• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೋದ ಚಂದ್ರಯಾನ 2ರ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ದಾಳಿ

|
Google Oneindia Kannada News

ನವದೆಹಲಿ, ನವೆಂಬರ್ 9: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2ರ ವಿಕ್ರಂ ಲ್ಯಾಂಡರ್‌ಅನ್ನು ಚಂದ್ರನ ಮೇಲೆ ಇಳಿಸುವ ವೇಳೆ ಉತ್ತರ ಕೊರಿಯಾದ ಹ್ಯಾಕರ್‌ಗಳು ಇಸ್ರೋ ಮೇಲೆ ದಾಳಿ ಮಾಡಿದ್ದವು ಎಂಬ ಆಘಾತಕಾರಿ ಸಂಗತಿ ವರದಿಯಾಗಿದೆ.

ಉತ್ತರ ಕೊರಿಯಾದ ಹ್ಯಾಕರ್‌ಗಳಿಂದ ದಾಳಿಗೊಳಗಾದ ಐದು ಸರ್ಕಾರಿ ಸಂಸ್ಥೆಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡ ಒಂದು ಸೈಬರ್ ಪರಿಣತರು ಹೇಳಿದ್ದಾಗಿ ಬ್ರಿಟನ್‌ನ 'ಡೇಲಿ ಮೇಲ್' ವರದಿ ಮಾಡಿದೆ.

ಚಂದ್ರಯಾನ 2 ಮುಕ್ತಾಯವಾಗಿಲ್ಲ: ಹೊಸ ಭರವಸೆ ನೀಡಿದ ಕೆ.ಶಿವನ್ಚಂದ್ರಯಾನ 2 ಮುಕ್ತಾಯವಾಗಿಲ್ಲ: ಹೊಸ ಭರವಸೆ ನೀಡಿದ ಕೆ.ಶಿವನ್

ತಮ್ಮ ಸಿಸ್ಟಂಗಳಿಗೆ ಉತ್ತರ ಕೊರಿಯಾದ ಸ್ಪಾಮರ್‌ಗಳು ರವಾನಿಸಿದ್ದ ಕುತಂತ್ರದ ಇಮೇಲ್‌ಗಳನ್ನು (ಫಿಶಿಂಗ್) ಇಸ್ರೋ ಸಿಬ್ಬಂದಿ ತಿಳಿಯದೆ ತೆರೆದು ಆಕಸ್ಮಿಕವಾಗಿ ಮಾಲ್‌ವೇರ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಇಸ್ರೋದ ಚಂದ್ರಯಾನ 2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕೊನೆಯ ಹಂತದಲ್ಲಿ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ಆದರೆ ಅಧಿಕಾರಿಗಳು ಚಂದ್ರಯಾನ ಯೋಜನೆ ಮೇಲೆ ಸೈಬರ್ ದಾಳಿ ನಡೆದಿದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.

ಉತ್ತರ ಕೊರಿಯಾ ಸರ್ಕಾರದ ಮಾಲ್‌ವೇರ್

ಉತ್ತರ ಕೊರಿಯಾ ಸರ್ಕಾರದ ಮಾಲ್‌ವೇರ್

ಈ ದಾಳಿಯ ಬಗ್ಗೆ ಇಸ್ರೋಗೆ ಸೆಪ್ಟೆಂಬರ್‌ನಲ್ಲಿಯೇ ಮಾಹಿತಿ ನೀಡಲಾಗಿತ್ತು. 'ಡಿಟ್ರ್ಯಾಕ್' ಎಂಬ ಮಾಲ್‌ವೇರ್ ಬಳಸಿ ದಾಳಿ ನಡೆಸಲಾಗಿದೆ. ಡಿಟ್ರ್ಯಾಕ್ ಮಾಲ್‌ವೇರ್ ಉತ್ತರ ಕೊರಿಯಾ ಸರ್ಕಾರದ ನಿಯಂತ್ರಣದಲ್ಲಿರುವ ಲಾಜಾರಸ್ ಎಂಬ ಗುಂಪಿಗೆ ಸಂಬಂಧಿಸಿದ್ದಾಗಿದೆ.

ಸೈಬರ್ ಭದ್ರತಾ ಸಂಸ್ಥೆ ಕಾಸ್ಪೆರೆಸ್ಕಿ ನೀಡಿರುವ ವರದಿ ಪ್ರಕಾರ, ಭಾರತದ 18 ರಾಜ್ಯಗಳಲ್ಲಿನ ಅರ್ಥಿಕ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಈ ಮಾಲ್‌ವೇರ್ ಪತ್ತೆಯಾಗಿದೆ.

ಆಡಳಿತದ ಕಂಪ್ಯೂಟರ್ ಮೇಲೆ ದಾಳಿ

ಆಡಳಿತದ ಕಂಪ್ಯೂಟರ್ ಮೇಲೆ ದಾಳಿ

ಇದೇ ಮಾಲ್‌ವೇರ್ ಬಳಸಿ ತಮಿಳುನಾಡಿನ ಕುಡಂಕುಳಂನಲ್ಲಿರುವ ಅಣುಶಕ್ತಿ ಸ್ಥಾವರ (ಎನ್‌ಪಿಸಿಐಎಲ್) ವ್ಯವಸ್ಥೆಯನ್ನು ಹ್ಯಾಕ್ ಮಾಡಲಾಗಿತ್ತು. ಅಣು ಸ್ಥಾವರದ ಡೇಟಾಗಳು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿತ್ತು. ಇಲ್ಲಿ ಕಾಣಿಸಿಕೊಂಡ ಮಾಲ್‌ವೇರ್‌ಗಳು ಆಡಳಿತಾತ್ಮಕ ಕಂಪ್ಯೂಟರ್‌ಗಳನ್ನು ಗುರಿಯಾಗಿರಿಸಿಕೊಂಡಿದ್ದವೇ ವಿನಾ, ಅಣುಸ್ಥಾವರ ನಿಯಂತ್ರಣ ವ್ಯವಸ್ಥೆಯನ್ನಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಪತ್ತೆಯಾಗದ ವಿಕ್ರಂ ಲ್ಯಾಂಡರ್: ಬರಿಗೈಲಿ ಮರಳಿದ ನಾಸಾ ಆರ್ಬಿಟರ್ಪತ್ತೆಯಾಗದ ವಿಕ್ರಂ ಲ್ಯಾಂಡರ್: ಬರಿಗೈಲಿ ಮರಳಿದ ನಾಸಾ ಆರ್ಬಿಟರ್

ಸೈಬರ್ ಭದ್ರತಾ ಕೇಂದ್ರಕ್ಕೆ ಮಾಹಿತಿ

ಸೈಬರ್ ಭದ್ರತಾ ಕೇಂದ್ರಕ್ಕೆ ಮಾಹಿತಿ

ದೇಶದಲ್ಲಿನ ದುರುದ್ದೇಶಪೂರ್ವಕ ಸೈಬರ್ ಚಟುವಟಿಕೆಗಳನ್ನು ಮತ್ತು ಸೈಬರ್ ಸಮರಗಳನ್ನು ನಿಭಾಯಿಸಲು ಸ್ಥಾಪಿಸಲಾಗಿರುವ ರಾಷ್ಟ್ರೀಯ ಸೈಬರ್ ಕೋಆರ್ಡಿನೇಷನ್ ಸೆಂಟರ್‌ಗೆ ಅಮೆರಿಕ ಮೂಲದ ಸೈಬರ್ ಭದ್ರತಾ ಕಂಪೆನಿಯೊಂದು ಕೂಡುಕುಳಂನ ಎನ್‌ಪಿಸಿಐಎಲ್ ಡೊಮೈನ್ ಕಂಟ್ರೋಲರ್‌ಗಳಿಗೆ ಮಾಲ್‌ವೇರ್ ಮೂಲಕ ನುಗ್ಗಿರುವ ಮಾಹಿತಿಯನ್ನು ಸೆ. 3ರಂದು ನೀಡಿದ್ದವು.

ಹ್ಯಾಕ್ ಆಗಿಲ್ಲ ಎಂದ ಇಸ್ರೋ

ಹ್ಯಾಕ್ ಆಗಿಲ್ಲ ಎಂದ ಇಸ್ರೋ

ಇಸ್ರೋದ ವ್ಯವಸ್ಥೆಗೆ ಕೂಡ ಪ್ರವೇಶಿಸಿದ್ದ ಡಿಟ್ರ್ಯಾಕ್, ಚಂದ್ರಯಾನ ಲ್ಯಾಂಡರ್ ಇಳಿಸುವ ನಿಗದಿತ ದಿನದ ಎರಡು ದಿನಕ್ಕೂ ಮೊದಲು ಸೆ.4ರಂದು ಈ ಭದ್ರತಾ ಉಲ್ಲಂಘನೆ ಮಾಡಿರುವ ಬಗ್ಗೆ ಸರ್ಕಾರಿ ಸಂಸ್ಥೆಗಳಿಗೆ ತಿಳಿಸಲಾಗಿತ್ತು. ಆದರೆ ಇಸ್ರೋ ಹ್ಯಾಕಿಂಗ್ ಪ್ರಯತ್ನಗಳಿಗೆ ತನ್ನ ವ್ಯವಸ್ಥೆ ಬಲಿಯಾಗಿಲ್ಲ ಎಂದು ಹೇಳಿತ್ತು ಎಂಬುದಾಗಿ ವರದಿ ತಿಳಿಸಿದೆ.

ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್

English summary
ISRO and Kudankulam nuclear plants were targetted by North Korean hackers with malware linked to Lazarus group, reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X