KCET Results 2023: ಸಿಇಟಿ ಫಲಿತಾಂಶ ಪ್ರಕಟ, ಯಾರು ಮೇಲುಗೈ?, ಇಲ್ಲಿದೆ ವಿವರ
ಬೆಂಗಳೂರು, ಜೂನ್ 15: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET 2023) ಫಲಿತಾಂಶವು ಇಂದು (ಜೂನ್ 15) ಪ್ರಕಟವಾಗಿದೆ. ಪ್ರಾಧಿಕಾರ ಕಚೇರಿಯಲ್ಲಿ ಇಂದು ಫಲಿತಾಂಶವನ್ನು 10 ಗಂಟೆ ಸುಮಾರಿಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ನಂತರ 11 ಗಂಟೆ ನಂತರ ವೆಬ್‌ಸೈಟ್ ಮೂಲಕ ಸಂಪೂರ್ಣ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಈ ಬಾರಿ ಸಿಇಟಿಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಪ್ರಥಮ ಸ್ಥಾನ ಪಡೆದಿದ್ದರೆ, ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ & ನ್ಯಾಚುರೋಪತಿ, ಡಿ ಫಾರ್ಮ ಕೋರ್ಸ್, ಬಿಎಸ್‌ಸಿ ನರ್ಸಿಂಗ್ಗೆ ಪ್ರವೇಶ ಪರೀಕ್ಷೆ ನಡೆದಿತ್ತು. ಈ ಬಾರಿ ಸಿಇಟಿಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂಜಿನಿಯರಿಂಗ್ ವಿಭಾಗ: ಮೇಲುಗೈ ಯಾರಿಗೆ?
1. ವಿಘ್ನೇಶ್ - ಪ್ರಥಮ
2. ಅರ್ಜುನ್ ಕೃಷ್ಣಸ್ವಾಮಿ- ದ್ವಿತೀಯ
3. ಸಮೃದ್ಧ್ ಶೆಟ್ಟಿ - ತೃತೀಯ
4. ಎಸ್.ಸುಮೇಧ್ಗೆ - 4ನೇ ಸ್ಥಾನ
5. ಮಾಧವ ಸೂರ್ಯಗೆ - 5ನೇ ಸ್ಥಾನ
ಫಲಿತಾಂಶ ನೋಡುವುದು ಹೇಗೆ?
1. ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ http://kea.kar.nic.inಗೆ ಭೇಟಿ ನೀಡಿ
2. ವೆಬ್ ಸೈಟ್‌ನಲ್ಲಿ ಪರೀಕ್ಷಾ ವೆಬ್‌ಸೈಟ್‌ಗೆ ಸಂಬಂಧಿಸಿ ಇರುವ ಹೋಮ್ ಪೇಜ್ ಕ್ಲಿಕ್ ಮಾಡಿ
3. ಅಗತ್ಯ ಲಾಗಿನ್ ಮಾಹಿತಿಯನ್ನು ಒದಗಿಸಿ
4. ನಿಮ್ಮ ಸಿಇಟಿ ಪ್ರವೇಶ ಸಂಖ್ಯೆ ಹಾಗೂ ಇತರೆ ಮಾಹಿತಿಯನ್ನು ನೀಡಿ. ನಂತರ ನಿಮ್ಮ ಫಲಿತಾಂಶದ ವಿವರ ಲಭ್ಯ ಆಗಲಿದೆ. ಹಾಗೆಯೇ ನಿಮಗೆ ಬೇಕಾದ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಹೆಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ
1. ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ: 080-23460460
2. ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ: 080-23460460
3. ಸಾರ್ವಜನಿಕ ಸಂಪರ್ಕಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ: 080-23460460












Click it and Unblock the Notifications