Get Updates
Get notified of breaking news, exclusive insights, and must-see stories!

BMTC Metro Feeder Bus: ಸಣ್ಣ ಮೆಟ್ರೋ ಫೀಡರ್ ಬಸ್‌ ಸೇವೆಗಾಗಿ ಇನ್ನೂ ಕಾಯಬೇಕು!

ಬೆಂಗಳೂರು, ಮಾರ್ಚ್ 27: ಮೆಟ್ರೋ ಪ್ರಯಾಣಿಕರಿಗೆ ಸಹಾಯಕವಾಗಲು ಮತ್ತಷ್ಟು ಮೆಟ್ರೋ ಫೀಡರ್‌ ಬಸ್‌ಗಳನ್ನು ಬಿಡುವ ಬಿಎಂಟಿಸಿ ಯೋಜನೆಗೆ ವಿಳಂಬ ಉಂಟಾಗುತ್ತಲೆ ಇದೆ. ಮೆಟ್ರೋ ಫೀಡರ್ ಮಾರ್ಗಗಳಿಗಾಗಿ 120 ಬಸ್‌ಗಳನ್ನು ಬಾಡಿಗೆಗೆ ಪಡೆಯಲು ಸಾರಿಗೆ ಅಧಿಕಾರಿಗಳು ಮೂರು ಬಾರಿ ಟೆಂಡರ್‌ಗಳನ್ನು ಕರೆಯಬೇಕಾಗಿದೆ.

ಮೆಟ್ರೋ ಫೀಡರ್ ಬಸ್‌ಗಳ ಜೊತೆಗೆ 320 ಎಸಿ ಇ-ಬಸ್‌ಗಳನ್ನು ಬಾಡಿಗೆಗೆ ಪಡೆಯಲು ಎರಡು ಟೆಂಡರ್‌ಗಳನ್ನು ಮತ್ತು 10 ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳನ್ನು ಖರೀದಿಸಲು ಮೂರು ಟೆಂಡರ್‌ಗಳನ್ನು ನಡೆಸಿದೆ. ಡಿಸೆಂಬರ್ 2023 ಮತ್ತು ಮಾರ್ಚ್ ಆರಂಭದಲ್ಲಿ 120 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ತನ್ನ ಮೆಟ್ರೋ ಫೀಡರ್ ನೆಟ್‌ವರ್ಕ್ ಅನ್ನು ಹೆಚ್ಚಿಸಲು ಟೆಂಡರ್‌ಗಳನ್ನು ಆಹ್ವಾನಿಸಿದ್ದಾರೆ.

BMTC small bus metro feeder network runs into delay

ಸಣ್ಣ ಮೆಟ್ರೋ ಫೀಡರ್ ಬಸ್‌ಗಳು

ಈ ಒಂಬತ್ತು-ಮೀಟರ್ ಉದ್ದದ, 900 ಎಂಎಂ ಎತ್ತರದ ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದದಲ್ಲಿ (ಜಿಸಿಸಿ) ಬಾಡಿಗೆಗೆ ಪಡೆಯುವುದು ಬಿಎಂಟಿಸಿ ಯೋಜನೆಯಾಗಿತ್ತು. ಇಲ್ಲಿ ಬಿಎಂಟಿಸಿಯು ತಯಾರಕರಿಗೆ ಪ್ರತಿ ಕಿಲೋಮೀಟರ್ ಆಧಾರದ ಮೇಲೆ ಮಾತ್ರ ಪಾವತಿಸುತ್ತದೆ. ತಯಾರಕರು ಬಸ್ ಅನ್ನು ನೋಡಿಕೊಳ್ಳಬೇಕಿದೆ. ಸಂಸ್ಥೆ ಚಾಲಕರನ್ನು ಒದಗಿಸುವ ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ಹೊಂದಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

ಈ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಂ (NCAP) ಮತ್ತು ರಾಜ್ಯ ನಗರ ಸಾರಿಗೆ ನಿಧಿ (SUTF) ನಿಂದ ಹಣವನ್ನು ಬಳಸುತ್ತದೆ. ಆದರೆ, ಎರಡು ಬಾರಿ ಕರೆದ ಟೆಂಡರ್‌ಗಳಲ್ಲಿಯೂ ಒಳ್ಳೆಯ ಟೆಂಡರ್ ಬಂದಿಲ್ಲ. ಹೀಗಾಗಿಯೇ ಮಾರ್ಚ್ 15 ರಂದು ಮೂರನೆ ಟೆಂಡರ್ ಕರೆದಿದೆ. ಬಿಡ್‌ಗಳನ್ನು ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನಾಂಕವಾಗಿದೆ.

ಯಾವುದೇ ಎಲೆಕ್ಟ್ರಿಕ್ ಬಸ್ ತಯಾರಕರು ಈ ಟೆಂಡರ್‌ನಲ್ಲಿ ಆಸಕ್ತಿ ತೋರಿಸಲಿಲ್ಲ. ಹಿಂದಿನ ಟೆಂಡರ್ ಬರುತ್ತಿಲ್ಲ, ಆದ್ದರಿಂದ ನಾವು ಹೊಸದನ್ನು ಕರೆಯಬೇಕಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ಅವರು ಡೆಕ್ಕನ್ ಹೆರಾಲ್ಡ್‌ಗೆ ಮಾಹಿತಿ ನೀಡಿದ್ದಾರೆ.

BMTC small bus metro feeder network runs into delay

ಇನ್ನು, ಪಿಎಂ ಇ-ಬಸ್ ಸೇವಾ ಯೋಜನೆಯಡಿಯಲ್ಲಿ ಅವರು ಕಂಪನಿಗಳು ಬೃಹತ್ ಟೆಂಡರ್ ಪಡೆದಿರುವ ಕಾರಣ ತಯಾರಕರು ಆಸಕ್ತಿ ತೋರಿಸುತ್ತಿಲ್ಲ. ವಿವಿಧ ರಾಜ್ಯ ಸಾರಿಗೆ ಸಂಸ್ಥೆಗಳಿಗೆ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲು ಕೇಂದ್ರವು ಆಗಸ್ಟ್ 2023 ರಲ್ಲಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಇತರ 10 ನಗರಗಳು ಇಂಟರ್‌ ಸಿಟಿ ಬಸ್‌ಗಳನ್ನು ಪಡೆಯುತ್ತವೆ. ಪ್ರಸಿದ್ಧ ಎಲೆಕ್ಟ್ರಿಕ್ ಬಸ್ ತಯಾರಕರಾದ ಸ್ವಿಚ್ ಮೊಬಿಲಿಟಿ, ಜೆಬಿಎಂ ಗ್ರೂಪ್ ಮತ್ತು ಒಲೆಕ್ಟ್ರಾ ಈ ಯೋಜನೆಯಡಿಯಲ್ಲಿ ಬಸ್‌ಗಳನ್ನು ಪೂರೈಸಲು ಭಾರಿ ಆರ್ಡರ್‌ಗಳನ್ನು ಪಡೆದಿವೆ. ಹೀಗಾಗಿ ಬಿಎಂಟಿಸಿಯ ಟೆಂಡರ್ನಲ್ಲಿ ಕಂಪನಿಗಳು ಆಸಕ್ತಿ ತೋರಿಸುತ್ತಿಲ್ಲ.

ಬಿಎಂಟಿಸಿಯ ಹೊಸ ಟೆಂಡರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಭರವಸೆ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿ 43 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡ 46 ಫೀಡರ್ ಮಾರ್ಗಗಳಲ್ಲಿ 158 ಬಸ್‌ಗಳನ್ನು ನಿರ್ವಹಿಸುತ್ತದೆ. ಪ್ರತಿದಿನ 90,000 ರಿಂದ ಒಂದು ಲಕ್ಷ ಪ್ರಯಾಣಿಕರು ಫೀಡರ್ ಬಸ್ ಸೇವೆಯನ್ನು ಬಳಸುತ್ತಾರೆ. ನಿಗಮವು ಮುಂದಿನ ಅವಧಿಯಲ್ಲಿ 300 ಮೆಟ್ರೋ ಫೀಡರ್ ಬಸ್‌ಗಳನ್ನು ಓಡಿಸಲು ಯೋಜಿಸಿದೆ. ಹೊಸ ಬಸ್‌ಗಳು ಕಿರಿದಾದ ರಸ್ತೆಗಳಲ್ಲಿಯೂ ಸೇವೆ ನೀಡುವ ನಿರೀಕ್ಷೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+