RCB VS GT: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ - ಸಾಯಿ ಸುದರ್ಶನ್‌ಗೆ ಶಾಕ್: ಕೈತಪ್ಪಿದ ಐತಿಹಾಸಿಕ ದಾಖಲೆ
RCB VS GT: ರಾಯಲ್ ಚಾಲೆಂಜರ್ಸ್ ಬೆಂಗಳೂರು - ಗುಜರಾತ್ ಟೈಟಾನ್ಸ್‌ನ್ ನಡುವೆ ಮೇ 31ರ ಭಾನುವಾರ ನಡೆದ 2026ನೇ ಸಾಲಿನ ಫೈನಲ್ ಪಂದ್ಯದಲ್ಲಿ ಜಿಟಿಯ ಯಶಸ್ವಿ ಆರಂಭಿಕ ಬ್ಯಾಟರ್ ಅಂತಲೇ ಖ್ಯಾತಿ ಗಳಿಸಿರುವ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮಹತ್ವದ ದಾಖಲೆಯಿಂದ ತಪ್ಪಿಸಿಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಐಪಿಎಲ್‌ನಲ್ಲಿ ಇತಿಹಾಸ ಬರೆಯುವ ಕನಸು ಕೇವಲ ಐದು ರನ್‌ಗಳ ಅಂತರದಲ್ಲಿ ಕೊನೆಗೊಂಡಿದೆ. ಗುಜರಾತ್ ಟೈಟಾನ್ಸ್‌ನ ಆಟಗಾರರು ನಿರ್ಣಾಯ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ.
ಭಾನುವಾರ (ಮೇ 31) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ 2026 ರ ಫೈನಲ್‌ನಲ್ಲಿ ಶುಭಮನ್ ಗಿಲ್ ಮತ್ತು ಸುದರ್ಶನ್ ಮಹತ್ವದ ದಾಖಲೆ ಬರೆಯುವುದರಿಂದ ವಂಚಿತರಾಗಿದ್ದಾರೆ. ಐಪಿಎಲ್‌ನ ಒಂದೇ ಋತುವಿನಲ್ಲಿ ಬ್ಯಾಟಿಂಗ್ ಜೋಡಿ ಗಳಿಸಿದ ಅತಿ ಹೆಚ್ಚು ರನ್‌ಗಳ ಸಾರ್ವಕಾಲಿಕ ಹೊಸ ದಾಖಲೆಯನ್ನು ಬರೆಯುವುದಕ್ಕೆ ಈ ಇಬ್ಬರು ಬ್ಯಾಟರ್‌ಗಳಿಗೆ ಕೇವಲ 28 ರನ್‌ಗಳ ಅಗತ್ಯವಿತ್ತು. ಆದಾಗ್ಯೂ, ಜೋಶ್ ಹ್ಯಾಜಲ್‌ವುಡ್ ಕೇವಲ ಎಂಟು ಎಸೆತಗಳಲ್ಲಿ ಗಿಲ್ ಅವರು 10 ರನ್‌ಗಳಿಗೆ ಔಟ್ ಮಾಡಿದಾಗ ಅವರ ದಾಖಲೆಯ ಕನಸು ಮುದುರಿತು. ಇದರಿಂದಾಗಿ ಆರಂಭಿಕ ಜೋಡಿಯು 22 ರನ್‌ಗಳನ್ನಷ್ಟೇ ಗಳಿಸುವುದಕ್ಕೆ ಶಕ್ತವಾಯಿತು.

ಗುಜರಾತ್ ಟೈಟಾನ್ಸ್ ಜೋಡಿಯು 934 ಪಾಲುದಾರಿಕೆ ರನ್‌ಗಳೊಂದಿಗೆ ಋತುವನ್ನು ಮುಗಿಸಿದಂತೆ ಆಗಿದೆ. ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ (2016) ಮತ್ತು ವಿರಾಟ್ ಕೊಹ್ಲಿ-ಫಾಫ್ ಡು ಪ್ಲೆಸಿಸ್ (2023) ಜಂಟಿಯಾಗಿ ಗಳಿಸಿದ್ದ 939 ರನ್‌ಗಳ ದಾಖಲೆಯನ್ನು ಸ್ವಲ್ಪದರಲ್ಲೇ ಈ ಜೋಡಿ ಕೈ ಚೆಲ್ಲಿದೆ.
ಗಿಲ್-ಸುದರ್ಶನ್ ಅವರ ಜೋಡಿಯ ಪಾಲುದಾರಿಕೆ ಐಪಿಎಲ್ 2026 ರ ನಿರ್ಣಾಯಕ ಹಾಗೂ ಮಹತ್ವದ ಹೈಲೆಟ್‌ಗಳಲ್ಲಿ ಒಂದಾಗಿತ್ತು. ಫೈನಲ್‌ಗೆ ಮೊದಲು ಒಟ್ಟಿಗೆ 912 ರನ್‌ಗಳನ್ನು ಗಳಿಸಿದ ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್‌ಗಳು ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಬ್ಯಾಟಿಂಗ್ ಜೋಡಿಯಾಗುವುದಕ್ಕೆ ಕೇವಲ 28 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಕ್ಷಣದ ಹೊರತಾಗಿಯೂ ಇಬ್ಬರು ಹೊಸ ದಾಖಲೆ ಬರೆಯುವ ಅದೃಷ್ಟದಿಂದ ವಂಚಿತರಾಗಿದ್ದಾರೆ.












Click it and Unblock the Notifications