CET Exam 2024 Reschedule: ಗಮನಿಸಿ ಪರೀಕ್ಷೆ ದಿನಾಂಕ ಬದಲಾಗಿವೆ, ಹೊಸ ವೇಳಾಪಟ್ಟಿ ಮಾಹಿತಿ ಇಲ್ಲಿದೆ

ಬೆಂಗಳೂರು, ಜನವರಿ 10: ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ 2024 (CET 2024) ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿದ್ದುಪಡಿ ಮಾಡಿ ಮರು ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.

ವೃತ್ತಿಪರ ಕೋರ್ಸ್‌ಗಳ ಪ್ರಸಕ್ತ ವರ್ಷದ ಸಾಮಾನ್ಯ ಪ್ರವೇಶ ಪರೀಕ್ಷೆಯ (CET-2024) ದಿನಾಂಕಗಳು ಮೊದಲು ಮುಂದಿನ ಏಪ್ರಿಲ್ 20 ಮತ್ತು 21ಕ್ಕೆ ಬದಲಾಗಿ ಎರಡು ದಿನ ಮೊದಲೇ ಅಂದರೆ ಏಪ್ರಿಲ್ 18 ಮತ್ತು 19 ರಂದು ನಡೆಸಲಾಗುವುದು. ಇದರೊಂದಿಗೆ ಏಪ್ರಿಲ್ 21 ರಂದು ನಿಗದಿಯಾಗಿದ್ದ ಎನ್‌ಡಿಎ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CET Exam 2024: KEA Released Reschedule of CET Exam, Check dates, Know more.

ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಜನವರಿ 10 ಮತ್ತು ಫೆಬ್ರವರಿ 10 ರ ನಡುವೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಲು ಕೆಇಎ ಅವಕಾಶ ನೀಡಿದೆ. ದಾಖಲಾತಿಗಳ ಭೌತಿಕ ಪರಿಶೀಲನೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಅದನ್ನು ಕಡಿಮೆ ಮಾಡಲು KEA ಅಪ್ಲಿಕೇಶನ್ "ಅಪ್ಲಿಕೇಶನ್-ಕಮ್-ವೆರಿಫಿಕೇಶನ್" ಮಾಡ್ಯೂಲ್‌ನಲ್ಲಿ ವಿನ್ಯಾಸಗೊಳಿಸಿದೆ.

ಅಗತ್ಯ ದಾಖಲೆ ಅಪ್ಲೋಡ್ ಮಾಡಲು ಸೂಚನೆ

ಈ ಮಾಡ್ಯೂಲ್ ವಿವಿಧ ದಾಖಲೆಗಳ ಭೌತಿಕ ಪರಿಶೀಲನೆಯ ಅಗತ್ಯ ತೆಗೆದು ಹಾಕುತ್ತದೆ. ಒಟ್ಟಾರೆ ಎಲ್ಲ ಪ್ರಕ್ರಿಯೆಗಳು ಇದರಿಂದ ತ್ವರಿತಗತಿಯಲ್ಲಿ ನಡೆಯಲಿವೆ.

ಅಭ್ಯರ್ಥಿಗಳು ಶಾಲೆ, ಬೋಧನಾ ಮಾಧ್ಯಮ, ಜಾತಿ, ಆದಾಯ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳ ನಮೂದುಗಳನ್ನು SATS/ಕಂದಾಯ ಇಲಾಖೆ (RD) ವೆಬ್ ಸೇವೆಯ ಮೂಲಕ ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಈ ಎಲ್ಲ ವಿವರಗಳನ್ನು ಎಚ್ಚರಿಕೆ ವಹಿಸಿ ಭರ್ತಿ ಮಾಡಲು ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ ಎಂದು ಕೆಇಎ ತಿಳಿಸಿದೆ.

CET Exam 2024: KEA Released Reschedule of CET Exam, Check dates, Know more.

ನೀಟ್ (NEET2024) ಅಭ್ಯರ್ಥಿಗಳಿಗೆ ಕೆಇಎ ಸೂಚನೆ

ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪತಿ, ಬಿಪಿಟಿ, ಬಿಎಸ್ಸಿ, ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಬಿಪಿಒ (ಬ್ಯಾಚುಲರ್ ಇನ್ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್) ಕೋರ್ಸ್‌ಗಳಿಗೆ ಆಕಾಂಕ್ಷಿ ಅಭ್ಯರ್ಥಿಗಳು ನೀಟ್ ಕೌನ್ಸೆಲಿಂಗ್‌ಗಾಗಿ ಮೇಲಿನ ಸೂಚಿಸಿದ ನಮೂನೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು KEA ಸೂಚನೆ ನೀಡಿದೆ.

ಅಭ್ಯರ್ಥಿಗಳಿಗೆ UGNEET-2024 ಫಲಿತಾಂಶಗಳ ಪ್ರಕಟಗೊಂಡ ಬಳಿಕ ನೀಟ್ (NEET) ಸ್ಕೋರ್ ಮತ್ತು ರೋಲ್ ಸಂಖ್ಯೆ ನಮೂದಿಸಲು ಇಂಟರ್ಫೇಸ್ ನೀಡಲಾಗುತ್ತದೆ. KEA ಸುಮಾರು 250 ಹಿರಿಯ ಉಪನ್ಯಾಸಕರಿಗೆ ತರಬೇತಿ ನೀಡಿದೆ ಮತ್ತು ಅವರನ್ನು ಮಾಸ್ಟರ್ ಟ್ರೈನರ್ ಎಂದು ಗುರುತಿಸಲಾಗಿದೆ.

ಇನ್ನು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ಪ್ರತಿ ವಿಜ್ಞಾನ ಕಾಲೇಜಿನಲ್ಲಿ ತರಬೇತುದಾರರು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನೂ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ, ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು ನೋಡಬಹುದಾಗಿದೆ. ಹೆಚ್ಚಿನ ಮಾಹಿತಿ ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+