Karnataka Dam Water Levels: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?
ಅಕ್ವಾನ್ (Akvan) ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಇನ್ನೂ ಎರಡರಿಂದ ಮೂರು ದಿನ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿರುವ ತೀವ್ರ ಚಂಡಮಾರುತ ಅಕ್ವಾನ್ (Akvan) ಕಳೆದ 6 ಗಂಟೆಗಳಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದೆ. ನವೆಂಬರ್ 19ರ ಗುರುವಾರ ಇದು 14.9° ಉತ್ತರ ಅಕ್ಷಾಂಶ ಮತ್ತು 85.3° ಪೂರ್ವ ರೇಖಾಂಶದ ಬಳಿ, ಅಂದರೆ ನರಸಾಪುರ (ಆಂಧ್ರಪ್ರದೇಶ) ದಿಂದ ಪೂರ್ವ-ಆನ್ನೇಯಕ್ಕೆ ಸುಮಾರು 420 ಕಿ.ಮೀ, ಕಳಿಂಗಪಟ್ಟಣಂ (ಆಂಧ್ರಪ್ರದೇಶ) ದಿಂದ ದಕ್ಷಿಣ-ಆಗೇಯಕ್ಕೆ 400 ಕಿ.ಮೀ, ಗೋಪಾಲ್‌ಪುರ (ಒಡಿಶಾ) ದಿಂದ ದಕ್ಷಿಣಕ್ಕೆ 490 ಕಿ.ಮೀ, ಪುರಿ (ಒಡಿಶಾ) ದಿಂದ ದಕ್ಷಿಣಕ್ಕೆ 550 ಕಿ.ಮೀ ಮತ್ತು ಚೆನ್ನೈ (ತಮಿಳುನಾಡು) ನಿಂದ ಪೂರ್ವ- ಈಶಾನ್ಯಕ್ಕೆ 590 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.

ಮುಂದುವರಿದು ಇದು ಉತ್ತರ-ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದ್ದು, ನವೆಂಬರ್ 20, 2026 ರ ಮಧ್ಯಾಹ್ನದ ವೇಳೆಗೆ ನರಸಾಪುರ ಮತ್ತು ಪುರಿ ನಡುವೆ (ಗೋಪಾಲ್‌ಪುರದ ಪೂರ್ವ ಭಾಗದ ಹತ್ತಿರ) ಉತ್ತರ ಆಂಧ್ರಪ್ರದೇಶ, ಯಾನಂ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಈ ಸಮಯದಲ್ಲಿ ಗಾಳಿಯ ವೇಗವು ಗಂಟೆಗೆ 90-100 ಕಿ.ಮೀ ಇರಲಿದ್ದು, ಬಿರುಗಾಳಿಯ ರಭಸವು ಗಂಟೆಗೆ 110 ಕಿ.ಮೀ ವರೆಗೆ ತಲುಪಬಹುದು.
ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಅದನ್ನು ಹೊಂದಿಕೊಂಡಿರುವ ದಕ್ಷಿಣ ಲಕ್ಷದ್ವೀಪ ಪ್ರದೇಶದ ಮೇಲೆ, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗೆ ವಿಸ್ತರಿಸಿರುವ ವಾಯುಮಂಡಲದ ಮೇಲ್ಬಾಗದ ಚಂಡಮಾರುತ ಪರಿಚಲನೆಯು (Cyclonic circulation) ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ. ಇಂದಿನ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.
| ಜಲಾಶಯ | ಗರಿಷ್ಠ ಮಟ್ಟ | ಇಂದಿನ ಮಟ್ಟ | ಒಳಹರಿವು | ಹೊರಹರಿವು |
|---|---|---|---|---|
| ಲಿಂಗನಮಕ್ಕಿ | 1,819 ಅಡಿ | 1,790.10 | 0 | 3,351.80 |
| ಭದ್ರಾ | 186 ಅಡಿ | 171.11 ಅಡಿ | 42 | 1,894 |
| ಮಾಣಿ | 595 | 584.26 | 0 | 469 |
| ತುಂಗಾ | 588.24 | 588.24 | 991 | 991 |
| ಕೆಆರ್‌ಎಸ್ | 124.80 | 97.72 | 887 | 1,287 |
| ಹೇಮಾವತಿ | 2,922 | 2,897.71 | 90 | 300 |
| ಹಾರಂಗಿ | 2,859 | 2,842.49 | 344 | 200 |
| ಕಬಿನಿ | 2,284 | 2,270.72 | 278 | 500 |
| ಮಲಪ್ರಭಾ | 2,079.50 | 2,062.10 | 0 | 2,176 |
| ಘಟಪ್ರಭಾ | 2,175 | 2,163.43 | 0 | 1,993 |
| ಆಲಮಟ್ಟಿ | 519.60 | 513.83 | 00 | 879 |
| ಸೂಪಾ | 564 | 543.19 | 151.44 | 4,329.56 |
| ತುಂಗಭದ್ರಾ | 1,633 ಅಡಿ | 1,604.30 | 0 | 8,788 |
ಕರ್ನಾಟಕದಲ್ಲಿ ಮಳೆ ಆರ್ಭಟ
ಇನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಇನ್ನು ನೈಜ ಸಮಯದ ದತ್ತಾಂಶದ (real-time data) ಆಧಾರದ ಮೇಲೆ, ರಾಜ್ಯದಾದ್ಯಂತ ಕನಿಷ್ಠ ತಾಪಮಾನವು 12.9 ರಿಂದ 21.6°C ವ್ಯಾಪ್ತಿಯಲ್ಲಿತ್ತು. ನೈಜ ಸಮಯದ ದತ್ತಾಂಶದ ಪ್ರಕಾರ, ಕನಿಷ್ಠ ತಾಪಮಾನವು ಕರಾವಳಿ ಕರ್ನಾಟಕದ ಕಾರವಾರ; ಉತ್ತರ ಒಳನಾಡಿನ ಕರ್ನಾಟಕದ ಕಲಬುರಗಿ ಮತ್ತು ಕೊಪ್ಪಳ; ಹಾಗೂ ದಕ್ಷಿಣ ಒಳನಾಡಿನ ಕರ್ನಾಟಕದ ಬೆಂಗಳೂರು ಎಚ್‌ಎಎಲ್ (HAL) ವಿಮಾನ ನಿಲ್ದಾಣ, ಬೆಂಗಳೂರು ನಗರ, ಬೆಂಗಳೂರು ಕಐಎಎಲ್ (KIAL) ವಿಮಾನ ನಿಲ್ದಾಣ ಮತ್ತು ದಾವಣಗೆರೆ.
ಕರಾವಳಿ ಕರ್ನಾಟಕದ ಹೊನ್ನಾವರ; ಉತ್ತರ ಒಳನಾಡಿನ ಕರ್ನಾಟಕದ ವಿಜಯಪುರ, ಧಾರವಾಡ ಮತ್ತು ಗದಗ; ಹಾಗೂ ದಕ್ಷಿಣ ಒಳನಾಡಿನ ಕರ್ನಾಟಕದ ಚಿಂತಾಮಣಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಿತ್ತು. ಉತ್ತರ ಒಳನಾಡಿನ ಕರ್ನಾಟಕದ ರಾಯಚೂರಿನಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಬಹಳಷ್ಟು ಗಮನಾರ್ಹವಾಗಿ ಕಡಿಮೆಯಿತ್ತು. ಉಳಿದ ಸ್ಥಳಗಳಲ್ಲಿ ತಾಪಮಾನವು ಸಾಮಾನ್ಯವಾಗಿತ್ತು.
ಕಳೆದ 24 ಗಂಟೆಗಳಲ್ಲಿ, ಕರಾವಳಿ ಕರ್ನಾಟಕದ ಹೊನ್ನಾವರ ಹಾಗೂ ಉತ್ತರ ಒಳನಾಡಿನ ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣ ಮತ್ತು ಹಾವೇರಿಯಲ್ಲಿ ಕನಿಷ್ಠ ತಾಪಮಾನವು ಗಮನಾರ್ಹವಾಗಿ ಏರಿಕೆಯಾಗಿದೆ. ಉಳಿದ ಸ್ಥಳಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಕಂಡುಬಂದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.





Click it and Unblock the Notifications
