Double-Decker: ಬಿಎಂಟಿಸಿ ಡಬಲ್ ಡೆಕ್ಕರ್ ಎಸಿ ಬಸ್ ಅಪ್‌ಡೇಟ್
ಬೆಂಗಳೂರು, ಏಪ್ರಿಲ್. 08: ಹಳೆಯ ಡಬಲ್ ಡೆಕ್ಕರ್ ಫೋಟೋ, ವಿಡಿಯೋಗಳನ್ನು ನೋಡಿ ಮತ್ತೆ ಅವುಗಳಲ್ಲಿ ಓಡಾಡಬೇಖು ಎಂದು ಕನಸು ಕಾಣುತ್ತಿದ್ದ ಬೆಂಗಳೂರಿಗರು ಮತ್ತಷ್ಟು ದಿನ ತಮ್ಮ ಕನಸನ್ನು ಹಾಗೆ ಹಿಡಿದಿಟ್ಟುಕೊಳ್ಳಬೇಕಿದೆ. ಏಕೆಂದರೆ, ಡಬಲ್ ಡೆಕ್ಕರ್ ರಸ್ತೆಗಿಲೀಯುವುದು ಮತ್ತಷ್ಟು ವಿಳಂಬವಾಗಲಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲೂ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಬೆಂಗಳೂರು ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಇಳಿಯುವುದು ಮುಂದಕ್ಕೆ ಹೋಗಿದೆ. ನೀತಿ ಸಂಹಿತೆಯಿಂದಾಗಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಟೆಂಡರ್ ಅಂತಿಮಗೊಳಿಸುವುದನ್ನು ಮೇ ತಿಂಗಳವರೆಗೆ ಮುಂದೂಡಿದೆ.

ಸಿಲಿಕಾನ್ ಸಿಟಿಯಲ್ಲಿ ಓಡಿಸಲು 10 ಎಲೆಕ್ಟ್ರಿಕ್ ಡಬಲ್ ಡೆಕ್ಕರ್‌ಗಳನ್ನು ಖರೀದಿಸುವ ಪ್ರಸ್ತಾವನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಬಿಎಂಟಿಸಿ ಕಡೆದಿರುವ ಎರಡನೇ ಟೆಂಡರ್ ಮೇ ವರೆಗೆ ಅಂತಿಮಗೊಳ್ಳುವುದಿಲ್ಲ. ಬಿಎಂಟಿಸಿ ಪ್ರಕಾರ, ಸದ್ಯಕ್ಕೆ ಇಲ್ಲಿಯವರೆಗೂ ಇಲಾಖೆಗೆ ಯಾವುದೇ ಬಿಡ್‌ಗಳು ಬಂದಿಲ್ಲ.
ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (ಎನ್‌ಸಿಎಪಿ) ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಿಯುಎಲ್‌ಟಿ) ರಾಜ್ಯ ನಗರ ಸಾರಿಗೆ ನಿಧಿ (ಎಸ್‌ಯುಟಿಎಫ್) ಅಡಿಯಲ್ಲಿ 10 ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್‌ಗಳ ಸಂಗ್ರಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಬಿಎಂಟಿಸಿ ಟೆಂಡರ್ ಆಹ್ವಾನಿಸಿತ್ತು. ಕಳೆದ ಮಾರ್ಚ್ ಮಾರ್ಚ್ 14 ರಂದು ಕರೆದ ಟೆಂಡರ್‌ಗೆ ಯಾರು ಬಿಡ್ ಮಾಡಿಲ್ಲ.
ಟೆಂಡರ್‌ಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಏಪ್ರಿಲ್ 10 ಎಂದು ಘೋಷಿಸಲಾಗಿತ್ತು. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಬಿಎಂಟಿಸಿಗೆ ಟೆಂಡರ್‌ಗಳನ್ನು ಅಂತಿಮಗೊಳಿಸಲು ಸಾಧ್ಯವಾಗುವುದಿಲ್ಲ. ಇದು ಮೇ ತಿಂಗಳವರೆಗೂ ಮುಂದುವರೆಯಲಿದೆ.

"ಮಾರ್ಚ್‌ನಲ್ಲಿ ಡಬಲ್ ಡೆಕ್ಕರ್‌ಗಳ ಖರೀದಿಗಾಗಿ ನಾವು ಎರಡನೇ ಟೆಂಡರ್ ಅನ್ನು ಕರೆದಿದ್ದೇವು. ಬಿಡ್ಡಿಂಗ್‌ನ ಕೊನೆಯ ದಿನಾಂಕವು ಏಪ್ರಿಲ್ 10. ಆದರೆ ಮಾದರಿ ನೀತಿ ಸಂಹಿತೆ ಮುಗಿಯುವವರೆಗೆ ಟೆಂಡರ್ ಅನ್ನು ಅಂತಿಮಗೊಳಿಸಲು ನಮಗೆ ಅನುಮತಿಯಿಲ್ಲ. ಆದರೆ, ಈಗ ನಾವು ಯಾವುದೇ ಬಿಡ್‌ಗಳು ಬಂದಿಲ್ಲ" ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ಮಿರರ್‌ಗೆ ತಿಳಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದ ಡಬಲ್ ಡೆಕ್ಕರ್ ಮೊದಲ ಟೆಂಡರ್ ಅಂತಿಮಗೊಂಡಿಲ್ಲ. ಚೆನ್ನೈ ಮೂಲದ ಒಎಚ್‌ಎಂ ಗ್ಲೋಬಲ್ ಮೊಬಿಲಿಟಿ ಲಿಮಿಟೆಡ್ ಮಾತ್ರ ಬಿಡ್ ಸಲ್ಲಿಸಿತ್ತು. ಅದು ಪ್ರತಿ ಕಿ.ಮೀಗೆ 102.5 ರೂಪಾಯಿ ಮಾಡಿದೆ. ಆದರೆ, ಬಿಡ್ ಹೆಚ್ಚಾದ ಕಾರಣ ಟೆಂಡರ್ ರದ್ದುಗೊಳಿಸಲಾಗಿದೆ. ಬಿಎಂಟಿಸಿ ಈಗ ಅದಕ್ಕಿಂತ ಕಡಿಮೆ ಬಿಡ್‌ಗಳನ್ನು ಹುಡುಕುತ್ತಿದೆ.
ಟೆಂಡರ್ ಪ್ರಕಾರ, ಬಿಎಂಟಿಸಿ ಈ ಡಬಲ್ ಡೆಕ್ಕರ್ ಬಸ್‌ಗಳನ್ನು ಆಯ್ದ ಮಾರ್ಗಗಳಲ್ಲಿ ಓಡಿಸಲಿದೆ. 350 ದಿನಗಳಲ್ಲಿ ದಿನಕ್ಕೆ 150 ಕಿಲೋಮೀಟರ್ ಓಡಿಸಲಿದೆ. ಒಂದು ವರ್ಷದಲ್ಲಿ 52,500 ಕಿಮೀ ಓಡಿದಂತಾಗುತ್ತದೆ. ಅಂದಾಜಿನ ಪ್ರಕಾರ, ಪ್ರತಿ ಡಬಲ್ ಡೆಕ್ಕರ್ ಬಸ್ ಒಂದೇ ಬಾರಿಗೆ 65 ಪ್ರಯಾಣಿಕರಿಗೆ ಸೇವೆ ನೀಡಲಿದೆ.
ಪ್ರಸ್ತುತ, ಬಿಎಂಟಿಸಿ ಈ ಬಸ್‌ಗಳನ್ನು ಮೆಜೆಸ್ಟಿಕ್‌ನಿಂದ ಶಿವಾಜಿನಗರ, ಶಿವಾಜಿನಗರದಿಂದ ಕೆ ಆರ್ ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಮಾರ್ಗಗಳಲ್ಲಿ ಓಡಿಸಲು ಯೋಜನೆ ರೂಪಿಸಿದೆ. ಬಸ್ ಡಿಪೋಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸುವುದು ಸಹ ನಿರ್ವಾಹಕರ ಜವಾಬ್ದಾರಿ ಆಗಿರುತ್ತದೆ. ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಮ್ ನಿಂದ ಗಳಿಸಿದ ಆದಾಯದ 50 ಪ್ರತಿಶತವನ್ನು ಸಹ ನಿರ್ವಾಹಕರು ಪ್ರಾಧಿಕಾರದೊಂದಿಗೆ ಹಂಚಿಕೊಳ್ಳುತ್ತಾರೆ.












Click it and Unblock the Notifications