ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಯಲ್ಲಿ ಕೂತವರಿಗೆ ಬಿಸಿ ಮುಟ್ಟಿಸಿದ ಬಿಎಂಟಿಸಿ

By Rajendra
|
Google Oneindia Kannada News

Volvo bus
ಬೆಂಗಳೂರು, ಫೆ.3: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವೋಲ್ವೋ ಬಸ್ ದರವನ್ನು ಏರಿಸಿದೆ. ಈ ಮೂಲಕ ಎಸಿಯಲ್ಲಿ ಕೂತವರಿಗೆ ಬಿಸಿ ತಟ್ಟಿದಂತಾಗಿದೆ. ಮೊದಲ ಹಂತದಲ್ಲಿ ವೊಲ್ವೋ ಬಸ್ ದರ ಏರಿಕೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಸಾಮಾನ್ಯ ಬಸ್ಸುಗಳ ಪ್ರಯಾಣ ದರವೂ ಏರಿಕೆಯಾಗುವ ಸೂಚನೆ ನೀಡಿದೆ.

ವೋಲ್ವೋ ಮೊದಲ ಎರಡು ಹಂತದವರೆಗಿನ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೂರು ಮತ್ತು ಏಳನೇ ಹಂತದವರೆಗಿನ ಪ್ರಯಾಣ ದರವನ್ನು ರು.5 ಹೆಚ್ಚಳ ಮಾಡಲಾಗಿದೆ. ಇಂದಿನಿಂದಲೇ ಹೊಸ ದರ ಜಾರಿಯಾಗಲಿದೆ.

ಎಂಟನೇ ಹಂತದ ನಂತರ ರು.10ಕ್ಕೆ ಹೆಚ್ಚಳವಾಗಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಅಂಜುಮ್ ಫರ್ವೇಜ್ ತಿಳಿಸಿದ್ದಾರೆ. ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಬಸ್ ದರ ಅನಿವಾರ್ಯವಾಗಿದೆ ಎಂದಿದ್ದಾರೆ ಅವರು.

ಮಾರುಕಟ್ಟೆ ದರದಲ್ಲೇ ಡೀಸೆಲ್ ಖರೀದಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಹೊರೆ ಹೊರುವುದು ಅನಿವಾರ್ಯವಾಗಿದೆ. ಈ ಹೊರೆಯಿಂದ ಪಾರಾಗಲು ಖಾಸಗಿ ಬಂಕ್ ಗಳಿಂದ ಡೀಸೆಲ್ ಖರೀದಿ ಮಾಡಬೇಕಾಗಿದೆ.

ಸದ್ಯಕ್ಕೆ ಈ ನಷ್ಟವನ್ನು ಸರಿದೂಗಿಸಿಕೊಳ್ಳಲು ವೋಲ್ವೋ ಬಸ್ ದರವನ್ನು ಹೆಚ್ಚಿಸಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಾಮಾನ್ಯ ಬಸ್ ದರವನ್ನು ಪರಿಷ್ಕರಿಸುವುದು ಅನಿವಾರ್ಯವಾಗುತ್ತದೆ ಎನ್ನುತ್ತವೆ ಬಿಎಂಟಿಸಿ ಮೂಲಗಳು.

English summary
Bangalore Metropolitan Transport Corporation (BMTC) hiked the Volvo bus fares by 15 per cent. The passengers travelling on daily passes will have to shell out Rs 5 extra. Daily gold pass will now cost Rs 100 and the travel on AC Suvarna Sarige will cost Rs 60.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X