ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!
ವಿಶ್ವದ ದೊಡ್ಡಣ್ಣ ಅಮೆರಿಕ ಯೋಜಿತ ದುಷ್ಕೃತ್ಯ ಆ ಮೊದಲ ಪರಮಾಣು ಸ್ಪೋಟ ವಿಶ್ವವನ್ನೇ ನಿಬ್ಬೆರಗಾಗಿಸಿತು. ಹತ್ತಾರು ಸಾವಿರ ಮಂದಿಯ ಮಾರಣಹೋಮಕ್ಕೆ ಕಾರಣವಾದ ಹಿರೋಶಿಮ ಹಾಗೂ ನಾಗಸಾಕಿ ಅಣು ಬಾಂಬ್ ಸ್ಪೋಟವು ಇಂದಿಗೂ ಕೂಡಾ ತನ್ನ ಛಾಪನ್ನು ಆ ಪ್ರದೇಶದಲ್ಲಿ ಉಳಿಸಿದೆ. ಆ ಪ್ರದೇಶದಲ್ಲಿ ಬದುಕುಳಿದವರಿಗೆ ಸಂಕಟ, ಸಮಸ್ಯೆಯನ್ನು ಮಾಯವಾಗದಂತೆ ಉಳಿಸಿದೆ. ಇಂದಿಗೂ ಹಿರೋಶಿಮಾದಲ್ಲಿ ಜನಿಸುವ ಮಕ್ಕಳು ಅಂಗ ಊನತೆಯನ್ನು ಹೊಂದಿರುತ್ತಾರೆ. ಅಂತಹ ಭೀಕರ ಪರಿಣಾಮವನ್ನು ಅಮೆರಿಕದ ಆ ಒಂದು ನಿರ್ಧಾರವು ಉಂಟು ಮಾಡಿದೆ.
ಈ ಘಟನೆಗೂ ಮುನ್ನ ಹಿರೋಶಿಮಾದ 1.5 ಕಿ.ಮೀ. ದೂರದಲ್ಲಿ ವಾಸವಿದ್ದ ಮಹಿಳೆ ಆ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ಇಂದಿಗೂ ಹಲವರನ್ನು ಕಾಡುತ್ತದೆ, "ರೆಡ್ ಕ್ರಾಸ್ ಆಸ್ಪತ್ರೆಯು ಮೃತ ದೇಹಗಳಿಂದ ತುಂಬಿತ್ತು. ಮನುಷ್ಯನ ಸಾವು ಗಂಭೀರ ಮತ್ತು ದುಃಖದ ಸಂಗತಿಯಾಗಿದೆ. ಆದರೆ ನನಗೆ ಆ ಬಗ್ಗೆ ಯೋಚನೆ ಮಾಡಲು ಕೂಡಾ ಸಮಯ ಇರಲಿಲ್ಲ. ನಾನು ಮೂಳೆಗಳನ್ನು ಸಂಗ್ರಹಿಸಿ ಅವರ ದೇಹಗಳನ್ನು ವಿಲೇವಾರಿ ಮಾಡಬೇಕಾಗಿತ್ತು," ಎಂದು ಆ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ್ದ ಮಹಿಳೆ ಹೇಳಿದ್ದಾರೆ. "ಇದು ನಿಜವಾಗಿಯೂ ಜೀವಂತ ನರಕವಾಗಿತ್ತು, ಕ್ರೂರ ದೃಶ್ಯಗಳು ಇನ್ನೂ ನನ್ನ ಮನಸ್ಸಿನಲ್ಲಿ ಉಳಿದಿವೆ," ಎಂದು ಕೂಡಾ ಆ ಮಹಿಳೆ ತಿಳಿಸಿದ್ದಾರೆ.
ಜಪಾನಿ ಭಾಷೆಯಲ್ಲಿ ಹಿಬಾಕುಶಾ (ಬಾಂಬ್ ದಾಳಿಯಿಂದ ಪರಿಣಾಮ ಎದುರಿಸುತ್ತಿರುವ ಜನರು) ಎಂದು ಕರೆಯಲ್ಪಡುವ ಹಿರೋಶಿಮಾದ ಜನರ ಬಗ್ಗೆ ಯುಎನ್‌ನ ನಿರಸ್ತ್ರೀಕರಣ ವ್ಯವಹಾರಗಳ ಕಚೇರಿ ನ್ಯೂಯಾರ್ಕ್‌ನಲ್ಲಿರುವ ಯುಎನ್ ಪ್ರಧಾನ ಕಛೇರಿಯಲ್ಲಿ ಒಂದು ಪ್ರದರ್ಶನವನ್ನು ರಚಿಸಿದೆ. ಅದು ಇದೀಗ ಮುಕ್ತಾಯಗೊಂಡಿದೆ. ತ್ರೀ ಕ್ವಾಟರ್ಸ್ ಆಫ್ ಎ ಸೆಂಚ್ಯೂರಿ ಆಫ್ಟರ್ ಹಿರೋಶಿಮ ಆಂಡ್ ನಾಗಸಾಕಿ: ದಿ ಹಿಬಾಕುಶಾ-ಬ್ರೇವ್ ಸರ್ವೈವರ್ಸ್ ವರ್ಕಿಂಗ್ ಎ ನ್ಯೂಕ್ಲಿಯರ್-ಫ್ರೀ ವರ್ಲ್ಡ್ ಎಂದು ಈ ಪ್ರದರ್ಶನಕ್ಕೆ ಹೆಸರು ನೀಡಲಾಗಿತ್ತು. (Three Quarters of a Century After Hiroshima and Nagasaki: The Hibakusha-Brave Survivors Working for a Nuclear-Free World). ಇದು ಆ ಮೊದಲ ಪರಮಾಣು ಬಾಂಬುಗಳಿಂದ (ಎ-ಬಾಂಬ್‌ಗಳು) ನಾಶಪಡಿಸಿದ ವಿನಾಶದ ಪ್ರದರ್ಶನವಾಗಿತ್ತು.

ಎತ್ತರ, ಗಾತ್ರ ನೋಡಿ ತನ್ನವರ ದೇಹ ಗುರುತಿಸುವ ಪರಿಸ್ಥಿತಿ!
ಜಪಾನ್‌ನಲ್ಲಿ ಬಾಂಬ್ ಸ್ಫೋಟದ ನಂತರ, ಹಿಬಾಕುಶಾ ಇತಿಹಾಸವು ಪುನರಾವರ್ತನೆಯಾಗದಂತೆ ತಡೆಯುವ ಉದ್ದೇಶದಿಂದ ತೀವ್ರ ತನಿಖೆಗಳನ್ನು ನಡೆಸಿತು. ಇಂದು ಸರಿಸುಮಾರು 83 ವರ್ಷಗಳಾಗಿದೆ ಈ ಘಟನೆ ನಡೆದು. ಆದರೆ ಇಂದಿಗೂ ಕೂಡಾ ಈ ಘಟನೆಯ ಪರಿಣಾಮವು ಕೊನೆಯಾಗಿಲ್ಲ. ಸಂಶೋಧನೆಗಳು ನಡೆಯುತ್ತಲೇ ಇದೆ. ಅಲ್ಲಿನ ಜನರು ಪ್ರಯೋಗದ ವಸ್ತುಗಳಾಗಿಯೇ ಉಳಿದಿದ್ದಾರೆ. ಜನರು ಮಾನವೀಯತೆಯನ್ನು ಉಳಿಸಿಕೊಳ್ಳಿ, ನಮ್ಮನ್ನು ಉಳಿಸಿಕೊಳ್ಳಿ ಎಂದು ಬೇಡುವಂತಾಗಿದೆ. ನೋ ಮೋರ್ ಹಿಬಾಕುಶಾ-ಮೆಸೇಜ್ ಟು ದಿ ವರ್ಲ್ಡ್ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.
ಅಮೆರಿಕದ ಈ ವಾಯುದಾಳಿ ಸಂದರ್ಭದಲ್ಲಿ ಹಿರೋಶಿಮಾದಲ್ಲಿ ತನ್ನ ಕುಟುಂಬದ 11 ಸದಸ್ಯರೊಂದಿಗೆ ಜೊತೆಯಾಗಿ ಮಲಗಿದ್ದ ದಿನವನ್ನು ವಿವರಿಸುತ್ತಾ, ಮಹಿಳೆಯೊಬ್ಬರು "ರಾತ್ರಿಯಲ್ಲಿ ಮೂರು ಚಿಕ್ಕ ಮಕ್ಕಳು ನೀರಿಗಾಗಿ ಹಾತೊರೆದು ನನ್ನ ಕಣ್ಣ ಮುಂದೆ ಸತ್ತರು," ಎಂದು ಕಣ್ಣೀರು ಹರಿಸಿದ್ದಾರೆ. "ಮರುದಿನ ಬೆಳಗ್ಗೆ, ನಾವು ಅವರ ದೇಹಗಳನ್ನು ನೋಡಿದೆವು. ಆದರೆ ಮುಖಗಳು ಊದಿಕೊಂಡಿದ್ದವು. ಕಪ್ಪಾಗದ್ದವು. ಅದು ಅವರು ಹೌದೇ ಅಲ್ಲವೇ ಎಂದು ನಿರ್ಧಾರ ಮಾಡಲು ಕೂಡಾ ಸಾಧ್ಯವಾಗಲಿಲ್ಲ. ನಾವು ಅವರ ಎತ್ತರ, ಗಾತ್ರಕ್ಕೆ ಅನುಗುಣವಾಗಿ ಗುರುತು ಹಿಡಿಯಬೇಕಾಯಿತು. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಮೂಲಕ ಶಾಂತಿಯನ್ನು ಎಂದಿಗೂ ಸ್ಥಾಪಿಸಲಾಗದು," ಎಂದು ತಿಳಿಸಿದ್ದಾರೆ.

ಭಯಾನಕ ದೃಶ್ಯಗಳು ನೆನಪು ಮಾಸದು...
ನಿಹೋನ್ ಹಿಡಾಂಕ್ಯೊ ಎಂಬ ಹಿರಿಯ ಹಿಬಾಕುಶಾ (ಪರಮಾಣು ದಾಳಿಯಿಂದ ಹಾನಿಗೆ ಒಳಗಾದವರ ಗುಂಪು) ತಮ್ಮ ಜೀವನವನ್ನೇ ಈಗ ಈ ಬಾಂಬ್ ದಾಳಿ ವಿರೋಧ ಮಾಡಲು ಮುಡಿಪಾಗಿಟ್ಟಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಸಂಪೂರ್ಣ ನಿಷೇಧವಾಗಬಹುದು ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದಾರೆ. "ಈ ದಾಳಿಯ ವೇಳೆ ಕಿಕ್ಕಿರಿದ ರೈಲಿನಲ್ಲಿ, ಒಂದು ವರ್ಷ ಮತ್ತು ಆರು ತಿಂಗಳ ನನ್ನ ಹಿರಿಯ ಮಗಳನ್ನು ನನ್ನ ತೋಳುಗಳಲ್ಲಿ ಹಿಡಿದುಕೊಂಡು ನಾನು ಸ್ವಲ್ಪ ಸಮಯದವರೆಗೆ ಮೂರ್ಛೆ ಹೋದೆ. ಆಕೆಯ ಕೂಗು ಕೇಳಿ ನನಗೆ ಮತ್ತೆ ಪ್ರಜ್ಞೆ ಬಂತು. ರೈಲಿನಲ್ಲಿ ಬೇರೆ ಯಾರೂ ಇರಲಿಲ್ಲ," ಎಂದು ಮಹಿಳೆಯೋರ್ವರು ಘಟನೆಯ ಬಗ್ಗೆ ವಿವರಿಸಿದ್ದಾರೆ. ಅವರು ಹಿರೋಶಿಮದಿಂದ ಕೊಂಚ ದೂರದಲ್ಲಿ ಇದ್ದರು.
ಹೆಸಾಕಾದಲ್ಲಿರುವ ತನ್ನ ಸಂಬಂಧಿಕರ ಬಳಿಗೆ ಹೋಗುವಾಗ ನಡೆದ ಈ ದೃಶ್ಯದ ಬಗ್ಗೆ ಇನ್ನೋರ್ವ ಮಹಿಳೆ ನೆನಪಿಸಿಕೊಳ್ಳುತ್ತಾ, "ಜನರ ಚರ್ಮವು ನೇತಾಡುತ್ತಿತ್ತು. ಜನರ ಚರ್ಮ, ಮಾಂಸಕ್ಕೆ ತಾಗಿ ಎಡವಿ ಬೀಳುವಂತಾಗುತ್ತಿತ್ತು. ಒಬ್ಬರ ನಂತರ ಒಬ್ಬರು ಸಾಯುತ್ತಲೇ ಹೋದರು. ಇದು ನನಗೆ ದುಃಸ್ವಪ್ನದಂತೆ ಕಾಣುತ್ತದೆ," ಎಂದರು.
ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ 1945 ರ ಪರಮಾಣು ಬಾಂಬುಗಳಿಂದ ಬದುಕುಳಿದವರು ಆಗಸ್ಟ್ 1956 ರಲ್ಲಿ, "ಜಪಾನ್ ಕಾನ್ಫೆಡರೇಶನ್ ಆಫ್ ಎ ಮತ್ತು ಎಚ್-ಬಾಂಬ್ ಸಫರರ್ಸ್ ಆರ್ಗನೈಸೇಶನ್ಸ್" ಅನ್ನು ರಚಿಸಿದರು. ಡೈಗೊ ಫುಕುರ್ಯು ಮಾರು ದುರಂತದಿಂದ ಪ್ರಚೋದಿಸಲ್ಪಟ್ಟ ಪರಮಾಣು ಬಾಂಬ್ ಅನ್ನು ನಿಷೇಧಿಸುವ ಚಳುವಳಿಯಿಂದ ಉತ್ತೇಜಿತವಾಯಿತು. "ನಮ್ಮ ಅನುಭವಗಳಿಂದ ಕಲಿತ ಪಾಠಗಳ ಮೂಲಕ ಮಾನವಕುಲವನ್ನು ಅದರ ಬಿಕ್ಕಟ್ಟಿನಿಂದ ರಕ್ಷಿಸುವ ನಮ್ಮ ಇಚ್ಛೆಯಲ್ಲಿ ನಾವು ಭರವಸೆ ಹೊಂದಿದ್ದೇವೆ. ಅದೇ ಸಮಯದಲ್ಲಿ ನಮ್ಮ ಭರವಸೆಯು ನಮ್ಮನ್ನು ಉಳಿಸುತ್ತೇವೆ," ಎಂದು ರಚನೆ ಸಭೆಯಲ್ಲಿ ಘೋಷಿಸಿದರು.

ಯುಎನ್‌ಗೆ ಉಂಟಾದ ಹಲವಾರು ಸವಾಲುಗಳು
ಯುಎನ್ ಪ್ರಧಾನ ಕಛೇರಿ, ಎರಿಕೊ ಪ್ಲಾಟ್‌ನಲ್ಲಿ ಪ್ರದರ್ಶನವನ್ನು ವಿನ್ಯಾಸಗೊಳಿಸಿದ ಜಪಾನಿನ ಕಲಾ ನಿರ್ದೇಶಕರು ಯುಎನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಈ ಪ್ರದರ್ಶನಕ್ಕೆ ಭೇಟಿ ನೀಡುವವರ ಸಂಖ್ಯೆಯು ಕಡಿಮೆ ಆಗಿದೆ. ಭೇಟಿ ನೀಡುವುದೇ ಸಾಧ್ಯವಾಗದಂತಹ ಸ್ಥಿತಿಯಾಗಿತ್ತು. ಹಿಬಾಕುಶಾ ಜನರು ಕೂಡಾ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಈ ಹಿಂದೆ ಕನಿಷ್ಠ 10 ರಿಂದ 30 [ಹಿಬಾಕುಶಾ] ಮಂದಿ ಬಂದಿದ್ದರು. ಆದರೆ ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಈ ಬಾರಿ ಯಾರೂ ಬರಲಿಲ್ಲ. ವಯಸ್ಸಾದ ಜನಸಂಖ್ಯೆಯೊಂದಿಗೆ ಕೆಲಸ ಮಾಡುವುದರಿಂದ ಉದ್ಭವಿಸಿದ ಮತ್ತೊಂದು ಸವಾಲನ್ನು ಸಹ ಅವರು ಹಂಚಿಕೊಂಡರು. ಪ್ರದರ್ಶನದ ಬಗ್ಗೆ ಮುದ್ರಣ ಮಾಡಲು ಕಳುಹಿಸಿದ ಬಳಿಕ ಒಬ್ಬರು ಸಾವನ್ನಪ್ಪಿದರು ಎಂದು ಹೇಳಿದ್ದಾರೆ.
"ಅಣು ಬಾಂಬ್ ದಾಳಿಯಿಂದ ಬದುಕುಳಿದವರ ಗುಂಪಿಗೆ ಒಬ್ಬರನ್ನು ಸೇರಿಸಿದೆ. ಆದರೆ ಅವರು ಮರಣಹೊಂದಿದ ಕಾರಣ, ನಾನು ಈ ಮುದ್ರಣ ಮಾಡದಿರಲು ಕಂಪನಿಗೆ ಕರೆ ಮಾಡಬೇಕಾಯಿತು. ಅವರ ಸಮಿತಿಯ ಪ್ರಕಾರ, ದಿವಂಗತ ಸುನಾವೊ ತ್ಸುಬೊಯ್, ಬಾಂಬ್ ದಾಳಿ ಸಂದರ್ಭ ಹಿರೋಶಿಮ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. "ಸ್ಫೋಟದಿಂದ ನಾನು ಕನಿಷ್ಟ ಹತ್ತು ಮೀಟರ್ ಹಾರಿಹೋದೆ ... ನನ್ನ ದೇಹದ ಬಹುತೇಕ ಎಲ್ಲಾ ಭಾಗಗಳು ಸುಟ್ಟುಹೋಗಿವೆ. ಒಂದು ವಾರದ ನಂತರ ನಾನು ಪ್ರಜ್ಞೆಯನ್ನು ಕಳೆದುಕೊಂಡೆ. ಮರಳಿ ಪ್ರಜ್ಞೆಗೆ ಬರಲು ನನಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ಹಿಡಿಯಿತು," ಎಂದು ಸುನಾವೊ ತ್ಸುಬೊಯ್ ಹೇಳಿದ್ದರು.

ನಿರಸ್ತ್ರೀಕರಣ ಯಾಕಾಗಬಾರದು?
ಪರಮಾಣು ಶಕ್ತಿಯ ಶಾಂತಿಯುತ ಬಳಕೆಗಳಲ್ಲಿ ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪರಮಾಣು ನಿಶ್ಯಸ್ತ್ರೀಕರಣ ಮತ್ತು ಸಾಮಾನ್ಯ, ಸಂಪೂರ್ಣ ನಿರಸ್ತ್ರೀಕರಣವನ್ನು ಸಾಧಿಸುವ ಗುರಿಯನ್ನು ಹೆಚ್ಚಿಸಲು ಪರಮಾಣು ಪ್ರಸರಣ ರಹಿತ ಒಪ್ಪಂದದ(ಎನ್‌ಪಿಟಿ) ಬಗ್ಗೆ1960 ರ ದಶಕದ ಅಂತ್ಯದಲ್ಲಿ ಮಾತುಕತೆ ನಡೆಸಲಾಯಿತು. ಸುಮಾರು ಒಂದು ದಶಕದ ನಂತರ, ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸಲು ಯುಎನ್‌ಗೆ ಕರೆ ನೀಡಿದ ಜಪಾನ್‌ನ ರಾಷ್ಟ್ರೀಯ ನಿಯೋಗವು ಹಿರೋಶಿಮ ಮತ್ತು ನಾಗಾಸಾಕಿಯಲ್ಲಿ ಬಳಸಿದ ಪರಮಾಣು ಬಾಂಬ್‌ಗಳಿಂದ ಉಂಟಾದ ಹಾನಿ ಮತ್ತು ಬದುಕುಳಿದವರ ಪರಿಸ್ಥಿತಿಯನ್ನು ತನಿಖೆ ಮಾಡಲು ಸಂಸ್ಥೆಯನ್ನು ವಿನಂತಿಸಿತು. ಈ ಅಣು ಬಾಂಬ್ ದಾಳಿಯಿಂದ ಬದುಕುಳಿದವರ ಮೂರು ರಾಷ್ಟ್ರವ್ಯಾಪಿ ಸಮೀಕ್ಷೆಗಳು ಮತ್ತು ವಿವಿಧ ಕ್ಷೇತ್ರಗಳ ತಜ್ಞರ ತನಿಖೆಯ ಆಧಾರದ ಮೇಲೆ ಪರಿಸ್ಥಿತಿಯ ಕುರಿತು ಮೊದಲ ಅಂತರರಾಷ್ಟ್ರೀಯ ವಿಚಾರ ಸಂಕಿರಣವು 1977 ರಲ್ಲಿ ನಡೆಯಿತು.
ಪರಮಾಣು ನಿಶ್ಯಸ್ತ್ರೀಕರಣದ ಮೇಲೆ ಮಾನ ಸಂಕುಲದ ಜೊತೆಯಾದ ಒತ್ತಾಯದ ಜೊತೆಗೆ ಈ ಸಂದರ್ಭದಲ್ಲಿ ಹಿಬಾಕುಶಾ ಪದವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿತು. ಆದರೆ ಐದು ವರ್ಷಗಳ ನಂತರ, ಪರಮಾಣು ವಿರೋಧಿ ಮತ್ತು ಶಾಂತಿ ಚಳುವಳಿ ಹೆಚ್ಚಾಗುತ್ತಿದ್ದಂತೆ ಅಮೆರಿಕ ಮತ್ತು ರಷ್ಯಾ ಯುರೋಪಿಗೆ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಯತ್ನವನ್ನು ಮಾಡಿತು. ಇಂದಿಗೂ ಕೂಡಾ ಪರಮಾಣು ಶಸ್ತ್ರಾಸ್ತ್ರ ಬಳಕೆ ನಿಷೇಧ ಏಕಾಗಬಾರದು ಎಂಬ ಬಗ್ಗೆ ಚರ್ಚೆಗಳು ಹಿರೋಶಿಮ ಹಾಗೂ ನಾಗಸಾಕಿ ಘಟನೆಗಳ ಆಧಾರದಲ್ಲಿ ನಡೆಯುತ್ತದೆ.

ಪರಮಾಣು ಶಸ್ತ್ರಾಸ್ತ್ರಗಳ ನಿಷೇಧದ ಒಪ್ಪಂದ
ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನೆಗೆ ದಾರಿ ಲಭಿಸಬಹುದು ಎಂಬ ನಿಟ್ಟಿನಲ್ಲಿ, ಆ ಆಶಯವನ್ನು ಹೊತ್ತು, ಹಿಬಾಕುಶಾ ಜನರು ತಾವು ಈ ಪರಮಾಣು ದಾಳಿಯಿಂದ ಅನುಭವಿಸಿದ ಸಂಕಟಗಳ ಬಗ್ಗೆ ಹೆಚ್ಚು ಹೆಚ್ಚಾಗಿ ಮಾತನಾಡಲು ಆರಂಭ ಮಾಡಿದರು. ಬಾಂಬ್ ದಾಳಿಯ ಸಮಯದಲ್ಲಿ ಮತ್ತು ನಂತರ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಆರಂಭ ಮಾಡಿದರು. 2010 ರಲ್ಲಿ ಎನ್‌ಪಿಟಿ ರಿವ್ಯೂ ಕಾನ್ಫರೆನ್ಸ್‌ಗೆ ಈ ಬಗ್ಗೆ ಲಿಖಿತ ಮಾಹಿತಿಯನ್ನು ಕೂಡಾ ನೀಡಿದರು.
ಜುಲೈ 2017 ರಲ್ಲಿ, ಎನ್‌ಪಿಟಿಗೆ ಪೂರಕವಾದ ಪರಮಾಣು ಶಸ್ತ್ರಾಸ್ತ್ರಗಳ ನಿಷೇಧದ ಒಪ್ಪಂದವನ್ನು (ಟಿಪಿಎನ್‌ಡಬ್ಲ್ಯೂ) ಅಂಗೀಕರಿಸಲಾಯಿತು. ಕಳೆದ ವರ್ಷ ಜನವರಿ 22 ರಂದು ಜಾರಿಗೆ ಬಂದಿತು . 2018 ರಲ್ಲಿ ಯುಎನ್‌ನ ನಿರಸ್ತ್ರೀಕರಣ ಕಾರ್ಯಸೂಚಿಯನ್ನು ಪ್ರಾರಂಭಿಸುವಾಗ, "ಪರಮಾಣು ಶಸ್ತ್ರಾಸ್ತ್ರಗಳು ಮಾನವೀಯತೆಗೆ ಒಡ್ಡುವ ಬೆದರಿಕೆ, ಅದರ ಸಂಪೂರ್ಣ ನಿರ್ಮೂಲನೆಗೆ ಕಾರಣವಾಗುವ ಹೊಸ ಮತ್ತು ನಿರ್ಣಾಯಕ ಕ್ರಮವನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸಬೇಕು. ನಾವು ಹಿಬಾಕುಶಾ ಜನರಿಗೆ ಹಾಗೂ ಈ ಭೂಮಿಗೆ ಋಣಿಯಾಗಿರಬೇಕು," ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಿಳಿಸಿದರು.

ಪ್ರತಿ ಹೊಸ ಪೀಳಿಗೆಗೆ ಎಚ್ಚರಿಕೆಯ ಕರೆಗಂಟೆ ಹಿರೋಶಿಮ
ಯುಎನ್ ಮುಖ್ಯಸ್ಥರು, ಪರಮಾಣು ಬೆದರಿಕೆಯ ವಿರುದ್ಧದ ಸಾರ್ವತ್ರಿಕ ಹೋರಾಟದಲ್ಲಿ ಅವರ ಧೈರ್ಯ ಮತ್ತು ನೈತಿಕ ನಾಯಕತ್ವಕ್ಕಾಗಿ ಜಗತ್ತು ಹಿಬಾಕುಶಾಗೆ ಋಣಿಯಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ಪ್ರತಿ ಹೊಸ ಪೀಳಿಗೆಗೆ ಎಚ್ಚರಿಕೆಯಂತೆ ಈ ಹಿರೋಶಿಮ, ನಾಗಸಾಕಿ ಸಾಕ್ಷ್ಯಗಳನ್ನು ಜೀವಂತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಯುಎನ್ ಬದ್ಧವಾಗಿದೆ ಎಂದು ಈಗಾಗಲೇ ಯುಎನ್ ಹೇಳಿದೆ.
"ಪರಮಾಣು ಅಸ್ತ್ರಗಳು ಅಸ್ತಿತ್ವವಾದದ ಬೆದರಿಕೆಯನ್ನು ಉಂಟುಮಾಡುತ್ತವೆ. ಅವುಗಳ ಬಳಕೆಯ ವಿರುದ್ಧದ ಏಕೈಕ ಗ್ಯಾರಂಟಿ ಅವುಗಳ ಸಂಪೂರ್ಣ ನಿರ್ಮೂಲನೆಯಾಗಿದೆ ಎಂಬುದಕ್ಕೆ ಹಿಬಾಕುಶಾಗಳು ಜೀವಂತ ಉದಾಹರಣೆಯಾಗಿದ್ದಾರೆ," ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳುತ್ತಾರೆ. ಜನವರಿಯಲ್ಲಿ ನಿಗದಿಯಾಗಿದ್ದ ಎನ್‌ಪಿಟಿ ಯ ಹತ್ತನೇ ವಿಮರ್ಶಾ ಸಮ್ಮೇಳನವನ್ನು ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಮುಂದೂಡಲಾಗಿದೆ. ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹಿಬಾಕುಶಾ ಜನರ ಪರವಾಗಿ ನಿಲ್ಲಬೇಕು, ಪರಮಾಣು ಶಸ್ತ್ರಾಸ್ತ್ರ ಬಳಕೆಗೆ ತಡೆಯಾಗಬೇಕು ಎಂದು ವಿಶ್ವ ನಾಯಕರುಗಳು ಒತ್ತಾಯ ಮಾಡಿದ್ದಾರೆ. ಈ ಉಕ್ರೇನ್ ಹಾಗೂ ರಷ್ಯಾ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಆತಂಕವನ್ನು ಉಂಟು ಮಾಡಿರುವಾಗ ನಾವು ಈ ಹಿರೋಶಿಮ ಘಟನೆಯ ಕಡೆ ಗಮನ ಹರಿಸುವುದು ಅತ್ಯವಶ್ಯಕವಾಗಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications