ಬಿಎಂಟಿಸಿಗೆ ಭಾರಿ ಆಘಾತ, ಟ್ರಿಪ್‌ಗಳ ಸಂಖ್ಯೆ ಕುಸಿತ?
ಕನ್ನಡಿಗರ ರಾಜಧಾನಿ ಬೆಂಗಳೂರಿಗೆ ಬಿಎಂಟಿಸಿ ಒಂದು ಹೆಮ್ಮೆ ತಂದಿದೆ. ಐಟಿ & ಬಿಟಿಯ ತವರು ಬೆಂಗಳೂರಲ್ಲಿ ಸಂಚಾರ ವ್ಯವಸ್ಥೆಗೆ ಬಿಎಂಟಿಸಿ ನೀಡುತ್ತಿರುವ ಕೊಡುಗೆ ದೊಡ್ಡದು. ಆದರೆ ಇದೇ ಬಿಎಂಟಿಸಿ ಕುರಿತು ಇದೀಗ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕಳೆದ, ಕೆಲವು ವರ್ಷಗಳಲ್ಲಿ ಬಿಎಂಟಿಸಿ ಟ್ರಿಪ್‌ಗಳ ಸಂಖ್ಯೆ ಭಾರಿ ಕುಸಿತ ಕಾಣುತ್ತಿದೆಯಂತೆ.
ಹೌದು, ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು ಇದರಿಂದ ಸರ್ಕಾರಿ ಸಾರಿಗೆಗೆ ಸಮಸ್ಯೆ ಆಗುತ್ತಿದೆ ಎಂಬ ಆರೋಪಗಳು ಇವೆ. ಈ ಆರೋಪ & ಹೇಳಿಕೆಗೆ ಪುಷ್ಠಿ ನೀಡುವಂತೆ ಇದೀಗ ಆಘಾತಕಾರಿ ಸುದ್ದಿ ಹೊರಬಿದ್ದಿದೆ. 2023 & 24ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ 1 ಕೋಟಿ ಮೀರಿದ ಕಾರಣಕ್ಕೆ ಈಗ ಬಿಎಂಟಿಸಿ ಕಾರ್ಯಾಚರಣೆ ಮೇಲೆ ಕೂಡ ಪ್ರಭಾವ ಉಂಟಾಗಿದೆ ಎಂಬ ಮಾತು ಕೇಳಿಬಂದಿದೆ.

ಸಿಬ್ಬಂದಿ ಕೊರತೆ ಕಾಡುತ್ತಿದೆಯಾ?
ಬೆಂಗಳೂರಿನಲ್ಲಿ ಕೋಟ್ಯಂತರ ಜನರು ವಾಸ ಮಾಡುತ್ತಿದ್ದು ವಲಸಿಗರ ಸಂಖ್ಯೆಯೇ ಹೆಚ್ಚು ಎನ್ನಬಹುದು. ಹೀಗಾಗಿ ಬೆಂಗಳೂರಿನಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳಿಗೆ ಭಾರಿ ಬೇಡಿಕೆ ಕೂಡ ಇದೆ. ಹೀಗಾಗಿ ಸರ್ಕಾರ ಕೂಡ ಸರ್ಕಾರಿ ಸಾರಿಗೆ ಸಂಸ್ಥೆ ಅಭಿವೃದ್ಧಿಗೆ ಒತ್ತು ನೀಡುತ್ತಲಿದ್ದು ಈಗಾಗಲೇ ಸಾವಿರ ಸಾವಿರ ಬಸ್ ಖರೀದಿ ಮಾಡಿದೆ. ಹೀಗಿದ್ದಾಗಲೂ ಬೆಂಗಳೂರಲ್ಲಿ ಮಾತ್ರ ಬಿಎಂಟಿಸಿ ಕಾರ್ಯಾಚರಣೆ ಮೇಲೆ ಖಾಸಗಿ ವಾಹನಗಳ ಪ್ರಭಾವ ಹೆಚ್ಚಾಗುತ್ತಿದೆ. ಬೆಂಗಳೂರು ನಗರದಲ್ಲಿ ಇದೀಗ ವಿದ್ಯುತ್ ಚಾಲಿತ ಬಸ್‌ಗಳು ಸೇರಿದಂತೆ ಒಟ್ಟು 1900 ಬಸ್‌ಗಳನ್ನು ಸಂಸ್ಥೆಗೆ ಸೇರಿಸಲು ತಯಾರಿ ಜೋರಾಗಿದೆ. ಈ ಮೂಲಕ ಜನರಿಗೆ ಅನುಕೂಲ ಮಾಡಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸುತ್ತಿದೆ. ಹೀಗಿದ್ದರೂ, ಬಿಎಂಟಿಸಿಗೆ ಸಿಬ್ಬಂದಿ ಕೊರತೆ & ಖಾಸಗಿ ವಾಹನಗಳ ಸಮಸ್ಯೆ ದೊಡ್ಡದಾಗಿದೆ.
ಟ್ರಿಪ್‌ಗಳ ಸಂಖ್ಯೆಯಲ್ಲಿ ಕುಸಿತ?
ಬಡವರು, ಮಧ್ಯಮ ವರ್ಗದವರ ಪಾಲಿಗೆ ಬಿಎಂಟಿಸಿ ಪುಷ್ಪಕ ವಿಮಾನದಂತೆ ಸರಿ. ಯಾಕೆ ಅಂದ್ರೆ ಸ್ಥಿತಿವಂತರು ತಮ್ಮದೇ ಖಾಸಗಿ ವಾಹನದಲ್ಲಿ ನೆಮ್ಮದಿಯಾಗಿ ಓಡಾಡುತ್ತಾರೆ. ಆದರೆ ಬಡವರು, ಮಧ್ಯಮ ವರ್ಗದವರು ಸರ್ಕಾರಿ ಸಾರಿಗೆಯನ್ನ ಅವಲಂಬಿಸಿ ಜೀವನ ನಡೆಸುತ್ತಾ ಬದುಕಿನ ಬಂಡಿ ತಳ್ಳುತ್ತಿದ್ದಾರೆ. ಆದರೂ ಸಾರ್ವಜನಿಕ ಸಾರಿಗೆ ಬಸ್‌ಗಳ ಸಂಖ್ಯೆ ಜೊತೆಯಲ್ಲೇ ಟ್ರಿಪ್‌ಗಳ ಸಂಖ್ಯೆ ಕೂಡ ಕುಸಿಯುತ್ತಿರುವುದು ಆತಂಕ ಸೃಷ್ಟಿಸಿದೆ.
2019 & 20ರಲ್ಲಿ 6,159 ರಷ್ಟು ಇದ್ದ ಟ್ರಿಪ್‌ಗಳ ಸಂಖ್ಯೆ ಇದೀಗ 5,639ಕ್ಕೆ ಕುಸಿತವನ್ನ ಕಂಡಿದೆ. ಇದು ಎಸಿ ಬಸ್ ಮೇಲೆ ನೇರ ಪರಿಣಾಮ ಬೀರಿದೆ. ಹೀಗಿದ್ದರೂ ಕರ್ನಾಟಕ ಸರ್ಕಾರವು 2023ರ ಜೂನ್‌ನಲ್ಲಿ ಶಕ್ತಿ ಯೋಜನೆ ಘೋಷಣೆ ಮಾಡಿದ ನಂತರ, ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಜನರ ಸಂಖ್ಯೆ ಸಂಖ್ಯೆ 6-7 ಲಕ್ಷದಷ್ಟು ಹೆಚ್ಚಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಎಂಟಿಸಿ ಟ್ರಿಪ್‌ಗಳ ಸಂಖ್ಯೆ ಸುಧಾರಣೆ ಕಾಣುವ ನಿರೀಕ್ಷೆ ಇದೆ. ಹಾಗೇ ಸಿಬ್ಬಂದಿ ಕೊರತೆಯು ಕೂಡ ನೀಗುವ ನಿರೀಕ್ಷೆ ಇದೆ.












Click it and Unblock the Notifications