ಮೆಟ್ರೋ ಸೀಟಿನ ಮೇಲೆ ಕಾಲು ಚಾಚಿ ಕುಳಿತ ಪ್ರಯಾಣಿಕ: ವೈರಲ್ ಫೋಟೋಗೆ ನೆಟ್ಟಿಗರ ಆಕ್ರೋಶ

ಹೈದರಾಬಾದ್: ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ಮಹಾಗನರಗಳಲ್ಲಿ ಮೆಟ್ರೋ ರೈಲುಗಳಲ್ಲಿ ಸಂಚರಿಸುವಾಗಿ ಸಾರ್ವಜನಿಕರು ಒಂದಲ್ಲ ಒಂದು ಅಹಿತಕರ, ತೊಂದರೆ ಆಗುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಲ್ಲೊಬ್ಬ ಪ್ರಯಾಣಿಕ ಮೆಟ್ರೋದಲ್ಲಿ ಸೀಟಿನ ಮೇಲೆ ಕಾಲೂ ಕಿಟಕಿವರೆಗೂ ಚಾಚಿ ಕೂತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಶೇರ್ ಆಗುತ್ತಿದೆ.

ವ್ಯಕ್ತಿಯೊಬ್ಬರು ಮೆಟ್ರೋದಲ್ಲಿ ಪ್ರಯಾಣಿಸುವಾಗ ಮೆಟ್ರೋದಲ್ಲಿ ಕೂರಲು ಜಾಗ ಇದ್ದರೂ ದೌಲತ್ತಿನಲ್ಲಿ ಸಹ ಪ್ರಯಾಣಿಕರಿಗೆ ತೊಂದರೆ ಆಗುವಂತೆ ಸೀಟಿನ ಮೇಲೆ ಕಾಲು ಚಾಚಿಕೊಂಡು ಸೊಕ್ಕು ಪ್ರದರ್ಶಿಸಿದ್ದಾನೆ. ಈ ರೈಲು ತನ್ನ ಸ್ವಂತದ್ದೇನೋ ಎಂಬಂತಹ ವರ್ತನೆ ತೋರಿದ ಘಟನೆ ಹೈದರಾಬಾದ್ ಮೆಟ್ರೋ ರೈಲಿನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ ಫೋಟೋ ಸಮೇತ ಸುದ್ದಿ ವೈರಲ್ ಆಗುತ್ತಿದೆ.

Hyderabad Metro

ವೈರಲ್‌ ಫೋಟೋದಲ್ಲಿ ಏನಿದೆ?

ಫೋಟೋದಲ್ಲಿ ಕಾಣಿಸುವಂತೆ ಈ 'ಪ್ರಯಾಣಿಕನೊಬ್ಬ ತನ್ನ ಪಾದಗಳನ್ನು ಸೀಟುಗಳ ಮೇಲೆ ಇಟ್ಟಿದ್ದಾನೆ. ಬೇರೆಯವರು ಕೂರಲು ಆಗದಂತೆ, ಯಾರೇ ಹೇಳಿದರೂ ಅವರ ಮಾತು ಕೇಳಿದೇ ಆಕ್ರೋಶದ ಮಾತುಗಳನ್ನಾಗಿದ್ದಾನೆ. ಮೇಲ್ನೋಟಕ್ಕೆನೆ ಇದು ದುರಹಂಕಾರಿ ವರ್ತನೆ ಎಂಬುದು ಗೊತ್ತಾಗುತ್ತದೆ. ಕೂರುವ ಸೀಟಿನ ಮೇಲೆ ಅಂದರೆ ಕಿಟಕಿಯ ಹತ್ತಿರ ಕಾಳು ಹಾಕಿ ಕೂತಿದ್ದಾನೆ. ಕನ್ನಡಕ ಧರಿಸಿದ ಗಡ್ಡಧಾರಿ ವ್ಯಕ್ತಿಗೆ ಸಹ ಪ್ರಯಾಣಿಕರು ಬಂದು ಕಾಲುಗಳನ್ನು ತೆಗೆಯುವಂತೆ, ಎಲ್ಲ ಪ್ರಯಾಣಿಕರಂತೆ ಕೂರಲು ಮನವಿ ಮಾಡಿದರೂ ಆತ ನಿರ್ಲಕ್ಷಿಸಿದ್ದಾನರೆ. ಆತನ ನಡೆಗೆ ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Namma Metro: ಹಳದಿ ಮಾರ್ಗದ ಸೇವಾ ರೈಲುಗಳ ಸಂಖ್ಯೆ 10ಕ್ಕೆ ಏರಿಕೆ, ಸಂಚಾರ ಸಮಯ ಪರಿಷ್ಕರಣೆ
Namma Metro: ಹಳದಿ ಮಾರ್ಗದ ಸೇವಾ ರೈಲುಗಳ ಸಂಖ್ಯೆ 10ಕ್ಕೆ ಏರಿಕೆ, ಸಂಚಾರ ಸಮಯ ಪರಿಷ್ಕರಣೆ

ವೈರಲ್ ಆಗುತ್ತಿರುವ ಈ ಈತನ ಫೋಟೋವನ್ನು ಸ್ಥಳೀಯ ಪತ್ರಕರ್ತೆ ರೇವತಿ ಮತ್ತು ಇತರರು ತಮ್ಮ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳಲ್ಲಿ ಮರು ಹಂಚಿಕೆ ಮಾಡಲಾಗಿದೆ. ಈ ವ್ಯಕ್ತಿಯ ಅನಾಗರಿಕ, ಸಂವೇದನಾಶೀಲ ರಹಿತ ನಡವಳಿಕೆಯನ್ನು ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆಯಲ್ಲಿ ಈ ರೀತಿಯ ವರ್ತನೆ ತೋರುವವರ ವಿರುದ್ಧ ತಕ್ಕ ಶಿಕ್ಷೆ ನೀಡಬೇಕು. ಕಠಿಣ ಕ್ರಮ, ದಂಡ ವಿಧಿಸಬೇಕು ಎಂದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೆಂದು ಶಿಕ್ಷಣ ಇವರಿಗೆ ಇಲ್ಲವಾಗಿರುತ್ತದೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಇಂಥವರಿಂದ ಪ್ರಯಾಣಿಕರಿಗೂ ತೊಂದರೆ: ನೆಟ್ಟಿಗರ ಆಕ್ರೋಶ

"ಈ ವ್ಯಕ್ತಿ ರೈಲನ್ನು ಸಾರ್ವಜನಿಕ ಆಸ್ತಿ ಎಂದು ಭಾವಿಸದೇ ಸ್ವಂತ ಆಸ್ತಿ ಎಂದುಕೊಂಡಿದ್ದಾನೆಂದು ಅನ್ನಿಸುತ್ತದೆ.' 'ಮೆಟ್ರೋದಂತಹ ಸಾರ್ವಜನಿಕ ಆಸ್ತಿಯಲ್ಲಿ ಶಿಷ್ಟಾಚಾರ ಅತ್ಯಗತ್ಯ. ಆಸನಗಳ ಮೇಲೆ ನಿಮ್ಮ ಪಾದಗಳನ್ನು ಇರಿಸಿ ಇತರರನ್ನು ನಿರ್ಲಕ್ಷಿಸುವುದು ಬೇಜವಾಬ್ದಾರಿ ವರ್ತನೆ ತೋರಿದರೆ ಅವರ ವಿರುದ್ಧ ದಂಡ ಕ್ರಮ ಜರುಗಿಸಬೇಕು', 'ಈ ರೀತಿಯ ವ್ಯಕ್ತಿಗಳಿಂದ ನಿತ್ಯ ಓಡಾಡುವ ಮೆಟ್ರೋ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ' ಎಂದು ನೆಟ್ಟಿಗರು ಈ ಫೋಟೋ ಪೋಸ್ಟ್‌ಗೆ ಕಾಮೆಂಟ್ ಮಾಡಿ ಕಿಡಿ ಕಾರಿದ್ದಾರೆ. ಬಹುತೇಕ ಮಂದಿ ಆತನ ವಿರುದ್ಧ ಕ್ರಮ ಜರುಗಿಸಲು ಹೈದರಾಬಾದ್ ಮೆಟ್ರೋ ನಿಗಮದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+