ಮೋದಿ-ಪುಟಿನ್ ರಿಂದ ಅಣು ವಿದ್ಯುತ್ ಸ್ಥಾವರಕ್ಕೆ ಚಾಲನೆ, ಜಯಾ ಸಾಕ್ಷಿ

Posted By:
Subscribe to Oneindia Kannada

ಚೆನ್ನೈ, ಆಗಸ್ಟ್ 10: ತಮಿಳುನಾಡಿನ ತಿರುನಲ್ವೇಲಿಯಲ್ಲಿರುವ ಕೂಡಂಕುಳಂನಲ್ಲಿ ಭಾರತ ಹಾಗೂ ರಷ್ಯಾ ಜಂಟಿಯಾಗಿ ನಿರ್ಮಿಸಿರುವ ಅಣುವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಬುಧವಾರ ದೇಶಕ್ಕೆ ಅರ್ಪಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಜಂಟಿಯಾಗಿ ಘಟಕಕ್ಕೆ ಚಾಲನೆ ನೀಡಿದರು ಈ ಐತಿಹಾಸಿಕ ಕ್ಷಣಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಸಾಕ್ಷಿಯಾದರು.[ಕೂಡಂಕುಳಂ ವಿದ್ಯುತ್ ರಾಜ್ಯಕ್ಕೆ ಯಾವಾಗ ಸಿಗಲಿದೆ?]

Narendra Modi calls Kudankulam Unit-I another historic step in India-Russia ties

ನವದೆಹಲಿಯಲ್ಲಿ ಕುಳಿತು ಪ್ರಧಾನಿ ಮೋದಿ, ಮಾಸ್ಕೋದಲ್ಲಿ ಪುಟಿನ್ ಹಾಗೂ ಚೆನ್ನೈನಲ್ಲಿ ಜಯಲಲಿತಾ ಅವರು ಜಂಟಿಯಾಗಿ ತಿರುನಲ್ವೇಲಿಯಲ್ಲಿ ನಡೆದ ಮುಖ್ಯ ಸಮಾರಂಭದ ಉದ್ಘಾಟನೆ ಮಾಡಿದ್ದು ವಿಶೇಷ.

ಪರಿಸರ ಸ್ನೇಹಿ ಸ್ವಚ್ಛ ಇಂಧನ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನ ಭಾರತದ ದೊಡ್ಡ ಹೆಜ್ಜೆ ಇಟ್ಟಿದೆ. ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕ ಮಹತ್ವದ ಸೇರ್ಪಡೆ ಮೂಲಕ ಭಾರತ - ರಷ್ಯಾ ಮೈತ್ರಿ ಇನ್ನಷ್ಟು ಬಲಗೊಂಡಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.

Narendra Modi calls Kudankulam Unit-I another historic step in India-Russia ties

ತಮಿಳುನಾಡು ಸರ್ಕಾರ ಈ ಯೋಜನೆಗೆ 500 ಕೋಟಿ ರು ಅನುದಾನ ನೀಡಿದೆ. ಭಾರತ-ರಷ್ಯ ಪರಮಾಣು ಸಹಯೋಗದಲ್ಲಿ ಕೈಗೊಳ್ಳಲಾಗಿರುವ ವಿದ್ಯುತ್ ಉತ್ಪಾದನೆ ತಮಿಳುನಾಡಿನ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳು ವಿದ್ಯುತ್ ಹಂಚಿಕೆ ಲೆಕ್ಕಾಚಾರ ಶುರು ಮಾಡಿಕೊಳ್ಳಬೇಕಿದೆ.

ಕೂಡಂಕುಳಂ ಯೋಜನೆಯಡಿ 1,300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ನಿಯಮದ ಪ್ರಕಾರ ವಿದ್ಯುತ್ ಸ್ಥಾವರ ಇರುವ ರಾಜ್ಯಕ್ಕೆ ಉತ್ಪಾದನೆಯ ಶೇ 50 ರಷ್ಟು ಉತ್ಪನ್ನ ಸೇರಲಿದ್ದು, ಉಳಿದದ್ದು ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ. ಕರ್ನಾಟಕ 220 ಮೆ.ವ್ಯಾ ಹಾಗೂ ಕೇರಳ 133 ಮೆ.ವ್ಯಾ ವಿದ್ಯುತ್ ಬೇಡಿಕೆ ಇಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi, Russian President Vladimir Putin and Chief Minister of Tamil Nadu J Jayalalithaa jointly dedicated the Kudankulam Nuclear Power Project's first unit to the country.
Please Wait while comments are loading...