• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಕಿರಣ ಅನಿಲ ಸೋರಿಕೆ ಬಗ್ಗೆ ವರದಿ ತಳ್ಳಿ ಹಾಕಿದ ಚೀನಾ

By Dw News
|
Google Oneindia Kannada News

ಹಾಂಗ್ ಕಾಂಗ್‌, ಜೂನ್ 16: ಚೀನಾ ಅಧೀನದಲ್ಲಿರುವ ಪರಮಾಣು ಆಧಾರಿತ ವಿದ್ಯುತ್ ಸ್ಥಾವರರಿಂದ ಅಣುವಿಕಿರಣ ಸೋರಿಕೆಯಾಗಿದೆ ಎಂದು ಸಿಎನ್ಎನ್ ಸಂಸ್ಥೆ ಪ್ರಸಾರ ಮಾಡಿದ ವರದಿ ಬಗ್ಗೆ ಚೀನಾ ಬುಧವಾರದಂದು ಸ್ಪಷ್ಟನೆ ನೀಡಿದೆ. ಚೀನಾ ಪ್ರಭುತ್ವದ ಅಧೀನದಲ್ಲಿರುವ ಹಾಂಗ್ ಕಾಂಗ್‌ನಲ್ಲಿರುವ ಸ್ಥಾವರವೊಂದರ ರಿಯಾಕ್ಟರ್ ಹಾಳಾಗಿರುವ ವರದಿ ಬಂದಿದೆ.

ಈ ರಿಯಾಕ್ಟರ್‌ನ ಐದು ಅನಿಲ ರಾಡ್ ತುಂಡಾಗಿದ್ದು, ಇದರಿಂದ ವಿಕಿರಣ ಅನಿಲ ಸೋರಿಕೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಉಷ್ಣಸ್ಥಾವರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವರದಿಯನ್ನು ತಳ್ಳಿ ಹಾಕಿದ್ದಾರೆ.

ಗುವಾಂಗ್ ಡಾಂಗ್ ಪ್ರಾಂತ್ಯದ ತೈಶಾನ್ ಅಣು ವಿದ್ಯುತ್ ಸ್ಥಾವರದ ರಿಯಾಕ್ಟರ್ ಜಖಂಗೊಂಡಿರುವ ಬಗ್ಗೆ ವರದಿಗಳು ಬಂದಿರುವ ಬಗ್ಗೆ ಆತಂಕ ಮೂಡಿತ್ತು. ಆದರೆ, ಸದ್ಯ ಸ್ಥಾವರ ದುರಸ್ತಿ ಹಂತದಲ್ಲಿದ್ದು, ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾ ನೀಡಿದ ಸ್ಪಷ್ಟನೆ ಏನು?
''ವಿಕಿರಣಗಳ ಸೋರಿಕೆ ಸಾಧ್ಯವಿಲ್ಲ, ವಿಕಿರಣ ಅನಿಲ ಸೋರಿಕೆಯಾಗದಂತೆ ತಡೆ ನಿರ್ಮಿಸಲಾಗಿದ್ದು, ಅತ್ಯಂತ ಸುರಕ್ಷಿತ ವಿಧಾನ ಅನುಸರಿಸಲಾಗಿದೆ,'' ಎಂದು ಚೀನಾದ ಪರಿಸರ ಖಾತೆ ಸಚಿವಾಲಯವು ತೈಶಾನ್ ಸ್ಥಾವರದ ಬಗ್ಗೆ ಸ್ಪಷ್ಟನೆ ನೀಡಿದೆ.

The Taishan nuclear facility is 135 kilometers (85 miles) west of Hong Kong

''ಪ್ರಮುಖ ಘಟಕದಲ್ಲಿ ಸುಮಾರು 60,000ಕ್ಕೂ ಅಧಿಕ ಅನಿಲ ಕೊಳವೆಗಳಿದ್ದು, ಸದ್ಯದ ಘಟನೆಯನ್ನು ಗಣನೆಗೆ ತೆಗೆದುಕೊಂಡರೆ 0.01% ರಷ್ಟು ಹಾಳಾಗಿದೆ ಎನ್ನಬಹುದು ಅಷ್ಟೇ, ಕೊಳವೆ ಜಖಂ ಆಗುವುದು ಸಾಮಾನ್ಯ ಸಂಗತಿಯಾಗಿದ್ದು, ಇದರಿಂದ ವಿಕಿರಣ ಸೋರಿಕೆಯಾಗದಂತೆ ಸುರಕ್ಷಿತ ಕ್ರಮಗಳನ್ನು ಅನುಸರಿಸಲಾಗಿದೆ.


ಕೈಗಾರಿಕೆಗಳಲ್ಲಿ ಬಳಸುವ ಸುರಕ್ಷಿತ ಪರಿಮಿತಿಯೊಳಗೆ ಸ್ಥಾವರದಲ್ಲಿ ಕಾರ್ಯ ನಿರ್ವಹಣೆ ನಡೆಸಲಾಗುತ್ತಿದೆ, ಪರಿಸರಕ್ಕೆ ವಿಷಗಾಳಿ, ವಿಕಿರಣ ಅನಿಲ ಸೋರಿಕೆಯಾಗಿಲ್ಲ,'' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಎನ್ಎನ್ ವರದಿ ಪರಿಮಾಣ:
ತೈಶಾನ್ ಪರಮಾಣು ಆಧಾರಿತ ವಿದ್ಯುತ್ ಸ್ಥಾವರರಿಂದ ಅಣುವಿಕಿರಣ ಸೋರಿಕೆಯಾಗಿದೆ ಎಂದು ಸಿಎನ್ಎನ್ ಸಂಸ್ಥೆ ಕಳೆದ ವಾರ ವರದಿ ಮಾಡಿತ್ತು. ಈ ಬಗ್ಗೆ ಅಮೆರಿಕ ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಿತ್ತು. ಘಟಕದ ನಿರ್ವಹಣೆ ನಡೆಸುತ್ತಿರುವ ಫ್ರಾನ್ಸ್ ಮೂಲದ ಫ್ರಮಾಟೋಮೆ ಕೂಡಾ ಸ್ಥಾವರದ ಕಾರ್ಯಕ್ಷಮತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಲಾಗಿತ್ತು.


Electricite de France (EDF) ಒಡೆತನದ ಫ್ರಮಾಟೋಮೆ ನೀಡಿದ ಹೇಳಿಕೆ ಆಧಾರದ ಮೇಲೆ ಯುರೇನಿಯಂ ಅನಿಲ ಕೊಳವೆ ಜಖಂಗೊಂಡಿದ್ದು, ರಿಯಾಕ್ಟರ್ ಹಾಳಾಗಿದೆ ಎಂದು ಸಿಎನ್ಎನ್ ಸುದ್ದಿ ಬಿತ್ತರಿಸಿತ್ತು. ಈ ಹಿಂದೆ ಕೂಡಾ ಅತ್ಯಲ್ಪ ಪ್ರಮಾಣದಲ್ಲಿ ವಿಕಿರಣ ಅನಿಲ ಸೋರಿಕೆಯಾಗಿದ್ದು, ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತೈಶಾನ್ ಸ್ಥಾವರ ಹೇಳಿಕೊಂಡಿತ್ತು. ಇದೆಲ್ಲ ಆತಂಕದ ವರದಿಗಳಿಗೆ ಚೀನಾ ಫುಲ್ ಸ್ಟಾಪ್ ಇಟ್ಟಿದೆ. (AFP, AP, Reuters)

English summary
China has blamed damaged fuel rods for rising levels of radiation in its first confirmation of the incident that prompted concern over the facility's safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X