BMTC: ವಿಮಾನ ನಿಲ್ದಾಣ, ಟೆಕ್ ಕಾರಿಡಾರ್ ಮಾರ್ಗಗಳಲ್ಲಿ 320 ಎಸಿ ಇ-ಬಸ್‌ಗಳು
ಬೆಂಗಳೂರು, ಏಪ್ರಿಲ್. 10: ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಒಎಚ್‌ಎಂ (OHM) ಗ್ಲೋಬಲ್ ಮೊಬಿಲಿಟಿ ಶೀಘ್ರದಲ್ಲೇ 320 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ನೀಡಲಿದೆ. ಈ ಮೂಲಕ ಬೆಂಗಳೂರಿಗರ ಬಸ್ ಪ್ರಯಾಣವನ್ನು ಮತ್ತಷ್ಟು ಆರಾಮದಾಯಕವಾಗಿಸಲಿದೆ.
ಬಿಎಂಟಿಸಿ ಹವಾನಿಯಂತ್ರಿತ ಇ-ಬಸ್‌ಗಳನ್ನು ಪರಿಚಯಿಸುತ್ತಿರುವುದು ಇದೇ ಮೊದಲು. ಪ್ರಸ್ತುತ, ಅಸ್ತಿತ್ವದಲ್ಲಿರುವ ಎಲ್ಲಾ ಇ-ಬಸ್‌ಗಳು ನಾನ್ ಎಸಿ ಬಸ್‌ಗಳಾಗಿವೆ. ಈ 320 ಎಸಿ ಎಲೆಕ್ಟ್ರಿಕ್ ಬಸ್‌ಗಳ ಮೂಲಕ ಬಿಎಂಟಿಸಿ ಸಂಚಾರ ಮತ್ತಷ್ಟು ಉಪಯೋಗಕಾರಿಯಾಗಲಿದೆ. ಏರ್‌ಪೋರ್ಟ್ ಮತ್ತು ಟೆಕ್ ಕಾರಿಡರ್‌ಗಳ ಮಾರ್ಗದಲಲ್ಇ ಈ ಬಸ್‌ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ.

ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಇ-ಬಸ್
"ಒಎಚ್‌ಎಂ ಸಂಸ್ಥೆ ಎಸಿ ಇ-ಬಸ್‌ಗಳನ್ನು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಗುತ್ತಿಗೆ ಮಾದರಿ) ಮೇಲೆ ನಿರ್ವಹಿಸುತ್ತದೆ. ಈ ಒಪ್ಪಂದದಲ್ಲ ಬಿಎಂಟಿಸಿ ಸಂಸ್ಥೆಗೆ ಪ್ರತಿ ಕಿಮೀಗೆ 65.80 ರೂಪಾಯಿ ಪಾವತಿಸುತ್ತದೆ. ಮೂಲಮಾದರಿ ಬಸ್ ಎರಡು ಮೂರು ತಿಂಗಳಲ್ಲಿ ಬೆಂಗಳೂರು ತಲುಪುವ ನಿರೀಕ್ಷೆಯಿದೆ. ಮಾರ್ಚ್ 2025 ರೊಳಗೆ ಸಂಸ್ಥೆಯು ಎಲ್ಲಾ ಬಸ್‌ಗಳನ್ನು ತಲುಪಿಸುವ ನಿರೀಕ್ಷೆಯಿದೆ" ಎಂದು ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.
ಬಸ್ ನೀಡಲಿರುವ ಒಎಚ್‌ಎಂ ಸಂಸ್ಥೆಯೇ ಚಾಲಕರನ್ನು ನೇಮಿಸುತ್ತದೆ. ಬಸ್‌ಗಳನ್ನು ನಿರ್ವವಹಣೆ ಮಾಡುತ್ತದೆ. ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಹೊಂದಿಸುತ್ತದೆ. ಆದರೆ ಕಂಡಕ್ಟರ್‌ಗಳು ಮಾತ್ರ ಬಿಎಂಟಿಸಿ ನೇಮಿಸಲಿದೆ. ಟೆಂಡರ್ ದಾಖಲೆಗಳ ಪ್ರಕಾರ, ಆಯ್ದ ಸಂಸ್ಥೆಯು 400 ಎಂಎಂ ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದದ (ಜಿಸಿಸಿ) ಮಾದರಿಯಲ್ಲಿ ದಿನಕ್ಕೆ 225 ಕಿಮೀ ದೂರವನ್ನು ವರ್ಷಕ್ಕೆ 350 ದಿನಗಳವರೆಗೆ 12 ಕ್ಕಿಂತ ಹೆಚ್ಚು ವರ್ಷಗಳು ನಿರ್ವಹಿಸುತ್ತದೆ .

ಟೆಕ್ ಕಾರಿಡಾರ್‌ಗೆ ಹೊಸ ಬಸ್‌ಗಳು
ಟೆಕ್ ಕಾರಿಡಾರ್‌ಗಳನ್ನು ಸಂಪರ್ಕಿಸುವವ ವಜ್ರ ಮತ್ತು ವಿಮಾನ ನಿಲ್ದಾಣದ ಮಾರ್ಗಗಳಲ್ಲಿ ಓಡುವ ವಾಯು ವಜ್ರ ಹಳೆಯ ವೋಲ್ವೋ ಬಸ್‌ಗಳನ್ನು ಈ ಹೊಸ ಎಸಿ ಎಲೆಕ್ಟ್ರಿಕ್ ಬಸ್‌ಗಳು ಬಂದ ಬಳಿಕ ಬದಲಾಯಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023 ರ ಅಕ್ಟೋಬರ್‌ನಲ್ಲಿ 320 ಇ-ಬಸ್‌ಗಳಿಗೆ ರಾಜ್ಯ ಸರ್ಕಾರದಿಂದ 150 ಕೋಟಿ ರೂಪಾಯಿ ವಿಶೇಷ ನಿಧಿಯ ಅಡಿಯಲ್ಲಿ ಮೊದಲ ಟೆಂಡರ್ ಅನ್ನು ಕರೆಯಲಾಗಿದೆ.
ಮೊದಲ ಟೆಂಡರ್‌ಗೆ ಯಾವುದೇ ಬಿಡ್‌ದಾರರು ಇರಲಿಲ್ಲ ಬಳಿಕ ಎರಡನೇ ಟೆಂಡರ್‌ನಲ್ಲಿ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ (OGL) ನಿಂದ ಕೇವಲ ಒಂದು ಬಿಡ್ ಮಾತ್ರ ಬಂದಿತ್ತು. ಇ-ಬಸ್‌ಗಳನ್ನು ನಿರ್ವಹಿಸಲು ಪ್ರತಿ ಕಿಮೀಗೆ 85 ರೂಪಾಯಿ ಚಾರ್ಜ್ ಮಾಡಿತ್ತು. ಹೀಗಾಗಿ ಮತ್ತೆ ಮೂರನೇ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಒಎಚ್‌ಎಂ ಏಕೈಕ ಬಿಡ್ಡರ್ ಆಗಿ ಬಿಡ್ ಮಾಡಿತ್ತು. ಹೀಗಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಓಎಚ್‌ಎಂಗೆ ಟೆಂಡರ್ ನೀಡಲಾಗಿದೆ.
ಸದ್ಯ ಬಿಎಂಟಿಸಿ ಬಳಿ ಒಟ್ಟು 593 ವೋಲ್ವೋ ಬಸ್ಸುಗಳು ಇವೆ. ವಜ್ರ ಮತ್ತು ವಾಯು ವಜ್ರ ಮಾರ್ಗಗಳಲ್ಲಿ 474 ದೈನಂದಿನ ವೇಳಾಪಟ್ಟಿಗಳನ್ನು ಹೊಂದಿದೆ. ಬಿಎಂಟಿಸಿಯಲ್ಲಿ ವೋಲ್ವೋ ಬಸ್‌ಗಳ ಸರಾಸರಿ ಮೈಲೇಜ್ ಸುಮಾರು 2.5-3 kmph. ವೋಲ್ವೋ ಬಸ್‌ಗಳ ಕಾರ್ಯಾಚರಣೆಯ ವೆಚ್ಚ ಪ್ರತಿ ಕಿ.ಮೀಗೆ ಸುಮಾರು 90 ರೂಪಾಯಿ. ವಜ್ರ ಮಾರ್ಗಗಳಲ್ಲಿ ಪ್ರತಿ ಕಿ.ಮೀ.ಗೆ ಗಳಿಕೆಯು ಪ್ರತಿ ಕಿ.ಮೀ.ಗೆ 50 ರೂ.ಗಳಾಗಿದ್ದರೆ, ವಾಯು ವಜ್ರ ಮಾರ್ಗಗಳಲ್ಲಿ ಪ್ರತಿ ಕಿ.ಮೀ.ಗೆ 70 ರೂಪಾಯಿ ಗಳಿಸುತ್ತಿದೆ. ಬೆಂಗಳೂರಿನಲ್ಲಿ ತಾಪಮಾನ ಹೆಚ್ಚುತ್ತಿರುವ ಕಾರಣ ಎಸಿ ಬಸ್‌ಗಳಿಗೆ ಬೇಡಿಕೆಯಿದ್ದರೂ, ಮಹಿಳಾ ಪ್ರಯಾಣಿಕರಿಗೆ ಶಕ್ತಿ ಉಚಿತ ಬಸ್ ಪ್ರಯಾಣವು ನಾನ್-ಎಸಿ ಬಸ್‌ಗಳಲ್ಲಿ ಮಾತ್ರ ಅನ್ವಯಿಸುತ್ತದೆ.












Click it and Unblock the Notifications