ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಗಳಿಂದ ಹೊರಗೆ ಬರಬೇಡಿ: ಜಪಾನ್ ಅಧಿಕೃತ ಆದೇಶ

By Srinath
|
Google Oneindia Kannada News

ಟೋಕಿಯೊ, ಮಾ. 15: ಭೀಕರ ಸುನಾಮಿಯಿಂದ ಇಲ್ಲಿನ ಫುಕೋಶಿಮಾ ಅಣು ಸ್ಥಾವರ ಶಿಥಿಲಗೊಂಡಿದ್ದು, ಒಂದೊಂದೇ ಘಟಕಗಳು ಸ್ಫೋಟಗೊಳ್ಳುತ್ತಿವೆ. ವಿಕಿರಣ ಭೀತಿ ಆಧಿಕವಾಗುತ್ತಿದೆ. ಸುನಾಮಿ ಮಹಾದುರಂತ ಸಂಭವಿಸಿ ನಾಲ್ಕು ದಿನಗಳು ಕಳೆದಿದ್ದು, ಇಂದು (ಮಾರ್ಚ್ 15) ಮೂರನೇ ರಿಯಾಕ್ಟರ್ ಸ್ಫೋಟಗೊಂಡಿದೆ. ನಾಲ್ಕನೆಯ ಘಟಕಕ್ಕೆ ಬೆಂಕಿ ಆವರಿಸಿಕೊಂಡಿದ್ದು, ಯಾವುದೇ ಕ್ಷಣ ಅದೂ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಮಂಜುಮುಸುಕಿದ ಗಾಳಿ ಟೋಕಿಯೋದತ್ತ ಬೀಸುತ್ತಿದೆ. ಇದರಿಂದ ರಾಜಧಾನಿಯ ಮೇಲೆ ಆತಂಕದ ಮೋಡಗಳು ದಟ್ಟೈಸಿವೆ. ಮನೆಗಳಲ್ಲಿಯೇ ಸುರಕ್ಷಿತವಾಗಿರುವಂತೆ ಸುತ್ತಮುತ್ತಲ ಜನರಿಗೆ ಜಪಾನ್ ಸರಕಾರ ಆದೇಶಿಸಿದೆ.

ಕರಾಳ ಶುಕ್ರವಾರ ಸಂಭವಿಸಿದ ಮಹಾ ಭೂಕಂಪ ಮತ್ತು ತದನಂತರದ ಸುನಾಮಿಯಿಂದಾಗಿ 10 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಅದರಿಂದ ಅವಾಂತರಕ್ಕೊಳಗಾಗಿದ್ದಾರೆ. ವಿಶ್ವದ ಮೂರನೇ ಅರ್ಥ ವ್ಯವಸ್ಥೆ ನೆಲಕಚ್ಚಿದೆ. ಈ ಸಂದರ್ಭದಲ್ಲಿ ಅಣು ವಿಕಿರಣ ನಾಲ್ಕು ಘಟಕಗಳಿಂದ ಹೊರಸೂಸುತ್ತಿದ್ದು ಜನರು ಮನೆಗಳೊಳಗೇ ಸುರಕ್ಷಿತವಾಗಿರಬೇಕು ಎಂದು ಪ್ರಧಾನಿ ನಾಟೊ ಕನ್ ಟಿವಿ ಪ್ರಸಾರ ಭಾಷಣದಲ್ಲಿ ದೇಶದ ಜನತೆಗೆ ಮನವಿ ಮಾಡಿದ್ದಾರೆ. ರಿಯಾಕ್ಟರ್-ಗಳನ್ನು ಸ್ಥಿರಗೊಳಿಸಿ, ಪರಿಸ್ಥಿತಿಯನ್ನು ತಹಬಂದಿಗೆ ತರಲು ಸುಮಾರು 50 ಅಧಿಕಾರಿಗಳು ಹರಸಾಹಸ ಪಡಸುತ್ತಿದ್ದಾರೆ. ಘಟಕಗಳು ಸ್ವಯಂ ಶೀತಲೀಕರಣಗೊಳ್ಳುವ ಶಕ್ತಿಯನ್ನು ಕಳೆದುಕೊಂಡಿವೆ. ಇದರಿಂದ ವಿಕಿರಣ ಒಂದೇ ಸಮನೆ ಹೊರಬರುತ್ತಿದೆ.

ಆರಂಭದಲ್ಲಿ ಕಂಡುಬಂದಿದ್ದ ವಿಕಿರಣಕ್ಕಿಂತ ಮಂಗಳವಾರ ಬೆಳಗ್ಗೆ 100 ಪಟ್ಟು ಅಧಿಕವಾಗಿದೆ. ಆತಂಕದ ವಿಷಯವೆಂದರೆ ಇದು ಇನ್ನೂ ಹೆಚ್ಚಾಗುವ ಲಕ್ಷಣಗಳಿವೆ. ಇದು ಹೀಗೇ ಮುಂದುವರಿದರೆ ನಿಜಕ್ಕೂ ಮಾರಕವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಎರಡನೇ ಮಹಾಯುದ್ಧದ ವೇಳೆ ಹಿರೋಶಿಮಾ ಮತ್ತು ನಾಗಸಾಕಿ ಅಣು ಬಾಂಬ್ ಸ್ಫೋಟಗಳಿಗೆ ತುತ್ತಾದ ಬಳಿಕ ಜಪಾನ್ ಎದುರಿಸುತ್ತಿರುವ ಭೀಕರ ಅಣು ದುರಂತ ಇದಾಗಿದೆ. 1986ರಲ್ಲಿ ಚೆರ್ನೊಬಿಲ್, ಉಕ್ರೇನ್ ಅಣುಸ್ಥಾವರ ಸ್ಫೋಟದ ಬಳಿಕ ವಿಶ್ವದಲ್ಲಿ ಬಂದೆರಗಿದ ದೊಡ್ಡ ದುರಂತವಿದು.

'ವಿಕಿರಣವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಇದೆ. ಆದ್ದರಿಂದ ಫುಕೋಶಿಮಾ ಸ್ಥಾವರದ 30 ಕಿ.ಮೀ. ಆಸುಪಾಸಿನಲ್ಲಿರುವ ದಯವಿಟ್ಟು ಮನೆಗಳಂದ ಆಚೆಗೆ ಬರಬೇಡಿ. ದಯವಿಟ್ಟು ಒಳಗೇ ಇದ್ದು ಬಿಡಿ. ದಯವಿಟ್ಟು ಕಿಟಕಿಗಳನ್ನು ಮುಚ್ಚಿ. ಗಾಳಿ ಒಳಬರದಂತೆ ದಯವಿಟ್ಟು ಎಚ್ಚರವಹಿಸಿ. ವೆಂಟಿಲೇಟರ್-ಗಳಿಗೆ ಚಾಲನೆ ನೀಡಲೇಬೇಡಿ' ಎಂದು ಸಂಪುಟ ಕಾರ್ಯದರ್ಶಿ ಯುಕಿಯೊ ಎಡಾನೊ ಅಪಾಯವಲಯದಲ್ಲಿನ ಜನರಲ್ಲಿ ಭಿನ್ನವಿಸಿಕೊಡಿದ್ದಾರೆ.

English summary
High levels of radiation leaked from a crippled nuclear plant in Fukushima in tsunami-ravaged Japan after a third reactor was rocked by an explosion Tuesday (March 15) and a fourth caught fire in a dramatic escalation of the 4-day-old catastrophe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X