Metro new feeder buses: ಈ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ಫೀಡರ್ ಬಸ್ ಸೇವೆ: ವಿವರ

ಬೆಂಗಳೂರು, ಮಾರ್ಚ್ 04: ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ನಿಲ್ದಾಣಗಳಿಗೆ ಬಸ್ ಸಾರಿಗೆ ಸೇವೆ ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮತ್ತೆ ಹೊಸ ಮಾರ್ಗಗಳಿಗೆ ಹೆಚ್ಚುವರಿ ಟ್ರಿಪ್‌ಗಳನ್ನು ಹೊಡೆಯುತ್ತಿದೆ.

ಸದ್ಯ ಬೆಂಗಳೂರಿನ ನಮ್ಮ ಮೆಟ್ರೋ ಜಾಲ ವ್ಯಾಪ್ತಿಯ ಸುಮಾರು 50ಕ್ಕೂ ಅಧಿಕ ಮೆಟ್ರೋ ನಿಲ್ದಾಣಗಳಲ್ಲಿ ಹಲವು ನಿಲ್ದಾಣಗಳಿಗೆ ಬಿಎಂಟಿಸಿ ಸೇವೆ ನೀಡಲಾಗುತ್ತಿದೆ. ಇದೀಗ ಹೆಚ್ಚುವರಿ ಬಸ್ ಟ್ರಿಪ್‌ಗಳನ್ನು ಹೊಸ ಮಾರ್ಗದಲ್ಲಿ ಬಿಡಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

Namma Metro BMTC New Metro Feeder Bus Service Start from Today Know Routes

ಮೆಟ್ರೋ ಫೀಡರ್ (MF) ಬಸ್ 15A ಬಸ್ ಆರ್‌ವಿ ಡೆಂಟಲ್ ಕಾಲೇಜು, ಪುಟ್ಟೇನಹಳ್ಳಿ ಕ್ರಾಸ್, ಬ್ರಿಗೇಡ್ ಮಿಲೇನಿಯಮ್ ಮತ್ತು ಕೊತ್ತನೂರು ದಿನ್ನೆ ಮಾರ್ಗವಾಗಿ ಜಂಬೂ ಸವಾರಿ ದಿನ್ನೆಗೆ ಜೆಪಿ ನಗರ ಮೆಟ್ರೋ ನಿಲ್ದಾಣವರೆಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಎರಡು ಬಸ್‌ಗಳು ದಿನಕ್ಕೆ ಎರಡೂ ಮಾರ್ಗಗಳಲ್ಲಿ 40 ಟ್ರಿಪ್‌ಗಳನ್ನು ಹೊಡೆಯಲಿದೆ.

ಈ ಮಾರ್ಗಗಳಲ್ಲಿ ಬಸ್ ಸಂಚಾರ

ಮೆಟ್ರೋ ಫೀಡರ್ (MF) 16 ಬಸ್‌ ಶಾಂತಿನಗರದ ಟಿಟಿಎಂಸಿ ಮೂಲಕ ಕಾರ್ಪೊರೇಷನ್ ಸರ್ಕಲ್, ಕೆ.ಆರ್ ಮಾರುಕಟ್ಟೆ ಹಾದು ಮೈಸೂರು ರಸ್ತೆ ಮೆಟ್ರೊ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್, ಶ್ರೀನಿವಾಸನಗರ, ಉತ್ತರ ರಸ್ತೆ, ಲಾಲ್‌ಬಾಗ್ ಪಶ್ಚಿಮ ಗೇಟ್ ಮತ್ತು ಲಾಲ್‌ಬಾಗ್ ಉದ್ಯಾನ ಮುಖ್ಯದ್ವಾರದ ಮೂಲಕ ನಾಲ್ಕು ಬಸ್‌ಗಳು ದಿನಕ್ಕೆ ಎರಡೂ ಕಡೆ 39 ಟ್ರಿಪ್‌ ಹೊಡೆಯಲಿವೆ.

Namma Metro BMTC New Metro Feeder Bus Service Start from Today Know Routes

ಮೆಟ್ರೋ ಫೀಡರ್ (MF) 16ಎ ಬಸ್‌ ಶಾಂತಿನಗರ ಟಿಟಿಎಂಸಿಯಿಂದ ಶಾಂತಿನಗರ ಟಿಟಿಎಂಸಿಗೆ ಲಾಲ್‌ಬಾಗ್ ಮುಖ್ಯದ್ವಾರ, ಲಾಲ್‌ಬಾಗ್ ಪಶ್ಚಿಮ ಗೇಟ್, ಉತ್ತರ ರಸ್ತೆ, ಶ್ರೀನಿವಾಸನಗರ, ಹೊಸಕೆರೆಹಳ್ಳಿ ಕ್ರಾಸ್, ಮೈಸೂರು ರಸ್ತೆ ಮೆಟ್ರೋ ನಿಲ್ದಾಣ, ಕೆ.ಆರ್ ಮಾರುಕಟ್ಟೆ ಹಾಗೂ ಕಾರ್ಪೊರೇಷನ್ ವೃತ್ತದ ಮೂಲಕ ನಾಲ್ಕು ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಪ್ರತಿನಿತ್ಯ ಎರಡೂ ಕಡೆಗಳಲ್ಲಿ 40 ಟ್ರಿಪ್‌ಗಳನ್ನು ನಡೆಸಲಿದೆ.

ಪ್ರಯಾಣಿಕರಿಗೆ ಅನುಕೂಲ

ಈ ಹೆಚ್ಚುವರಿ ಮಾರ್ಗಗಳಲ್ಲಿ ಬಸ್ ಸಂಚಾರದಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಿದೆ. ಹೆಚ್ಚುವರಿ ಟ್ರಿಪ್‌ಗಳಿಂದ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ತಮ್ಮ ಗಮ್ಯ ಸ್ಥಾನಗಳಿಗೆ ತಲುಪಲು ಸಾಧ್ಯವಾಗುತ್ತಿದೆ. ಹೆಚ್ಚುವರಿ ಬಸ್ ಸೇವೆಯು ಇಂದಿನಿಂದಲೇ ಆರಂಭವಾಗಿದೆ ಎಂದು ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಬೆಂಗಳೂರಿನಲ್ಲಿ 121 ಫಿಡರ್ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದನ್ನು ಶೀಘ್ರವೇ 300 ಬಸ್‌ಗಳಿಗೆ ಏರಿಕೆ ಮಾಡಲು BMRCL ಮತ್ತು BMTC ಚಿಂತನೆ ನಡೆಸಿದೆ. ಅದರ ಭಾಗವಾಗಿಯೇ ಈ ಹೊಸ ಮಾರ್ಗಗಳಲ್ಲಿ ಬಸ್ ಓಡಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+