IPL 2026 Final: ಆರ್‌ಸಿಬಿಯು ಜಿಟಿಯ ಬಿಗ್ ವಿಕೆಟ್‌ಗಳನ್ನ ಕಬಳಿಸಿದ್ದು ಹೇಗೆ?

RCB Vs GT IPL 2026 Final: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆಯುತ್ತಿರುವ ಐಪಿಎಲ್ 2026ರ ರೋಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದಾಳಿಗೆ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ತತ್ತರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ಜಿಟಿ ತಂಡ ತನ್ನ ಇಬ್ಬರು ಸ್ಟಾರ್ ಆರಂಭಿಕ ಆಟಗಾರರನ್ನು ಪವರ್‌ಪ್ಲೇನಲ್ಲೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹಾಗಾದ್ರೆ ಇವರು ವಿಕೆಟ್‌ ಒಪ್ಪಿಸಿದ್ದರು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರ ತಂತ್ರದ ಪ್ರಕಾರ ಬೌಲರ್‌ಗಳು ಅತ್ಯದ್ಭುತ ಆರಂಭ ಒದಗಿಸಿಕೊಟ್ಟಿದ್ದಾರೆ. ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ದೊಡ್ಡ ಮೊತ್ತ ಕಲೆಹಾಕುವ ಗುರಿಯೊಂದಿಗೆ ಕಣಕ್ಕಿಳಿದ ಗುಜರಾತ್ ಟೈಟಾನ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು.

IPL 2026 Final RCB Bowlers Rock as Gujarat Titans Shubman Gill Sai Sudharsan Wicket Fall Early

ಶುಭ್‌ಮನ್ ಗಿಲ್‌ ವಿಕೆಟ್‌ ಕಿತ್ತ ಹ್ಯಾಜಲ್‌ವುಡ್

ಗುಜರಾತ್ ಟೈಟಾನ್ಸ್ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತ ನೀಡಿದ್ದು ಆರ್‌ಸಿಬಿಯ ಆಸ್ಟ್ರೇಲಿಯಾ ಮೂಲದ ವೇಗಿ ಜೋಶ್ ಹ್ಯಾಜಲ್‌ವುಡ್. ಜಿಟಿ ನಾಯಕ ಶುಭ್‌ಮನ್ ಗಿಲ್ ಅವರನ್ನು ಪವರ್‌ಪ್ಲೇ ಅವಧಿಯಲ್ಲೇ ಔಟ್ ಮಾಡುವ ಮೂಲಕ ಹ್ಯಾಜಲ್‌ವುಡ್ ಪಂದ್ಯದ ಗತಿಯನ್ನೇ ಬದಲಿಸಿದರು. ಲೈನ್ ಅಂಡ್ ಲೆಂಗ್ತ್ ಬಾಲ್ ಅನ್ನು ಅರಿಯುವಲ್ಲಿ ವಿಫಲರಾದ ಗಿಲ್ ವಿಕೆಟ್ ಒಪ್ಪಿಸಿ ನಿರಾಸೆಯಿಂದ ಕ್ರೀಸ್ ತೊರೆದರು.

ಸಾಯಿ ಸುದರ್ಶನ್ ವಿಕೆಟ್ ಕಿತ್ತು ಮಿಂಚಿದ ಭುವಿ

ನಾಯಕನ ವಿಕೆಟ್ ಪತನದ ಬೆನ್ನಲ್ಲೇ ಜಿಟಿ ತಂಡ ಚೇತರಿಸಿಕೊಳ್ಳುವ ಮುನ್ನವೇ ಆರ್‌ಸಿಬಿಯ ಅನುಭವಿ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಮತ್ತೊಂದು ವಿಕೆಟ್‌ ಕೆಡವಿದರು. ಅತ್ಯಂತ ಜಾಗರೂಕತೆಯಿಂದ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದ ಅಪಾಯಕಾರಿ ಬ್ಯಾಟರ್ ಸಾಯಿ ಸುದರ್ಶನ್ ಅವರ ವಿಕೆಟ್ ಕಿತ್ತು ಮಿಂಚಿದರು. ಕ್ವಾಲಿಫೈಯರ್ 1ರಲ್ಲೂ ಈ ಇಬ್ಬರು ಓಪನರ್‌ಗಳನ್ನು ಬೇಗನೆ ಔಟ್ ಮಾಡಿದ್ದ ಆರ್‌ಸಿಬಿ ಇಂದಿನ ಫೈನಲ್‌ನಲ್ಲೂ ಅದನ್ನೇ ಮಾಡಿದೆ.

ಪಂದ್ಯ ಆರಂಭಕ್ಕೂ ಮುನ್ನ ಕ್ರಿಕೆಟ್ ದಿಗ್ಗಜರು ವಿಶ್ಲೇಷಿಸಿದಂತೆ ಅಹಮದಾಬಾದ್ ಪಿಚ್‌ನ ಆರಂಭಿಕ ಲಾಭ ಮತ್ತು ತಾಪಮಾನದ ಪರಿಸ್ಥಿತಿಯನ್ನು ಆರ್‌ಸಿಬಿ ಬೌಲರ್‌ಗಳು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ. ಆರಂಭದಲ್ಲೇ ಇಬ್ಬರು ಸ್ಫೋಟಕ ಓಪನರ್‌ಗಳನ್ನು ಕಳೆದುಕೊಂಡಿರುವುದರಿಂದ ಗುಜರಾತ್ ಟೈಟಾನ್ಸ್ ತಂಡದ ರನ್ ಗಳಿಕೆಯ ವೇಗಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.

ಮೇಲುಗೈ ಸಾಧಿಸಿದ ಆರ್‌ಸಿಬಿ

ಈಗ ಇಡೀ ಪಂದ್ಯದ ಜವಾಬ್ದಾರಿ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಇದೆ. ಆರಂಭಿಕ ಆಘಾತದಿಂದ ಜಿಟಿಯನ್ನು ಪಾರು ಮಾಡಿ ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸುವುದು ಅವರ ಮುಂದಿರುವ ಸವಾಲಾಗಿದೆ. ಇತ್ತ ಆರ್‌ಸಿಬಿ ತಂಡವು ಜಿಟಿ ಬ್ಯಾಟರ್‌ಗಳ ಮೇಲೆ ಮತ್ತಷ್ಟು ಒತ್ತಡ ಹೇರಿ ಅವರನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಯೋಚನೆಯಲ್ಲಿದೆ. ಫೈನಲ್ ಪಂದ್ಯದ ಆರಂಭಿಕ ಹಂತದಲ್ಲೇ ಆರ್‌ಸಿಬಿ ಸಂಪೂರ್ಣ ಮೇಲುಗೈ ಸಾಧಿಸಿದೆ.

ಜೋಶ್ ಹ್ಯಾಜಲ್‌ವುಡ್‌ ಎಸೆತದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್‌ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೈಗೆ ಕ್ಯಾಚ್ ನೀಡಿ ವಿಕೆಟ್‌ ಒಪ್ಪಿಸಿದರೆ, ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸಾಯಿ ಸುದರ್ಶನ್‌ ಅವರು ಜಿತೇಶ್‌ ಶರ್ಮಾಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಕಡೆಗೆ ನಡೆದರು. ಈ ಮೂಲಕ ಜಿಟಿಗೆ ಈ ಇಬ್ಬರು ಆರ್‌ಸಿಬಿ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+