RBI Gold Sale: 12 ಬಿಲಿಯನ್ ಚಿನ್ನ ಮಾರಾಟ ಮಾಡಿತೇ ಆರ್‌ಬಿಐ: ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌, ಇಲ್ಲಿದೆ ವಿವರ

RBI Gold Sale: ಭಾರತದಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಇದರ ಬೆನ್ನಲ್ಲೇ ಭಾರತವು ಚಿನ್ನ ಮಾರಾಟಕ್ಕೆ ಮುಂದಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಿದೇಶಿ ಕರೆನ್ಸಿ ಆಸ್ತಿಗಳನ್ನು ಸುರಕ್ಷಿತವಾಗಿರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಚಿನ್ನದ ಸಂಗ್ರಹದಲ್ಲಿನ ಒಂದು ಭಾಗವನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ ಎಂದು ಸಾರ್ವಜನಿಕವಾಗಿ ಲಭ್ಯವಿರುವ ಅಂಕಿ-ಅಂಶಗಳ ಆಧಾರದಲ್ಲಿ ಬ್ಲೂಮ್‌ಬರ್ಗ್ ಎಕನಾಮಿಕ್ಸ್‌ ನಡೆಸಿದ ವಿಶ್ಲೇಷಣೆ ತಿಳಿಸಿದೆ. ಮೇ 22ರವರೆಗಿನ ಎರಡು ವಾರಗಳ ಅವಧಿಯಲ್ಲಿ ಆರ್‌ಬಿಐ ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ಚಿನ್ನದ ಸಂಗ್ರಹವನ್ನು ಮಾರಾಟ ಮಾಡಿರಬಹುದು ಹಾಗೂ 7.5 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಆಸ್ತಿಗಳನ್ನು ಖರೀದಿಸಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ: ಈ ಭಾಗಗಳಲ್ಲಿ ಭೂಮಿಗೆ ಚಿನ್ನದ ಬೆಲೆ!
ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ: ಈ ಭಾಗಗಳಲ್ಲಿ ಭೂಮಿಗೆ ಚಿನ್ನದ ಬೆಲೆ!

ಅಮೂಲ್ಯ ಲೋಹವಾದ ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ್ದರೂ ಸಹ ಆರ್‌ಬಿಐನ ಚಿನ್ನದ ನಿಕ್ಷೇಪಗಳ ವರದಿಯಾದ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಸಾಮಾನ್ಯವಾಗಿ ಇದರಿಂದ ಬ್ಯಾಂಕಿನ ಚಿನ್ನ ಮತ್ತು ಡಾಲರ್‌ಗಳ ಮೌಲ್ಯ ಹೆಚ್ಚಳವಾಗಬೇಕಿತ್ತು. ಆದರೆ, ಈ ಬೆಳವಣಿಗೆ ಆರ್‌ಬಿಐ ಚಿನ್ನವನ್ನು ಮಾರಾಟ ಮಾಡುತ್ತಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಹೇಳಲಾಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಚಿನ್ನ ಮಾರಾಟ ಮಾಡಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.

RBI Gold Sale

ಇರಾನ್ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು, ನಿರಂತರ ಬಂಡವಾಳ ಹೊರಹರಿವು ಮತ್ತು ಹೆಚ್ಚಿನ ತೈಲ ಬೆಲೆಗಳಿಂದ ಭಾರತ ಎದುರಿಸುತ್ತಿರುವ ಒತ್ತಡದ ಬಗ್ಗೆ ಚರ್ಚೆ ಶುರುವಾಗಿದೆ. ರೂಪಾಯ ಮೌಲ್ಯ ಒತ್ತಡ ಮತ್ತು ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆಯ ಹಿನ್ನೆಲೆದಲ್ಲಿ, ಆರ್‌ಬಿಐ ದ್ರವರೂಪದಲ್ಲಿರುವ ವಿದೇಶಿ ಕರೆನ್ಸಿ ಮೀಸಲುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬುದನ್ನು ಈ ಅಂಕಿ-ಅಂಶಗಳು ಉಲ್ಲೇಖಿಸಿವೆ.

ಬಡ್ಡಿದರ ಹೆಚ್ಚಳ ಮತ್ತು ವಿದೇಶಗಳಲ್ಲಿ ಹೂಡಿಕೆದಾರರಿಂದ ಡಾಲರ್‌ಗಳನ್ನು ಸಂಗ್ರಹಿಸುವುದು ಸೇರಿದಂತೆ ರೂಪಾಯಿಯನ್ನು ಸ್ಥಿರಗೊಳಿಸಲು ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಮುಂದಿದೆ ಎಂದು ಹೇಳಲಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ಆರ್‌ಬಿಐನ ಹಸ್ತಕ್ಷೇಪವು ಸ್ವಲ್ಪ ಪರಿಣಾಮ ಬೀರಿದೆ, ಮೇ 20 ರಂದು ಕರೆನ್ಸಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದ ನಂತರ, ಏಷ್ಯಾದ ಹೆಚ್ಚಿನ ಸಮಾನಸ್ಥ ರಾಷ್ಟ್ರಗಳಿಗಿಂತ ರೂಪಾಯಿ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿದೆ. ಮಂಗಳವಾರ ರೂಪಾಯಿ ಮೌಲ್ಯವು ಶೇ 0.2% ರಷ್ಟು ಕುಸಿದು 95.17 ಕ್ಕೆ ತಲುಪಿದೆ.

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾಗಿರುವ ಭಾರತವು ಮಧ್ಯಪ್ರಾಚ್ಯ ಯುದ್ಧದಿಂದ ದೇಶದಲ್ಲಿ ಇಂಧನ ಬೆಲೆಯನ್ನು ಹೆಚ್ಚಿಸಿದೆ. ವಿದೇಶಿ ಹಣ ಹೊರಹರಿವು ಹೆಚ್ಚಾಗಿ ಸ್ಥಳೀಯ ಕರೆನ್ಸಿ ಮೇಲೆ ಒತ್ತಡ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಯುದ್ಧದ ಪರಿಣಾಮಗಳಿಂದ ಆರ್ಥಿಕತೆಗೆ ಆಗುವ ಹೊಡೆತವನ್ನು ತಗ್ಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಇಂಧನ ಬೆಲೆ ಏರಿಕೆ ಹಾಗೂ ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ದ್ವಿಗುಣಗೊಳಿಸುವ ಕ್ರಮಗಳು ಸೇರಿವೆ. ಇದೇ ವಾರದಲ್ಲಿ ರೂಪಾಯಿಗೆ ಬಲ ತುಂಬುವ ಇನ್ನಷ್ಟು ಕ್ರಮಗಳನ್ನು ಅಧಿಕಾರಿಗಳು ಘೋಷಿಸುವ ಸಾಧ್ಯತೆಯಿದೆ.

RBI Gold Sale: ಆರ್‌ಬಿಐ ಸ್ಪಷ್ಟನೆ

ಇನ್ನು ಈ ವಿಚಾರವಾಗಿ ಆರ್‌ಬಿಐ ಸ್ಪಷ್ಟನೆ ನೀಡಿದೆ. ಚಿನ್ನ ಮಾರಾಟದ ವಿಚಾರವಾಗಿ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+