ಇಂಜಿನಿಯರಿಂಗ್ ಕೆಲಸ ಬಿಟ್ಟು ಟೀಂ ಇಂಡಿಯಾಗೆ ನಡುಕ ಹುಟ್ಟಿಸಿದ ರಾಜಸ್ಥಾನಿ ಹುಡುಗ, ವೈಭವ್ ಜಸ್ಟ್ ಮಿಸ್..
Jai Moondra: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಡಲಿದ್ದಾರೆ ಎಂದು ಬಹುತೇಕ ಕ್ರಿಕೆಟ್ ಅಭಿಮಾನಿಗಳ ಆಸೆಯಾಗಿತ್ತು. ಆದರೆ ಅವರಿಗೆ ಎರಡು ಪಂದ್ಯಗಳಲ್ಲೂ ಅವಕಾಶ ಸಿಗದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ. ಈ ನಡುವೆಯೇ ಸರಣಿ ಗೆದ್ದ ತಂಡದ ಜೈ ಮುಂದ್ರಾ ಅವರ ಮಹದಾಸೆಯೊಂದು ಈಡೇರದ ವಿಚಾರ ಇದೀಗ ಬಯಲಿಗೆ ಬಂದಿದೆ.
ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಗೂ ಮುನ್ನ ಐರ್ಲೆಂಡ್ ತಂಡದ ಭಾರತೀಯ ಮೂಲದ ಎಡಗೈ ವೇಗಿ ಜೈ ಮುಂದ್ರಾ ಒಂದು ವಿಶೇಷ ಪ್ಲಾನ್ ಮಾಡಿಕೊಂಡಿದ್ದರು. ಟೀಮ್ ಇಂಡಿಯಾದ 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರನ್ನು ಕಟ್ಟಿಹಾಕಲು ಅವರು ಗಂಟೆಗಟ್ಟಲೆ ವಿಡಿಯೋಗಳನ್ನು ವೀಕ್ಷಿಸಿ ಸಿದ್ಧತೆ ನಡೆಸಿದ್ದೆ. ಆದರೆ ಸರಣಿಯಲ್ಲಿ ವೈಭವ್‌ಗೆ ಆಡುವ ಅವಕಾಶ ಸಿಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ವೈಭವ್ ಆಡದಿದ್ದರೂ ಮುಂದಾ ಅವರ ಶ್ರಮ ಮಾತ್ರ ವ್ಯರ್ಥವಾಗಲಿಲ್ಲ. ಅವರು ಭಾರತದ ಪ್ರಮುಖ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ದೌರ್ಬಲ್ಯಗಳನ್ನು ಅರಿತು ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಎರಡು ಪಂದ್ಯಗಳ ಸರಣಿಯಲ್ಲಿ ಮುಂದ್ರಾ ಒಟ್ಟು 5 ವಿಕೆಟ್ ಪಡೆದರು. ವಿಶೇಷವಾಗಿ ಎರಡನೇ ಟಿ20 ಪಂದ್ಯದಲ್ಲಿ 32 ರನ್‌ಗಳಿಗೆ 3 ವಿಕೆಟ್ ಕಿತ್ತರು. ಅವರ ಈ ಮಾರಕ ದಾಳಿಯಿಂದಾಗಿ ಐರ್ಲೆಂಡ್ ತಂಡವು ವಿಶ್ವ ಚಾಂಪಿಯನ್ ಭಾರತದ ವಿರುದ್ಧ ಐತಿಹಾಸಿಕ ಜಯ ದಾಖಲಿಸಲು ಸಾಧ್ಯವಾಯಿತು.
ರಾಜಸ್ಥಾನದ ಜೈಪುರದಿಂದ ಐರ್ಲೆಂಡ್‌ವರೆಗೆ..
ಜೈ ಮುಂದ್ರಾ ಅವರ ಕ್ರಿಕೆಟ್ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ರಾಜಸ್ಥಾನದ ಟೋಂಕ್ ಮೂಲದ ಮುಂದ್ರಾ ಅವರು 2018ರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದಾಗ ಜೈಪುರದ ಸೀಮಾ ಸ್ಪೋರ್ಟ್ಸ್ ಕ್ಲಬ್‌ಗೆ ಬಂದು ಕೋಚ್ ಮೋಹನ್ ಸಿಂಗ್ ಅವರ ಬಳಿ ತರಬೇತಿ ಆರಂಭಿಸಿದ್ದರು. 'ಸರ್ ನನ್ನ ಬೌಲಿಂಗ್‌ನಲ್ಲಿ ಸ್ವಿಂಗ್ ಆಗುತ್ತಿಲ್ಲ, ದಯವಿಟ್ಟು ಅದನ್ನು ಹೇಳಿಕೊಡಿ,' ಎಂದು ಕೇಳಿಕೊಂಡಿದ್ದರಂತೆ. ಬಳಿಕ ಮುಂದಿನ ಮೂರು ವರ್ಷಗಳ ಕಾಲ ಮೋಹನ್ ಸಿಂಗ್ ಅವರು ಮುಂದ್ರಾ ಅವರ ಬೌಲಿಂಗ್ ಶೈಲಿಯನ್ನು ಸುಧಾರಿಸಲು ಸಹಾಯ ಮಾಡಿದರು.
ಜೈ ಮುಂದ್ರಾ ಬಾಲ್ಯದ ಕೋಚ್ ಹೇಳಿದ್ದೇನು?
ಜೈ ಮುಂದ್ರಾ ಬಾಲ್ಯದ ಕೋಚ್ ಮೋಹನ್ ಸಿಂಗ್ ಮಾತನಾಡಿ 'ಅವನು ವೈಭವ್ ಸೂರ್ಯವಂಶಿ ವಿರುದ್ಧ ಪ್ರಮುಖ ಯೋಜನೆ ರೂಪಿಸಿದ್ದ. ವೈಭವ್ ಪಂದ್ಯದಲ್ಲಿ ಆಡದಿದ್ದರೂ, ಜೈ ಮುಂದ್ರಾ ಮಾಡಿದ್ದ ಕಠಿಣ ಸಿದ್ಧತೆ ಭಾರತದ ಇತರ ದೊಡ್ಡ ಆಟಗಾರರ ವಿರುದ್ಧ ಕೆಲಸ ಮಾಡಿತು. ಸಂಜು ಸ್ಯಾಮ್ಸನ್ ಅವರನ್ನು ಎರಡು ಬಾರಿ ಔಟ್ ಮಾಡಿದ್ದಲ್ಲದೆ, ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ವಿಕೆಟ್ ಪಡೆದಿದ್ದು ಅವನ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ,' ಎಂದು ಹೇಳಿದರು.
'ಮುಂದ್ರಾ ಅವರಿಗೆ ಬಂಗಾಳ ರಣಜಿ ತಂಡಕ್ಕೆ ನೆಟ್ ಬೌಲರ್ ಆಗುವ ಅವಕಾಶ ಸಿಕ್ಕಿತು. ಅಲ್ಲಿ ಅವರ ಬೌಲಿಂಗ್ ಬ್ಯಾಟಿಂಗ್ ಕನ್ಸಲ್ಟೆಂಟ್ ಆಗಿದ್ದ ವಿವಿಎಸ್ ಲಕ್ಷ್ಮಣ್ ಮತ್ತು ಕೋಚ್ ಅರುಣ್ ಲಾಲ್ ಅವರ ಗಮನ ಸೆಳೆಯಿತು. ದೆಹಲಿಯ ಸೋನೆಟ್ ಕ್ಲಬ್‌ನ ಪ್ರಸಿದ್ಧ ಕೋಚ್ ದಿವಂಗತ ತಾರಕ್ ಸಿನ್ಹಾ ಕೂಡ ಮುಂದ್ರಾ ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದರು.
ಮುಂದ್ರಾ ಕ್ರಿಕೆಟ್‌ಗೆ ಬಂದಿದ್ದು ಹೇಗೆ?
2021ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಮುಂದ್ರಾ ಐರ್ಲೆಂಡ್‌ಗೆ ವಲಸೆ ಹೋದರು. ಅಲ್ಲಿ ಡಬ್ಲಿನ್‌ನ ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್ ಪರ ಆಡಲು ಪ್ರಾರಂಭಿಸಿದ ಅವರು, 2023ರಲ್ಲಿ ಐರಿಶ್ ಸೀನಿಯರ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ತಂಡ ಜಸ್ಪ್ರಿತ್ ಬುಮ್ರಾ ನಾಯಕತ್ವದಲ್ಲಿ ಐರ್ಲೆಂಡ್‌ಗೆ ಪ್ರವಾಸ ಕೈಗೊಂಡಾಗ ಮುಂದ್ರಾ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು. ಆಗ ಭಾರತ ತಂಡದ ಕೋಚ್ ಆಗಿದ್ದ ವಿವಿಎಸ್ ಲಕ್ಷ್ಮಣ್ ಇವರನ್ನು ತಕ್ಷಣವೇ ಗುರುತಿಸಿದ್ದರು ಮತ್ತು ಬುಮ್ರಾ ಸಹ ಕೆಲವು ಪ್ರಮುಖ ಬೌಲಿಂಗ್ ಸಲಹೆಗಳನ್ನು ನೀಡಿದ್ದರು.
ಮುಂದ್ರಾ ಜಾಗತಿಕ ತಂತ್ರಜ್ಞಾನ ಸಂಸ್ಥೆಯಾದ 'ಇಂಟೆಲ್' ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾ ಕ್ರಿಕೆಟ್ ಆಡುತ್ತಿದ್ದರು. ಆದರೆ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಲು 2025ರ ಜೂನ್‌ನಲ್ಲಿ ಅವರು ತಮ್ಮ ಕಾರ್ಪೊರೇಟ್ ಕೆಲಸವನ್ನು ತೊರೆದು ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಗಮನಹರಿಸಿದರು. ಪ್ರಸ್ತುತ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಉದ್ಯೋಗ ಹುಡುಕಾಟದ ಬ್ಯಾಡ್ಜ್ ಕಾಣಿಸುತ್ತದೆ. ಆದರೂ ಭಾರತದ ವಿರುದ್ಧದ ಈ ಅದ್ಭುತ ಪ್ರದರ್ಶನದ ನಂತರ, ಅವರಿಗೆ ಜಾಗತಿಕ ಟಿ20 ಫ್ರಾಂಚೈಸಿ ಕ್ರಿಕೆಟ್ ಹಾಗೂ ಲೀಗ್‌ಗಳಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಸಿಯಾಗುವುದಂತೂ ಖಚಿತ ಎನ್ನಲಾಗುತ್ತಿದೆ.
ಮುಂದ್ರಾ ಪೋಷಕರು ಹೇಳೋದೇನು?
ಭಾರತದ ಸೋಲಿನಿಂದ ಮುಂದ್ರಾ ಅವರ ಕುಟುಂಬಕ್ಕೆ ಭಾರತೀಯರಾಗಿ ಸ್ವಲ್ಪ ಬೇಸರವಾಗಿದ್ದರೂ, ತಮ್ಮ ಮಗ ಐರಿಶ್ ಕ್ರಿಕೆಟ್‌ನ ಹೊಸ ಹೀರೋ ಆಗಿ ಹೊರಹೊಮ್ಮಿರುವುದಕ್ಕೆ ತಾಯಿ ವಿದ್ಯಾ ಮುಂದ್ರಾ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಟೋಂಕ್‌ನಲ್ಲಿರುವ ಅವರ ನಿವಾಸಕ್ಕೆ ಈಗ ಹಿತೈಷಿಗಳು ಮತ್ತು ನೆರೆಹೊರೆಯವರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 'ಎಲ್ಲವೂ ದೇವರ ಕೃಪೆ, ಮಗ ಇದೇ ರೀತಿ ದೇಶದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ,' ಎಂದು ತಾಯಿ ಹಾರೈಸಿದ್ದಾರೆ. ಒಟ್ಟಿನಲ್ಲಿ ಇದೀಗ ಮುಂದ್ರಾ ಅವರ ಕ್ರಿಕೆಟ್ ಪಯಣ ಇದೀಗ ದಿಗ್ಗಜರ ಗಮನ ಸೆಳೆದಿದೆ.












Click it and Unblock the Notifications