RCB: ರಾಜಸ್ಥಾನ್ ರಾಯಲ್ಸ್ ಫೈನಲ್ ತಲುಪದಿದ್ದರೂ ವೈಭವ್ ಸೂರ್ಯವಂಶಿ ಅಹಮದಾಬಾದ್‌ಗೆ ಬಂದಿದ್ದೇಕೆ?
Vaibhav Sooryavanshi: ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿವೆ. ರಾಜಸ್ಥಾನ್ ರಾಯಲ್ಸ್ ತಂಡವು ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೋತು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ. ಆದರೂ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಪಾದಾರ್ಪಣೆ ಮಾಡಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದ ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇನ್ನು ಐಪಿಎಲ್‌ನ ಮುಕ್ತಾಯದ ಸಮಾರಂಭದಲ್ಲಿ ನೀಡಲಾಗುವ ಪ್ರಮುಖ ಪ್ರಶಸ್ತಿಗಳಾದ 'ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್' ಅಥವಾ ಟೂರ್ನಿಯ ವಿಶೇಷ ಗೌರವಗಳಿಗೆ ಇವರ ಹೆಸರು ಮುಂಚೂಣಿಯಲ್ಲಿದೆ. ಈ ಹಿನ್ನೆಲೆ ಫೈನಲ್ ಪಂದ್ಯದ ನಂತರ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅವರು ಅಹಮದಾಬಾದ್‌ಗೆ ಆಗಮಿಸಿದ್ದಾರೆ.

ವೈಭವ್ ಅಹಮದಾಬಾದ್‌ಗೆ ಬಂದಿದ್ದೇಕೆ?
ಫೈನಲ್‌ನಂತಹ ಬೃಹತ್ ಪಂದ್ಯದ ಒತ್ತಡದ ನಿರ್ವಹಣೆ ಮತ್ತು ಹಿರಿಯ ಆಟಗಾರರ ತಂತ್ರಗಳನ್ನು ಹತ್ತಿರದಿಂದ ವೀಕ್ಷಿಸುವುದು ಯಾವುದೇ ಯುವ ಆಟಗಾರನ ಬೆಳವಣಿಗೆಗೆ ಸಹಕಾರಿಯಾಗಿದೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ಯುವ ಆಟಗಾರರಿಗೆ ಇಂತಹ ದೊಡ್ಡ ವೇದಿಕೆಗಳ ಅನುಭವವನ್ನು ನೀಡಲು ಪ್ರೋತ್ಸಾಹಿಸುತ್ತದೆ. ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಅವರಂತಹ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳ ಆಟವನ್ನು ಮೈದಾನದಲ್ಲೇ ನೋಡಿ ಕಲಿಯಲು ಅವರಿಗೆ ಈ ಅವಕಾಶ ಕಲ್ಪಿಸಲಾಗಿದೆ.
ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ ವೈಭವ್
ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಆಡಿ ಕ್ರಿಕೆಟ್ ದಿಗ್ಗಜರನ್ನೇ ಬೆರಗುಗೊಳಿಸಿದ್ದಾರೆ. ಕೇವಲ 15ನೇ ವಯಸ್ಸಿನ ಈ ಯುವ ಆಟಗಾರ ಕ್ರೀಡಾಂಗಣದ ಮೂಲೆ ಮೂಗಳಿಗೂ ಬಾಲ್ ಕಳುಸಹಿ ರನ್ ಮಳೆ ಹರಿಸುವ ಮೂಲಕ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ.
776 ರನ್ ಚಚ್ಚಿದ ಸೂರ್ಯವಂಶಿ
ಈ ಸೀಸನ್‌ನಲ್ಲಿ ರಾಜಸ್ಥಾನ್ ತಂಡವನ್ನು ಪ್ರತಿನಿಧಿಸಿರುವ ಸೂರ್ಯವಂಶಿ ಬರೋಬ್ಬರಿ 237.31ರ ಸೂಪರ್ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 776 ರನ್ ಚಚ್ಚಿದ್ದಾರೆ. ಆ ಮೂಲಕ ಫೈನಲ್ ಪಂದ್ಯಕ್ಕೂ ಮುನ್ನವೇ ಅತ್ಯಧಿಕ ರನ್ ಗಳಿಸಿದ ಆಟಗಾರನಿಗೆ ನೀಡಲಾಗುವ ಪ್ರತಿಷ್ಠಿತ ಆರೆಂಜ್ ಕ್ಯಾಪ್ ಅನ್ನು ಹೆಮ್ಮೆಯಿಂದ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ (MVP) ಪ್ರಶಸ್ತಿ ರೇಸ್‌ನಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ.
ಗೇಲ್ ದಾಖಲೆ ಬ್ರೇಕ್ ಮಾಡಿದ ವಂಡರ್ ಕಿಡ್
ಯಾವುದೇ ಭಯವಿಲ್ಲದೆ ಮೈದಾನಕ್ಕಿಳಿದು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ವೈಭವ್ ಸೂರ್ಯವಂಶಿ ಈ ಬಾರಿ ಸಿಕ್ಸರ್‌ಗಳ ಮಳೆಯನ್ನೇ ಹರಿಸಿದ್ದಾರೆ. ಈ ಒಂದೇ ಸೀಸನ್‌ನಲ್ಲಿ ಅವರು ಬರೋಬ್ಬರಿ 72 ಸಿಕ್ಸರ್‌ಗಳನ್ನು ಸಿಡಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್‌ನ ದಂತಕಥೆ, ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರು ದೀರ್ಘಕಾಲದಿಂದ ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದ ಒಂದು ಸೀಸನ್‌ನ ಗರಿಷ್ಠ ಸಿಕ್ಸರ್ (59 ಸಿಕ್ಸರ್) ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗೇಲ್ ಹೆಸರಲ್ಲಿದ್ದ ಐಪಿಎಲ್‌ನ ಅತ್ಯಂತ ವೇಗದ ಶತಕದ ದಾಖಲೆಯನ್ನು ಮುರಿಯುವ ತೀರಾ ಸನಿಹಕ್ಕೂ ಸೂರ್ಯವಂಶಿ ತಲುಪಿದ್ದರು.
ಕೇವಲ 15ನೇ ವಯಸ್ಸಿನಲ್ಲೇ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದು, ನಂತರ ಮೈದಾನದಲ್ಲೂ ತನಗಿರುವ ಪ್ರತಿಭೆಯನ್ನು ಸಾಬೀತುಪಡಿಸಿದ ವೈಭವ್ ಸೂರ್ಯವಂಶಿ ಈ ಸೀಸನ್‌ನ ಅತಿ ದೊಡ್ಡ ಆಕರ್ಷಣೆಯ ಬಿಂದುವಾಗಿ ಗಮನ ಸೆಳೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದ್ದರೂ ಅವರ ಈ ಅದ್ಭುತ ಜರ್ನಿಯನ್ನು ಸಂಭ್ರಮಿಸಲು ಮತ್ತು ಅಧಿಕೃತ ಐಪಿಎಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರು ಅಹಮದಾಬಾದ್‌ನಲ್ಲಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಅದ್ಭುತ ಯುವ ಆಟಗಾರ ಎಂದೇ ಗುರುತಿಸಿಕೊಂಡಿರುವ ವೈಭವ್ ಸೂರ್ಯವಂಶಿ ಕೇವಲ ಪಂದ್ಯ ಆಡುವುದಷ್ಟೇ ಅಲ್ಲದೆ, ಕ್ರಿಕೆಟ್‌ನ ಬಿಗ್ ಸ್ಟೇಜ್ ಅನ್ನು ಹೇಗೆ ನಿಭಾಯಿಸಬೇಕು ಎಂಬ ಅನುಭವ ಪಡೆಯಲು ಅಹಮದಾಬಾದ್‌ನ ಫೈನಲ್ ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications