BMTC: ಐಪಿಎಲ್ ಪ್ರೇಮಿಗಳಿಗೆ ಬಿಎಂಟಿಸಿ ಗುಡ್‌ನ್ಯೂಸ್-ಈ ಮಾರ್ಗಗಳಲ್ಲಿ ವಿಶೇಷ ಬಸ್ ಸೇವೆ
ಬೆಂಗಳೂರು, ಮಾರ್ಚ್, 19: ಬಿಎಂಟಿಸಿ ಪ್ರಮುಖ ಕಾರ್ಯಕ್ರಗಳು ಸೇರಿದಂತೆ ಇನ್ನಿತರೆ ಸಂದರ್ಭಗಳಲ್ಲಿ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿ ಬಸ್‌ಗಳನ್ನು ಬಿಡುತ್ತಲೇ ಇರುತ್ತದೆ. ಇನ್ನು ಮಾರ್ಚ್ 22ರಿಂದ ಐಪಿಎಲ್ ಹಬ್ಬ ಶುರುವಾಗಲಿದ್ದು, ಏಪ್ರಿಲ್ 7ಕ್ಕೆ ಮುಕ್ತಾಯವಾಗಲಿದೆ. ಈ ಪೈಕಿ ಬೆಂಗಳೂರಿನಲ್ಲಿ 3 ಪಂದಗಯಗಳು ನಡೆಯಲಿದ್ದು, ಈ ವೇಳೆ ಐಪಿಎಲ್ ಪ್ರೇಮಿಗಳಿಗೆಂದೇ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಬಿಡಲು ನಿರ್ಧರಿಸಿದೆ. ಹಾಗಾದರೆ ಮಾರ್ಗಗಳು ಹಾಗೂ ದಿನಾಂಕಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅದರಲ್ಲೂ ಇಡೀ ಐಪಿಎಲ್ ಟೀಂಗಳಲ್ಲಿ ಆರ್‌ಸಿಬಿ ತಂಡ ಹೆಚ್ಚು ಅಭಿಮಾನಿಗಳನ್ನು ಒಳಗೊಂಡಿದೆ ಎನ್ನಲಾಗುತ್ತದೆ. ಇನ್ನು ಆರ್‌ಸಿಬಿ ಮ್ಯಾಚ್ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದರೆ ಸಾಕು ಒಂದು ತಿಂಗಳ ಮುಂಚೆಯೇ ಟಿಕೆಟ್ ಬುಕ್ಕಿಂಗ್ ಆಗಿರುತ್ತವೆ. ಟಿಕೆಟ್ ಸಿಗುವುದೇ ಕಷ್ಟವಾಗಿರುತ್ತದೆ. ಇಷ್ಟು ದೊಡ್ಡ ಮಟ್ಟದಲ್ಲಿ ಆರ್‌ಸಿಬಿ ಅಭಿಮಾನಿ ಬಳಗವನ್ನು ಹೊಂದಿದೆ. ಇನ್ನು ಆರ್‌ಸಿಬಿಯ ಮೂರು ಮ್ಯಾಚ್‌ಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ವೇಳೆ ಅಭಿಮಾನಿಗಳಿಗೆಂದೇ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಬಿಡಲು ಮುಂದಾಗಿದೆ.

ಐಪಿಎಲ್ ಶರು ಯಾವಾಗ?: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಮತ್ತು ಮೂರು ಐಪಿಎಲ್ ಪಂದ್ಯಗಳು ನಡೆಯುವ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲು ಬಿಎಂಟಿಸಿ ನಿರ್ಧಾರ ಮಾಡಿದೆ. ಇಂದು (ಮಾರ್ಚ್ 19) ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 22ರಂದು ಐಪಿಎಲ್ ಶುರುವಾಗಲಿದ್ದು, ಮೊದಲ ಪಂದ್ಯ ಸಿಎಸ್‌ಕೆ ಆರ್‌ಸಿ ನಡುವೆ ಚೈನ್ನೈನಲ್ಲಿ ನಡೆಯಲಿದೆ. ಇನ್ನು ಏಪ್ರಿಲ್ 07ರವರೆಗೂ ಐಪಿಎಲ್ ಹಬ್ಬ ನಡೆಯಲಿದೆ.
ಬೆಂಗಳೂರಿನಲ್ಲಿ ಪಂದ್ಯ ಯಾವ್ಯಾವಾಗ?: ಮಾರ್ಚ್ 25, 29 ಮತ್ತು ಏಪ್ರಿಲ್ 2ರಂದು ಬೆಂಗಳೂರಿನಲ್ಲೇ ಐಪಿಎಲ್ ಕ್ರಿಕೆಟ್ ಪಂದ್ಯ ಆಯೋಜನೆ ಮಾಡಲಾಗಿದೆ. ಆದ್ದರಿಂದ ಅಭಿಮಾನಿಗಳ ಹಿತದೃಷ್ಟಿಯಿಂದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಚ್‌ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣಕ್ಕೆ, ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣಕ್ಕೆ, ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ವಿಶೇಷ ಬಸ್‌ಗಳನ್ನು ಬಿಡಲು ನಿರ್ಧರಿಸಿದೆ.
ಎಂಟಿಸಿಟಿ-ನಾಯಂಡಹಳ್ಳಿ ಮೂಲಕ ಕೆಂಗೇರಿ ಕೆಎಚ್‌ಬಿ ಕ್ವಾರ್ಟ್ರರ್ಸ್‌ಗೆ, ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‌ಶಿಪ್‌ಗೆ, ನಾಗವಾರ-ಟ್ಯಾನರಿ ರಸ್ತೆ ಮೂಲಕ ಆರ್.ಕೆ.ಹೆಗಡೆ ನಗರಕ್ಕೆ, ಹೆಣ್ಣೂರು ರಸ್ತೆ ಮೂಲಕ ಬಾಗಲೂರಿಗೆ ಹೆಚ್ಚವರಿ ಬಸ್‌ಗಳು ಸಂಚಾರ ಮಾಡಲಿವೆ. ಹಾಗೆಯೇ ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ನೆಲಮಂಗಲ, ಯಲಹಂಕ, ಯಲಹಂಕ 5ನೇ ಹಂತ, ಹೊಸಕೋಟೆಗಳಿಗೂ ಹೆಚ್ಚುವರಿ ಬಸ್ ವ್ಯವಸ್ಥೆ ಇರಲಿದೆ ಎಂದು ಬಿಎಂಟಿಸಿ ಸಾರ್ವಜನಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ ನಡೆಯುತ್ತದೆ ಎಂದರೆ ಅಭಿಮಾನಿಗಳ ದಂಡೇ ಆಗಮಿಸುತ್ತದೆ. ಆದ್ದರಿಂದ ಈ ವೇಳೆ ಪ್ರಯಾಣಿಕರ ದಟ್ಟಣೆ ತಡೆಯುವ ದೃಷ್ಟಿಯಿಂದ ಬೆಂಗಳೂರು ಜೀವನಾಡಿ ಸಾರಿಗೆಯಾದ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಈ ಮಾರ್ಗಗಳಲ್ಲಿ ಬಿಡಲಿದೆ. ಅಲ್ಲದೆ ಈಗಾಗಲೇ ಆರ್‌ಸಿಬಿ ಮಹಿಳೆಯರ ತಂಡ ಕಪ್ ಮುಡಿಗೇರಿಸಿಕೊಂಡು ಈ ಸರಿ ಕಪ್ ನಮ್ದೆ ಎನ್ನುವ ಘೋಷವಾಕ್ಯವನ್ನು ನಿಜ ಮಾಡಿದೆ, ಇನ್ನು ಪುರುಷರು ಈ ಬಾರಿಯಾದರೂ ಕಪ್ ಎತ್ತುವ ಮೂಲಕ ಡಬಲ್ ಧಮಾಕ ಕೊಲಿದ್ದಾರೆಯಾ ಎಂದು ಕಾದುನೋಡಬೇಕಿದೆ.












Click it and Unblock the Notifications