Double Decker Buses: ಬೆಂಗಳೂರಿಗರ ಡಬಲ್ ಡೆಕ್ಕರ್ ಕನಸು ಮತ್ತೆ ಮುಂದಕ್ಕೆ!
ಬೆಂಗಳೂರು, ಮಾರ್ಚ್ 18: ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಪ್ರಯಾಣ ಮಾಡಲು ಮತ್ತಷ್ಟು ದಿನಗಳನ್ನು ಕಾಯಬೇಕಿದೆ. ಏಕೆಂದರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎರಡನೇ ಬಾರಿಗೆ ಡಬಲ್ ಡೆಕ್ಕರ್ ಬಸ್‌ಗಳಿಗೆ ಟೆಂಡರ್ ಕರೆದಿದೆ.
ಬಿಎಂಟಿಸಿ ಅಧಿಕಾರಿಗಳು ಉಲ್ಲೇಖಿಸಿದ ಹೆಚ್ಚಿನ ದರಗಳು ಟೆಂಡರ್ ಮರುವಿತರಣೆಗೆ ಕಾರಣವೆಂದು ಹೇಳಲಾಗುತ್ತಿದೆ. ಹೀಗಾಗಿ ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಓಡಾಡುವ ತಮ್ಮ ಆಸೆಯನ್ನು ಕೆಲ ದಿನಗಳು ಮುಂದಕ್ಕೆ ಹಾಕಬೇಕಿದೆ. ಫೆಬ್ರವರಿ 2023 ರಲ್ಲಿ, ಬಿಎಂಟಿಸಿ ಹೆಚ್ಚು ವಿಳಂಬದ ನಂತರ ಹತ್ತು ಡಬಲ್ ಡೆಕ್ಕರ್ ಎಸಿ ಬಸ್‌ಗಳಿಗೆ ಟೆಂಡರ್ ಕರೆದಿತ್ತು. ಇದೀಗ ಮತ್ತೆ ಬಿಡ್ ದಾರರು ಹೆಚ್ಚಿನ ದರ ನಮೂದಿಸಿದ್ದರಿಂದ ಬಿಎಂಟಿಸಿ ಟೆಂಡರ್ ಕರೆದಿದೆ.

ಡಬಲ್ ಡೆಕ್ಕರ್ ಬಸ್‌ಗಳಿಗೆ, ಜಿಸಿಸಿ ಮಾದರಿಯಲ್ಲಿ ಈ ಬಸ್‌ಗಳನ್ನು ಖರೀದಿಸುತ್ತಿರುವ ಬಿಎಂಟಿಸಿ ಕೇವಲ ಒಂದೇ ಬಿಡ್ ಸ್ವೀಕರಿಸಿದೆ. "ಕಳೆದ ಟೆಂಡರ್‌ನಲ್ಲಿ ನಾವು ಡಬಲ್ ಡೆಕ್ಕರ್‌ಗಳಿಗೆ ಒಂದೇ ಬಿಡ್ ಮಾತ್ರ ಬಂದಿದೆ. ಚೆನ್ನೈ ಮೂಲದ ಒಎಚ್‌ಎಂ ಗ್ಲೋಬಲ್ ಮೊಬಿಲಿಟಿ ಲಿಮಿಟೆಡ್ ಮಾತ್ರ ಬಿಡ್ ಹಾಕಿದೆ. ಆದರೆ, ಅದು ಉಲ್ಲೇಖಿಸಿರುವ ದರವು ತುಂಬಾ ಹೆಚ್ಚಾಗಿದೆ. ಬಿಡ್‌ದಾರರು ಪ್ರತಿ ಕಿ.ಮೀ.ಗೆ 102.5 ರೂಪಾಯಿ ಬಿಡ್ ಮಾಡಿದ್ದಾರೆ. ಹಾಗಾಗಿ ಟೆಂಡರ್ ಅನ್ನು ಮತ್ತೆ ಕರೆಯಬೇಕಾಯಿತು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಬೆಂಗಳೂರು ಮಿರರ್ ಉಲ್ಲೇಖಿಸಿದೆ.
ಡಬಲ್ ಡೆಕ್ಕರ್ ಬಸ್‌ಗಳನ್ನು ಬಿಎಂಟಿಸಿಯು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (ಎನ್‌ಸಿಎಪಿ) ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಿಯುಎಲ್‌ಟಿ) ರಾಜ್ಯ ನಗರ ಸಾರಿಗೆ ನಿಧಿ (ಎಸ್‌ಯುಟಿಎಫ್) ಅಡಿಯಲ್ಲಿ ಖರೀದಿಸುತ್ತಿದೆ.

ಟೆಂಡರ್ ಪ್ರಕಾರ, ಬಿಎಂಟಿಸಿ ಈ ಬಸ್‌ಗಳನ್ನು ಆಯ್ದ ಮಾರ್ಗಗಳಲ್ಲಿ ಓಡಿಸಲಿದೆ. 350 ದಿನಗಳಲ್ಲಿ ದಿನಕ್ಕೆ 150 ಕಿಲೋಮೀಟರ್ ಡಬಲ್ ಡೆಕ್ಕರ್ ಬಸ್‌ಗಳು ಸೇವೆ ನೀಡಲಿವೆ. ಒಂದು ವರ್ಷದಲ್ಲಿ 52,500 ಕಿಮೀ ಓಡಾಡಿದಂತಾಗುತ್ತದೆ. ಅಂದಾಜಿನ ಪ್ರಕಾರ, ಪ್ರತಿ ಡಬಲ್ ಡೆಕ್ಕರ್ ಬಸ್ ಒಂದೇ ಬಾರಿಗೆ 65 ಪ್ರಯಾಣಿಕರಿಗೆ ಸೇವೆ ನೀಡಲಿದೆ.
ಪ್ರಸ್ತುತ, ಬಿಎಂಟಿಸಿ ಈ ಬಸ್‌ಗಳನ್ನು ಮೆಜೆಸ್ಟಿಕ್‌ನಿಂದ ಶಿವಾಜಿನಗರ, ಶಿವಾಜಿನಗರದಿಂದ ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ನಿಂದ ಅತ್ತಿಬೆಲೆಗೆ ಓಡಿಸಲು ಪ್ರಸ್ತಾಪಿಸಿದೆ. ಚಾರ್ಜಿಂಗ್ ಸೇರಿ ಇತರೆ ಮೂಲಸೌಕರ್ಯಗಳಿಗಾಗಿ ಬಿಎಂಟಿಸಿ ಸುಭಾಷ್ ನಗರ ಡಿಪೋವನ್ನು ಆಯ್ಕೆ ಮಾಡಿದೆ. 2023 ರಲ್ಲಿ ರಾಜ್ಯ ಸರ್ಕಾರವು 24 ಕೋಟಿ ರೂಪಾಯಿಗಳ ಹಂಚಿಕೆ ಮಾಡಿ ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಅನುಮತಿ ನೀಡಿತ್ತು.












Click it and Unblock the Notifications