ಭಾರತದಲ್ಲಿ 6 ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅಮೆರಿಕ ಒಪ್ಪಿಗೆ
ವಾಷಿಂಗ್ಟನ್, ಮಾರ್ಚ್ 14: ಭಾರತದಲ್ಲಿ 6 ಅಣು ಸ್ಥಾವರ ನಿರ್ಮಾಣ ಮಾಡಲು ಅಮೆರಿಕ ಒಪ್ಪಿಗೆ ಸೂಚಿಸಿದೆ. ಎರಡು ದಿನಗಳ ಸತತ ಚರ್ಚೆ ಬಳಿಕ ಅಮೆರಿಕ ಈ ನಿರ್ಧಾರಕ್ಕೆ ಬಂದಿದೆ. ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಅಣು ಶಕ್ತಿ ಉತ್ಪನ್ನಗಳನ್ನು ರಫ್ತು ಮಾಡಲು ಆಸಕ್ತಿ ಹೊಂದಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹಾಗೂ ಅಮೆರಿಕಾ ಕಾರ್ಯದರ್ಶಿ ಆಂಡ್ರಿಯಾ ಈ ಕುರಿತು ಚರ್ಚೆ ನಡೆಸಿದ್ದರು. ದೇಶದ ರಕ್ಷಣೆ ದೃಷ್ಟಿಯಿಂದ ಭಾರತದಲ್ಲಿ ಆರು ಅಣು ಸ್ಥಾವರಗಳನ್ನು ನಿರ್ಮಾಣ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎರಡು ದೇಶಗಳು ಕಳೆದ ಒಂದು ವರ್ಷಗಳಿಂದ ಅಣುಸ್ಥಾವರ ನಿರ್ಮಾಣದ ಬಗ್ಗೆ ಚರ್ಚೆ ನಡೆಸುತ್ತಿವೆ. ಸಾಕಷ್ಟು ಅಡೆ ತಡೆಗಳು ಕೂಡ ಬಂದಿದ್ದವು. 2008ರಲ್ಲೇ ಸಿವಿಲ್ ನ್ಯೂಕ್ಲಿಯರ್ ಒಪ್ಪಂದ ಅಮೆರಿಕ ಮತ್ತು ಭಾರತದ ನಡುವೆ ಆಗಿತ್ತು.

2016ರಲ್ಲಿ ಅಣು ಸ್ಥಾವರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಭಾರತ ಹಾಗೂ ರಷ್ಯಾ ನಡುವೆ ಒಪ್ಪಂದವಾಗಿತ್ತು ಇದೀಗ ಅಮೆರಿಕವು ಕೂಡ ಕೈಜೋಡಿಸಿದೆ.












Click it and Unblock the Notifications