Get Updates
Get notified of breaking news, exclusive insights, and must-see stories!

Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ

ಈಗಾಗಲೇ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇದೀಗ ಚಿನ್ನದ ದರ ಕೂಡ ಏರುವ ಮೂಲಕ ಡಬಲ್‌ ಶಾಕ್‌ ನೀಡಿದೆ. ಹೂಡಿಕೆದಾರರು ಮತ್ತು ಆಭರಣ ಪ್ರೇಮಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಬೆಂಗಳೂರಿನಲ್ಲಿ ಚಿನ್ನದ ದರವು ಹೊಸ ದಾಖಲೆಯ ಮಟ್ಟವನ್ನು ತಲುಪಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ ಇಂದು ನಗರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 16,000 ರೂಪಾಯಿಯ ಗಡಿ ದಾಟಿದೆ. ನಿನ್ನೆಗಿಂತ ಇಂದು 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳಲ್ಲಿ ಏರಿಕೆ ಕಂಡುಬಂದಿದೆ. ಇಂದಿನ ದರ ವಿವರವನ್ನು ಇಲ್ಲಿ ತಿಳಿಯಿರಿ.

ಮಧ್ಯಪ್ರಾಚ್ಯದ ಸಂಘರ್ಷಗಳು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯು ಸುರಕ್ಷಿತ ಹೂಡಿಕೆಯಾಗಿರುವ ಚಿನ್ನದ ಮೇಲೆ ಒತ್ತಡ ಹೇರಿವೆ. ಭಾರತೀಯ ರೂಪಾಯಿಯ ಮೌಲ್ಯದಲ್ಲಿನ ಕುಸಿತವೂ ಸಹ ಆಮದು ಮಾಡಿಕೊಳ್ಳುವ ಚಿನ್ನದ ಬೆಲೆ ಹೆಚ್ಚಾಗಲು ಕಾರಣವಾಗಿದೆ. ಮದುವೆ ಮತ್ತು ಶುಭ ಸಮಾರಂಭಗಳ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಬೆಲೆ ಏರಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆಯೇ ಇಷ್ಟೊಂದು ಹೆಚ್ಚಾಗಿರುವುದರಿಂದ, ಆಭರಣ ಖರೀದಿದಾರರು ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

Gold Price

24 ಕ್ಯಾರೆಟ್ ಚಿನ್ನ ಇಂದು ಪ್ರತಿ ಗ್ರಾಂ ಚಿನ್ನದ ಬೆಲೆ ₹16,238 ಕ್ಕೆ ತಲುಪಿದೆ. ಇದು ಅತ್ಯಂತ ಶುದ್ಧವಾದ ಚಿನ್ನದ ದರವಾಗಿದ್ದು, ಹೂಡಿಕೆದಾರರ ಮೇಲೆ ನೇರ ಪರಿಣಾಮ ಬೀರಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,885 ರಷ್ಟಿದೆ. ಲಘು ಆಭರಣಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,179 ದಾಖಲಾಗಿದೆ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಆಭರಣ ಖರೀದಿಸಲು ಮುಂದಾಗಿರುವ ಗ್ರಾಹಕರ ಮೇಲೆ ಮತ್ತಷ್ಟು ಭಾರ ಬೀಳುವ ಸಾಧ್ಯತೆ ಇದೆ.

24 ಕ್ಯಾರೆಟ್ ಚಿನ್ನ

ಇಂದು 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ ₹16,238 ಆಗಿದ್ದು, ನಿನ್ನೆಗಿಂತ ₹70 ಹೆಚ್ಚಳವಾಗಿದೆ

8 ಗ್ರಾಂ - ₹1,29,904 (₹560 ಹೆಚ್ಚಳ)

10 ಗ್ರಾಂ - ₹1,62,380 (₹700 ಹೆಚ್ಚಳ)

100 ಗ್ರಾಂ - ₹16,23,800 (₹7,000 ಹೆಚ್ಚಳ)

22 ಕ್ಯಾರೆಟ್ ಚಿನ್ನ

22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ ₹14,885 ಆಗಿದ್ದು, ನಿನ್ನೆಗಿಂತ ₹65 ಹೆಚ್ಚಳವಾಗಿದೆ.

8 ಗ್ರಾಂ - ₹1,19,080 (₹520 ಹೆಚ್ಚಳ)

10 ಗ್ರಾಂ - ₹1,48,850 (₹650 ಹೆಚ್ಚಳ)

100 ಗ್ರಾಂ - ₹14,88,500 (₹6,500 ಹೆಚ್ಚಳ)

18 ಕ್ಯಾರೆಟ್ ಚಿನ್ನ

18 ಕ್ಯಾರೆಟ್ ಚಿನ್ನದ ದರ ಗ್ರಾಂಗೆ ₹12,179 ಆಗಿದ್ದು, ನಿನ್ನೆದಿನದ ಹೋಲಿಕೆಯಲ್ಲಿ ₹53 ಏರಿಕೆ ಕಂಡಿದೆ.

8 ಗ್ರಾಂ - ₹97,432 (₹424 ಹೆಚ್ಚಳ)

10 ಗ್ರಾಂ - ₹1,21,790 (₹530 ಹೆಚ್ಚಳ)

100 ಗ್ರಾಂ - ₹12,17,900 (₹5,300 ಹೆಚ್ಚಳ)

ಒಂದು ವಾರದಿಂದ ಚಿನ್ನದ ದರಗಳಲ್ಲಿ ಏರಿಳಿತ

ಮಾರ್ಚ್ 9ರಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿತ್ತು. ಆ ದಿನ 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ ₹16,168 ಆಗಿದ್ದು ₹196 ಇಳಿಕೆಯಾಗಿತ್ತು. 22 ಕ್ಯಾರೆಟ್ ಚಿನ್ನದ ದರ ಕೂಡ ಗ್ರಾಂಗೆ ₹14,820 ಆಗಿ ₹180 ಇಳಿಕೆಯಾಗಿತ್ತು. ಅದಕ್ಕೆ ಮುನ್ನ ಮಾರ್ಚ್ 8ರಂದು ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. 24 ಕ್ಯಾರೆಟ್ ಚಿನ್ನದ ದರ ₹16,364 ಹಾಗೂ 22 ಕ್ಯಾರೆಟ್ ಚಿನ್ನದ ದರ ₹15,000 ಆಗಿಯೇ ಮುಂದುವರಿದಿತ್ತು. ಮಾರ್ಚ್ 7ರಂದು ಮಾತ್ರ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿತ್ತು. ಆ ದಿನ 24 ಕ್ಯಾರೆಟ್ ಚಿನ್ನದ ದರ ₹16,364ಕ್ಕೆ ₹251 ಏರಿಕೆಯಾದರೆ, 22 ಕ್ಯಾರೆಟ್ ಚಿನ್ನದ ದರ ₹15,000ಕ್ಕೆ ₹230 ಏರಿಕೆಯಾಯಿತು. ಆದರೆ ಅದರ ನಂತರದ ದಿನಗಳಲ್ಲಿ ಮತ್ತೆ ಇಳಿಕೆ ಮುಂದುವರಿದಿತ್ತು. ಮಾರ್ಚ್ 6ರಂದು 24 ಕ್ಯಾರೆಟ್ ಚಿನ್ನದ ದರ ₹16,113 ಆಗಿ ₹175 ಇಳಿಕೆಯಾದರೆ, 22 ಕ್ಯಾರೆಟ್ ದರ ₹14,770 ಆಗಿ ₹160 ಇಳಿಕೆಯಾಗಿತ್ತು.

ಮಾರ್ಚ್ 3 ಮತ್ತು 2ರಂದು ಕೂಡ ಇದೇ ಪ್ರವೃತ್ತಿ ಮುಂದುವರಿದಿತ್ತು. ಮಾರ್ಚ್ 3ರಂದು 24 ಕ್ಯಾರೆಟ್ ಚಿನ್ನದ ದರ ₹16,762 ಆಗಿ ₹289 ಇಳಿಕೆಯಾಗಿದ್ದರೆ, 22 ಕ್ಯಾರೆಟ್ ದರ ₹15,365 ಆಗಿ ₹265 ಇಳಿಕೆಯಾಗಿತ್ತು. ಮಾರ್ಚ್ 2ರಂದು 24 ಕ್ಯಾರೆಟ್ ಚಿನ್ನದ ದರ ₹17,051 ಆಗಿ ₹258 ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ದರ ₹15,630 ಆಗಿ ₹235 ಇಳಿಕೆಯಾಗಿತ್ತು. ಇದರ ಮೊದಲು ಮಾರ್ಚ್ 1ರಂದು ಮಾತ್ರ ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿತ್ತು. ಆ ದಿನ 24 ಕ್ಯಾರೆಟ್ ಚಿನ್ನದ ದರ ₹17,309 ಆಗಿ ₹438 ಏರಿಕೆಯಾಗಿದ್ದರೆ, 22 ಕ್ಯಾರೆಟ್ ಚಿನ್ನದ ದರ ₹15,865 ಆಗಿ ₹400 ಏರಿಕೆಯಾಯಿತು. ಒಟ್ಟಾರೆ ಕಳೆದ 10 ದಿನಗಳಲ್ಲಿ ಚಿನ್ನದ ದರದಲ್ಲಿ ನಿರಂತರ ಏರಿಳಿತ ಕಂಡುಬಂದಿದ್ದು, ಇತ್ತೀಚಿನ ದಿನಗಳಲ್ಲಿ ಮತ್ತೆ ಸ್ವಲ್ಪ ಮಟ್ಟಿನ ಏರಿಕೆ ದಾಖಲಾಗಿದೆ.

ಕೆ.ಜಿ. ಬೆಳ್ಳಿ ಬೆಲೆ ಈಗ ₹2.90 ಲಕ್ಷ

ಬಂಗಾರದ ಬೆಲೆಯಲ್ಲಿನ ಏರಿಕೆಯ ಬೆನ್ನಲ್ಲೇ ಬೆಳ್ಳಿಯ ದರವೂ ಹೊಸ ಎತ್ತರಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆಯು ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಪ್ರತಿ ಗ್ರಾಂ ಬೆಳ್ಳಿ ₹290, ಪ್ರತಿ ಕಿಲೋಗ್ರಾಂ ಬೆಳ್ಳಿ ₹2,90,000 ಆಗಿದೆ. ಆಭರಣ ತಯಾರಕರು ಮತ್ತು ಬೆಳ್ಳಿಯ ಸಾಮಗ್ರಿಗಳನ್ನು ಖರೀದಿಸುವವರಿಗೆ ಈ ಬೆಲೆ ಏರಿಕೆಯು ದೊಡ್ಡ ಹೊರೆಯಾಗಲಿದೆ. ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹6,444 ಹಾಗೂ 10 ಗ್ರಾಂಗೆ ₹64,440 ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+