ಪ್ರಮಾಣ ವಚನ ಸ್ವೀಕಾರಕ್ಕೆ ಡಿಕೆಶಿ ಸಂಜೆ 4.05ನ್ನೇ ಆರಿಸಿಕೊಂಡಿದ್ದೇಕೆ? ಈ ಶುಭ ಮಹೂರ್ತದ ವಿಶೇಷವೇನು?

ಬೆಂಗಳೂರು: ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸುತ್ತಿದ್ದು, ಜೂನ್ 3ನೇ ತಾರೀಖಿನ ಸಂಜೆ 4.05ಕ್ಕೆ ಮಹೂರ್ತ ಫಿಕ್ಸ್ ಆಗಿದ್ದುತ ಇದಕ್ಕೆ ಅಂಥ ವಿಶೇಷ ಏನಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಖ್ಯಾತಿ ಜ್ಯೋತಿಷಿ ಹರೀಶ್ ಕಶ್ಯಪ್ ಅವರು ಈ ಮುಹೂರ್ತವನ್ನು ಈ ರೀತಿಯಾಗಿ ವ್ಯಾಖ್ಯಾನಿಸಿದ್ದಾರೆ.

ತುಲಾ ಲಗ್ನ: ಇನ್ನೂ ಒಳ್ಳೇ ಸಮಯ ಹಿಡಿಯಲು ಕೆಲ ವಿಚಾರಗಳು,

1. ರಾಜತ್ವ ವಿಷಯ ಆದ್ದರಿಂದ ಅಹ: ಕಾಲೇಶು ರಾಜತ್ವಂ,
ಅಂದರೆ 12.30 ಒಳಗೆ ಸೂರ್ಯನ ಬಲ ಹೆಚ್ಚು. ಮಧ್ಯಾಹ್ನ ಕಳೆದ ಮೇಲೆ ಅಲ್ಲ !

2. ಅಪರಾಹ್ನ ಕಳೆದು ಅಸ್ತ ಕಾಲಕೆ ಮುನ್ನ, ಪ್ರದೋಷಕೂ ಮುನ್ನ ಶುಭವಲ್ಲ. ಗುರು ಉದಯ, ದ್ವಿತೀಯದಲ್ಲಿ ರಾಜತ್ವಕ್ಕೆ ಅಧಿಯೋಗ ಕಾರಕ. ಇದನ್ನೇ ಬಿಟ್ಟಿರುವುದು !

3. ಲಗ್ನ ಕೇಂದ್ರದಲ್ಲಿ ಉಚ್ಚ ಗುರು ಇದ್ದರೂ, ಅದು ತೃತೀಯ, ಷಷ್ಠಾಧಿಪತಿಯು, ಅದರದೇ ಫಲವು !

4. ತೃತೀಯ ದಿಗ್ ಬಲದ ಚಂದ್ರ ಗುರುವಿಗೆ ಷಷ್ಠಾಷ್ಟಕ !

5. ಲಗ್ನಕ್ಕೆ ಅಧಿಯೋಗಿಯಾದ (ಶತ್ರು) ಕುಜನ ದೃಷ್ಟಿ, ಚಂದ್ರನಿಗೆ ಶನಿಯ ದೃಷ್ಟಿ !!

Why DK Shivakumar Chose 4 05

ಇದೆಲ್ಲವೂ ಹಲವು ಬಾಧೆಗಳ ಸಾರುತ್ತದೆ. ಇನ್ನೂ ವಿಶ್ಲೇಷಿಸಿ ಹೇಳಬಹುದಾದರೆ, 5.ಲಗ್ನಾಧಿಪತಿ ಶುಕ್ರ, 9ನೇ ಮನೆಯಲ್ಲಿ ಬುಧನೊಂದಿಗೆ ಇರುವುದು ಒಂದೇ ಒಳ್ಳೆಯದು...(ವ್ಯಯಾಧಿಪ) ಬೆಳಗ್ಗೆ ಎಲ್ಲ ಶುಭವನ್ನೂ ಕೂಡಿಸಿ, ಅಷ್ಟು ದೊಡ್ಡ ಕಾರ್ಯಕ್ರಮ ಮಾಡೋದು ರೆಡಿ ಆಗೋದು ಕಷ್ಟ ಅಂತ ಹೀಗೆ ಕೊನೆ ಮಧ್ಯಾಹ್ನ ಸಮಯ ಕೇಳಿರಬಹುದು. ಎಂದು ಹೇಳಿದ್ದಾರೆ.

ಡಿಕೆಶಿ ಸಂಪುಟದ ಸಂಭಾವ್ಯ ಸಚಿವರಿವರು: ಯತೀಂದ್ರ, ಜಾರ್ಜ್ ಸೇರಿ 13 ಮಂದಿಯ ಹೆಸರು ಇಲ್ಲಿದೆ
ಡಿಕೆಶಿ ಸಂಪುಟದ ಸಂಭಾವ್ಯ ಸಚಿವರಿವರು: ಯತೀಂದ್ರ, ಜಾರ್ಜ್ ಸೇರಿ 13 ಮಂದಿಯ ಹೆಸರು ಇಲ್ಲಿದೆ

ಡಿ ಕೆ ಶಿವಕುಮಾರ್ ಅವರಿಗೆ ಶುಭ ಕೋರಿದ ಸೋನಿಯಾ ಗಾಂಧಿ

ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ನಿಯೋಜಿತ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬುಧವಾರ ದೂರವಾಣಿ ಕರೆ ಮಾಡಿ ಶುಭ ಹಾರೈಸಿದರು.ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಿರಿ. ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸುತ್ತೀರಿ ಎಂಬ ಅದಮ್ಯ ವಿಶ್ವಾಸ ನನಗಿದೆ. ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ. ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಸೋನಿಯಾ ಗಾಂಧಿ ಅವರು ಶುಭಾಶಯ ಹೇಳಿದರು.

ಹಿರಿಯರನ್ನು ಭೇಟಿ ಮಾಡಿದ ಡಿಕೆಶಿ

ಸಿಎಲ್ ಪಿ ನಾಯಕ, ನಿಯೋಜಿತ ಸಿಎಂ ಡಿ ಕೆ ಶಿವಕುಮಾರ್ ಅವರು ಮಾಜಿ ಪ್ರಧಾನಿ ದೇವೇಗೌಡರು, ಉಸ್ತುವಾರಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಬೆಂಗಳೂರು ನಿವಾಸಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ಡಾ ಜಿ ಪರಮೇಶ್ವರ ಅವರು ಡಿ ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದರು.

13 ಸಚಿವರ ಸಂಪುಟ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಜೂನ್ 3) ಮಧ್ಯಾಹ್ನ 04:05 ಕ್ಕೆ ಲೋಕಭವನದಲ್ಲಿ ಪ್ರಮಾಣ ವಚನ ವಿಧಿಗಳು ನೆರವೇರಲಿವೆ. ಡಿಕೆಶಿ ಸಂಪುಟದಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭಾವ್ಯ ಸಚಿವರ ಪಟ್ಟಿ 'ಒನ್ ಇಂಡಿಯಾ ಕನ್ನಡ' ಜಾಲತಾಣಕ್ಕೆ ಲಭ್ಯವಾಗಿದೆ. ಕೊನೆಯ ಕ್ಷಣದ ಬದಲಾವಣೆಗಳ ಹೊರತಾಗಿ ಈ 13 ಮಂದಿ ಇಂದು ಸಚಿವರಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

KPCC New President: ಡಿಕೆಶಿ ಪದಗ್ರಹಣ ಮುನ್ನವೇ KPCC ಅಧ್ಯಕ್ಷ ಸ್ಥಾನ ಫೈನಲ್, ಬಿಕೆ ಹರಿಪ್ರಸಾದ್‌ಗೆ ಹೊಸ ಹೊಣೆ
KPCC New President: ಡಿಕೆಶಿ ಪದಗ್ರಹಣ ಮುನ್ನವೇ KPCC ಅಧ್ಯಕ್ಷ ಸ್ಥಾನ ಫೈನಲ್, ಬಿಕೆ ಹರಿಪ್ರಸಾದ್‌ಗೆ ಹೊಸ ಹೊಣೆ

ಡಿಕೆ ಶಿವಕುಮಾರ್ ಉಡುಗೆ ಹೇಗಿರಲಿದೆ?

ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬೆನ್ನಲ್ಲೇ, ಅವರ ಉಡುಗೆ-ತೊಡುಗೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆನಡೆಯುತ್ತಿದೆ. ರಾಜಕೀಯ ಕಾರ್ಯಕ್ರಮಗಳು ಇರಲಿ, ಸಾಂಸ್ಕೃತಿಕ ವೇದಿಕೆ ಇರಲಿ, ಧಾರ್ಮಿಕ ಸಮಾರಂಭಗಳಲ್ಲಿ ಡಿಕೆಶಿ ಉಡುಗೆ ಸದಾ ಆಕರ್ಷಣೀಯವಾಗಿರುತ್ತೆ. ಆಯಾ ಕಾರ್ಯಕ್ರಮಕ್ಕೆ ಹೊಂದುವಂತಹ ವಸ್ತ್ರ ತೊಡುವುದಷ್ಟೇ ಅಲ್ಲ,ಅದರ ಬಣ್ಣ, ವಿನ್ಯಾಸ ಮತ್ತು ಅಲ್ಲದೇ ಗುಚ್ಚಿ, ಪ್ರಾಡಾ, ಫುಡಿ, ಲೂಯಿ ವಿಟಾನ್, ಫೆರ್‌ಅಗಾಮೋ ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಬ್ರಾಂಡ್‌ಗಳ ಬಟ್ಟೆ, ಚಪ್ಪಲಿ, ರುಮಾಲುಗಳನ್ನು ಅವರು ಬಳಸುತ್ತಾರೆ. ಜೊತೆಗೆ ಕನ್ನಡಕ, ಕೈ ಗಡಿಯಾರಗಳೂ ಸೇರುತ್ತವೆ. ಇವತ್ತಿನ ಉಡುಗೆ ಹೇಗಿರುತ್ತೆ ಅನ್ನೋದನ್ನು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+