ತಮಿಳುನಾಡು ಅಣು ಸ್ಥಾವರರಿಂದ ಕರ್ನಾಟಕಕ್ಕೆ 221 ಮೆ. ವ್ಯಾ ವಿದ್ಯುತ್!

By: ಅನುಶಾ ರವಿ
Subscribe to Oneindia Kannada

ಬೆಂಗಳೂರು, ಜನವರಿ 26: 2014ರ ಒಪ್ಪಂದದಂತೆ ತಮಿಳುನಾಡಿನ ಕೂಡಂಕುಳಂ ಅಣು ವಿದ್ಯುತ್ ಸ್ಥಾವರದಿಂದ ಕರ್ನಾಟಕಕ್ಕೆ 221 ಮೆ.ವ್ಯಾ ವಿದ್ಯುತ್ ಪೂರೈಕೆಯಾಗಲಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಭಾರತ-ರಷ್ಯ ಪರಮಾಣು ಸಹಯೋಗದಲ್ಲಿ ಕೈಗೊಳ್ಳಲಾಗಿರುವ ವಿದ್ಯುತ್ ಉತ್ಪಾದನೆ ತಮಿಳುನಾಡಿನ ಮಹತ್ವಾಕಾಂಕ್ಷೆ ಯೋಜನೆಯಾಗಿದೆ.[ಮೋದಿ-ಪುಟಿನ್ ರಿಂದ ಅಣು ವಿದ್ಯುತ್ ಸ್ಥಾವರಕ್ಕೆ ಚಾಲನೆ, ಜಯಾ ಸಾಕ್ಷಿ]

221 MW electricity to K’taka from Kudankulam: Power minister DK Shivakumaar

ಕೂಡಂಕುಳಂ ಯೋಜನೆಯಡಿ 1,300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈಗ ಉತ್ಪಾದನೆ ಪ್ರಮಾಣ ಕಳೆದ ಶನಿವಾರದಂದು 1,000ಮೆಗಾ ವ್ಯಾಟ್ ಮುಟ್ಟಿದೆ. 2014ರ ಒಪ್ಪಂದದಂತೆ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಆರಂಭವಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ಸಮಸ್ಯೆಯಿಲ್ಲ. ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು.

ನಿಯಮದ ಪ್ರಕಾರ ವಿದ್ಯುತ್ ಸ್ಥಾವರ ಇರುವ ರಾಜ್ಯಕ್ಕೆ ಉತ್ಪಾದನೆಯ ಶೇ 50 ರಷ್ಟು ಉತ್ಪನ್ನ ಸೇರಲಿದ್ದು, ಉಳಿದದ್ದು ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ.

ಕರ್ನಾಟಕ 221 ಮೆ.ವ್ಯಾ,ತೆಲಂಗಾಣ 50 ಮೆ.ವ್ಯಾ ಹಾಗೂ ಕೇರಳ 133 ಮೆ.ವ್ಯಾ ವಿದ್ಯುತ್ ಬೇಡಿಕೆ ಇಟ್ಟಿದೆ. ತಮಿಳುನಾಡು ಈ ಎರಡನೇ ಘಟಕದಿಂದ ಸುಮಾರು 462.50 ಮೆ.ವ್ಯಾ ಪಡೆಯಲಿದೆ. ಕರ್ನಾಟಕ ಹಂತ ಹಂತವಾಗಿ ಒಟ್ಟಾರೆ442 ಮೆ.ವ್ಯಾ ಪಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka has started getting its share of 221 MW electricity from the Kudankulam Nuclear Power plant after Unit II of the plant attained its maximum capacity of 1,000 MW.
Please Wait while comments are loading...