ಕೈಗಾ ಸ್ಥಾವರದ ಕುಡಿಯುವ ನೀರಲ್ಲಿ ವಿಷ
ಶಿರಸಿ
(ಉತ್ತರ ಕನ್ನಡ), ನ. 29 : ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣ ಬೆರೆತ (Radiation poisoning) ನೀರನ್ನು ಕುಡಿದು ಸುಮಾರು 55 ಮಂದಿ ನೌಕರರು ಆಸ್ಪತ್ರೆ ದಾಖಲಾಗಿರುವ ಘಟನೆ ನಡೆದಿದೆ. ಕುಡಿಯುವ ನೀರಿನಲ್ಲಿ ವಿಕಿರಣ ಬೆರತಿದೆ ಎಂದು ಹೇಳಲಾಗಿದೆ. id="toptextpromo">ಆದರೆ,
ದೋಷಪೂರಿತ ನೀರಿನ ಪರೀಕ್ಷೆ ನಡೆಸಿದ್ದು, ನೀರಿನಲ್ಲಿ ಯಾವುದೇ ವಿಕಿರಣದ ಅಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಹೇಗೆ ನಡೆಯಿತು ಎನ್ನುವ ತನಿಖೆ ಆರಂಭವಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗಿರುವ ನೌಕರರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ರೋಗಿಗಳು ಕುಡಿದಿರುವ ನೀರಿನಲ್ಲಿ ವಿಕಿರಣದ ಅಂಶವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ವಿಕಿರಣದ ಅಂಶ ಹೊಂದಿರುವ ನೀರಿನ ಪರೀಕ್ಷೆ ಮುಂದುವರಿದಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications