಮೂದಿಸಿದ ನಂತರ ಸೈನ್‌ ಇನ್‌ ಮೇಲೆ ಕ್ಲಿಕ್‌ ಮಾಡಿ.

6. ನಂತರ ನಿಮ್ಮ ಯುಜಿಸಿಇಟಿ-2023 ಫಲಿತಾಂಶ ಲಭ್ಯವಾಗುತ್ತದೆ.

ಫಲಿತಾಂಶ ನೋಡಲು ಲಿಂಕ್‌ ಇಲ್ಲಿವೆ

karresults.nic.in

kea.kar.nic.in

cetonline.karnataka.gov.in

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+