Metro Feeder bus update: ಹೊಸ ಮಾರ್ಗಗಳಲ್ಲಿ ಫೀಡರ್ ಬಸ್ ಸೇವೆ
ಬೆಂಗಳೂರು, ಮಾರ್ಚ್ 13: ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಒಪ್ಪಂದದಡಿ ನಮ್ಮ ಮೆಟ್ರೋ ಫೀಡರ್ ಬಸ್ (Metro Feeder Bus Service) ಸೇವೆ ನೀಡುತ್ತಿದೆ. ಇದೀಗ ನಗರದ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ನಿಗಮವು 'ಎಸಿ' ಬಸ್‌ಗಳ ಸಂಚಾರ ಆರಂಭಿಸಿದೆ.
ಮಂಗಳವಾರ ಮಾರ್ಚ್ 12ರಿಂದ ಬಿಎಂಟಿಸಿಯು ನಮ್ಮ ಮೆಟ್ರೋ ನಿಲ್ದಾಣ ಹಾಗೂ ಪ್ರಯಾಣಿಕ ಗಮ್ಯಸ್ಥಳ ಸಂಪರ್ಕಿಸುವ ಹೊಸ ಮಾರ್ಗಗಳಲ್ಲಿ ಹವಾನಿಯಂತ್ರಿತ ಬಸ್ (AC Bus) ಅನ್ನು ಕಾರ್ಯಾಚರಣೆ ನಡೆಸಲಿದೆ. ಹಾಗಾದರೆ ಯಾವೆಲ್ಲ ಮಾರ್ಗಗಳಲ್ಲಿ ಈ ಬಸ್‌ಗಳು ಸಂಚರಿಲಿವೆ. ಯಾರಿಗೆಲ್ಲ ಅನುಕೂಲವಾಗಲಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ಹೊಸ ಮಾರ್ಗಗಳು
ಬಸ್ ಮಾರ್ಗ ಸಂಖ್ಯೆ MF 47 ನಲ್ಲಿ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಅತ್ತಿಗುಪ್ಪೆ, ವಿಜಯನಗರ, ಶ್ರೀನಿವಾಸನಗರ/ಪಟ್ಟೆಗಾರಪಾಳ್ಯ ಮೂಲಕವಾಗಿ ಮಾಳಗಾಳ, ಸುಮ್ಮನಹಳ್ಳಿ ಜಂಕ್ಷನ್, ಕೊಟ್ಟಿಗೆ ಪಾಳ್ಯ ಮಾರ್ಗವಾಗಿ ಪಾಪರೆಡ್ಡಿಪಾಳ್ಯ, ಕೆಂಗುಂಟೆ ಸರ್ಕಲ್, ನಾಗರಭಾವಿ ಸರ್ಕಲ್, ಮೈಸೂರು ರಸ್ತೆ ಮೆಟ್ರೋ ನಿಲ್ದಾಣವರೆಗೆ ನಿತ್ಯ ಮೂರು ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.
ಇದರೊಂದಿಗೆ MF 47-ಎ ಮಾರ್ಗದಲ್ಲಿ ಮೈಸೂರು ರಸ್ತೆ ಬಸ್ ನಿಲ್ದಾಣನಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣ, ನಾಗರಭಾವಿ ಸರ್ಕಲ್ ಮೂಲಕ ಹಾದು ಕೆಂಗುಂಟೆ ಸರ್ಕಲ್, ಪಾಪರೆಡ್ಡಿಪಾಳ್ಯ ಕೊಟ್ಟಿಗೆ ಪಾಳ್ಯ, ಸುಮ್ಮನಹಳ್ಳಿ ಜಂಕ್ಷನ್ ಮಾರ್ಗವಾಗಿ ಮಾಳಗಾಳ, ಶ್ರೀನಿವಾಸನಗರ/ಪಟ್ಟೆಗಾರಪಾಳ್ಯ, ವಿಜಯನಗರ, ಅತ್ತಿಗುಪ್ಪೆ ಮೆಟ್ರೋ ನಿಲ್ದಾಣವರೆಗೆ ಮೂರು ಬಿಎಂಟಿಸಿ ಹವಾನಿಯಂತ್ರಿತ (ಎಸಿ) ಬಸ್‌ಗಳು ಸಾರಿಗೆ ಸೇವೆ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟ್ರಾಫಿಕ್ ಇಳಿಕೆಗೆ ಬಿಎಂಟಿಸಿ ಕೊಡುಗೆ
ಈ ಮೂಲಕ ಹೆಚ್ಚುತ್ತಿರುವ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡುವ ಜೊತೆಗೆ ಏರಿಕೆ ಕಾಣುತ್ತಿರುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅಗತ್ಯ ಸೇವೆ ನೀಡಲು ಉದ್ದೇಶಿಸಲಾಗಿದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿಲ್ದಾಣಗಳಿಂದ ಅವರ ಗಮ್ಯ ಸ್ಥಳಗಳಿಗೆ ಪ್ರಯಾಣ ಸೇವೆ ನೀಡಲು ಈ ಹೊಸ ಮಾರ್ಗದ ಸೇವೆ ಅನುಕೂಲವಾಗಲಿದೆ.

ಸದ್ಯ 73 ಕಿಲೋ ಮೀಟರ್ ಮೆಟ್ರೋ ಜಾಲ ಹೊಂದಿರುವ ಬಿಎಂಆರ್‌ಸಿಎಲ್ ಗೆ ಒಪ್ಪಂದದಂತೆ ಒಟ್ಟು 121 ಬಿಎಂಟಿಸಿ ಬಸ್‌ಗಳು ನಿತ್ಯ 1800ಕ್ಕೂ ಹೆಚ್ಚು ಟ್ರಿಪ್‌ಗಳನ್ನು ಹೊಡೆಯುತ್ತಿವೆ. ಇದಕ್ಕೆ ಹೊಸ ಮಾರ್ಗಗಳಲ್ಲಿನ ಬಿಡಲಾದ ಎಸಿ ಬಸ್‌ಗಳ ಟ್ರಿಪ್‌ಗಳು ಸೇರ್ಪಡೆಯಾಗಿವೆ.












Click it and Unblock the Notifications