ಮನಿ ಪ್ಲಾಂಟ್ ನೆಟ್ಟ ನಂತರವೂ ಹಣ ಉಳಿಯುತ್ತಿಲ್ಲವೇ? ಗಿಡ ಹೀಗಿದೆಯಾ ಒಮ್ಮೆ ಚೆಕ್ ಮಾಡಿ
ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಮನೆ ಮಂದಿಯ ಕೈಯ್ಯಲ್ಲಿ ಹಣ ಉಳಿಯುತ್ತದೆ ಎನ್ನುವುದು ನಂಬಿಕೆ. ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗತ್ತದೆ, ಸಂಪತ್ತು ತರುತ್ತದೆ ಎಂದು ಹೇಳಲಾಗುತ್ತದೆ.
ಮನಿ ಪ್ಲಾಂಟ್‌ನಿಂದಾಗುವ ಪ್ರಯೋಜನ:
ಮನಿ ಪ್ಲಾಂಟ್ ನೆಟ್ಟರೆ ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ ಎನ್ನುವುದು ಸಾಮಾನ್ಯವಾಗಿ ಇರುವ ನಂಬಿಕೆ. ಯಾವ ಮನೆಯಲ್ಲಿ ಮನಿ ಪ್ಲಾಂಟ್ ಇರುತ್ತದೆಯೋ ಅಲ್ಲಿ ಹಣಕಾಸಿನ ಸಮಸ್ಯೆ ಇರುವುದೇ ಇಲ್ಲ ಎನ್ನಲಾಗಿದೆ.

ಮನಿ ಪ್ಲಾಂಟ್ ಇದ್ದರೂ ಹಣ ಉಳಿಯುವುದಿಲ್ಲವೇ?:
ಆದರೆ ಕೆಲವೊಮ್ಮೆ ಮನೆಯಲ್ಲಿ ಮನಿಪ್ಲಾಂಟ್ ನೆಟ್ಟರೂ, ಆ ಗಿಡ ಚೆನ್ನಾಗಿ ಬೆಳೆದಿದ್ದರೂ ಹಣ ಉಳಿಯುವುದೇ ಇಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ ಎಷ್ಟೇ ಸಂಪಾದಿಸಿದರೂ ಹಣ ಖಾಲಿಯಾಗಿ ಬಿಡುತ್ತದೆ.
ಹೀಗೆ ಯಾಕಾಗುತ್ತಿದೆ ಎನ್ನುವ ಪ್ರಶ್ನೆ ನಿಮ್ಮನ್ನೂ ಕಾಡುತ್ತಿದ್ದರೆ, ಮನಿ ಪ್ಲಾಂಟ್ ನೆಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆಗ ಮಾತ್ರ ಮನಿ ಪ್ಲಾಂಟ್ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಇಲ್ಲವಾದರೆ ಮನಿ ಪ್ಲಾಂಟ್ ಇದ್ದರೂ ಮನಿ ಮಾತ್ರ ಇರುವುದಿಲ್ಲ.
ಮನಿ ಪ್ಲಾಂಟ್ ಹೀಗೆದೆಯೇ?:
ವಾಸ್ತು ಪ್ರಕಾರ, ಮನೆಯಲ್ಲಿ ಒಂದು ಕುಂಡದಲ್ಲಿ ಮನಿ ಪ್ಲಾಂಟ್ ನೆಟ್ಟಾಗ ಅದು ಮೇಲಕ್ಕೆ ಹೋಗುತ್ತಿರಬೇಕು. ಮನಿ ಪ್ಲಾಂಟ್ ಯಾವುದೇ ಕಾರಣಕ್ಕೂ ನೆಲದ ಮೇಲೆ ಹರಡಿಕೊಳ್ಳಬಾರದು. ಮನಿ ಪ್ಲಾಂಟ್ ಎಲೆಗಳು ನೆಲಕ್ಕೆ ತಾಕಿದರೆ ಅಥವಾ ನೆಲದ ಮೇಲೆ ಹರಡಿಕೊಂಡರೆ ನಮ್ಮ ಹಣಕಾಸಿನ ಸ್ಥಿತಿ ಕೂಡಾ ನೆಲ ಹಿಡಿಯುತ್ತದೆ. ಹಾಗಾಗಿ ಈ ಗಿಡ ನೆಡುವಾಗಲೇ ಒಂದು ಕಂಬ ಹಾಕಿ ಹಗ್ಗ ಜಟ್ಟಿ ಬಳ್ಳಿ ಮೇಲಕ್ಕೆ ಏರುವಂತೆ ಮಾಡಬೇಕು.ಬಳ್ಳಿ ಮೇಲ್ಮುಖವಾಗಿ ಬೆಳೆದಂತೆ ನಿಮ್ಮಲ್ಲಿ ಹಣವೂ ಉಳಿಯುತ್ತದೆ. ಸಂಪತ್ತು ಹೆಚ್ಚಾಗುತ್ತದೆ.
ನೀರಿನ ಜೊತೆ ಎರಡು ಹನಿ ಹಾಲು:
ಇನ್ನು ಸನಾತನ ಧರ್ಮದ ಪ್ರಕಾರ, ಮನಿ ಪ್ಲಾಂಟ್‌ನಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬೇಕಾದರೆ ಅದಕ್ಕೆ ನೀರು ಹಾಕುವಾಗ ನೀರಿನ ಜೊತೆ ಕೆಲವು ಹನಿ ಹಾಲು ಸೇರಿಸಬೇಕು. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ನಂಬಲಾಗಿದೆ. ಜೊತೆಗೆ ಮನಿ ಪ್ಲಾಂಟ್ ಕಾಂಡಕ್ಕೆ ಕೆಂಪು ದಾರ ಕಟ್ಟಿದರೆ ಪರಿಣಾಮ ಹೆಚ್ಚು ಎನ್ನಲಾಗಿದೆ.
ಈ ರೀತಿ ಯಾವತ್ತೂ ನೆಡಬೇಡಿ:
ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅನ್ನು ಕದ್ದು ನೆಡಲೇಬಾರದು. ಕದ್ದು ನೆಟ್ಟ ಗಿಡ ಎಷ್ಟೇ ಸೊಂಪಾಗಿ ಬೆಳೆದರೂ ಅದು ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುವುದಿಲ್ಲವಂತೆ.
ಸರಿಯಾದ ದಿಕ್ಕು:
ವಾಸ್ತು ಶಾಸ್ತ್ರದಲ್ಲಿ, ಮನೆಯ ಆಗ್ನೇಯ ದಿಕ್ಕು ಅಂದರೆ ಅಗ್ನಿ ಮೂಲೆಯಲ್ಲಿ ಮನಿ ಪ್ಲಾಂಟ್ ಇಟ್ಟರೆ ಒಳ್ಳೆಯದು. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ. ಬಡತನ ದೂರವಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇರಿಸುವುದರಿಂದ ನಕಾರಾತ್ಮಕ ಶಕ್ತಿಯು ನಿಮ್ಮ ಮನೆ ಮತ್ತು ಕುಟುಂಬದಿಂದ ದೂರವಿರುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಈ ಗಿಡ ನೆಟ್ಟರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುವುದು.
ಹೇಗೆ ನೆಡಬೇಕು ?:
ಮನಿ ಪ್ಲಾಂಟ್ ಅನ್ನು ಗಾಜಿನ ಬಾಟಲಿಯಲ್ಲಿ ಎಂದಿಗೂ ನೆಡಬಾರದು. ಗಾಜಿನ ಬಾಟಲಿಯು ಸಸ್ಯದ ಬೇರುಗಳು ಹರಡಲು ಸಾಕಷ್ಟು ಜಾಗವನ್ನು ಒದಗಿಸುವುದಿಲ್ಲ. ಇದು ಅರ್ಧದಲ್ಲಿಯೇ ಮುರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಮುರಿದಾಗ ಗಿಡ ಅಥವಾ ಅದರ ಎಲೆಗಳು ನೆಲಕ್ಕೆ ತಾಕುತ್ತದೆ.ಎಲೆ ನೆಲಕ್ಕೆ ತಾಗಿದರೆ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯೇ ಆಗುವುದು.
ಒಣಗದಂತೆ ನೋಡಿಕೊಳ್ಳಿ:
ನಿಮ್ಮ ಮನೆಯಲ್ಲಿರುವ ಮನಿ ಪ್ಲಾಂಟ್ ಯಾವತ್ತೂ ಒಣಗದಂತೆ ನೋಡಿಕೊಳ್ಳಿ. ಒಣಗಿರುವ ಎಲೆಗಳನ್ನು ಗಿಡದಲ್ಲಿ ಬಿಡಬೇಡಿ.ಅದನ್ನು ತಕ್ಷಣ ಕಿತ್ತು ಬಿಸಾಡಿ.
ಗಿಡವನ್ನು ಮನೆಯೊಳಗೆ ನೆಡಿ:
ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಮನೆಯೊಳಗೆ ನೆಡಬೇಕು. ಏಕೆಂದರೆ ಹೊರಗಿನಿಂದ ಬರುವ ಅತಿಥಿಗಳು ಸಸ್ಯದ ಬೆಳವಣಿಗೆಯನ್ನು ನೋಡಿ ಅಸೂಯೆಪಡಬಹುದು. ಅವರ ಕೆಟ್ಟ ದೃಷ್ಟಿಯಿಂದ ಎಲೆಗಳು ಒಣಗಬಹುದು. ಮನಿ ಪ್ಲಾಂಟ್ ಅನ್ನು ಎಂದಿಗೂ ಇತರರಿಗೆ ಉಡುಗೊರೆಯಾಗಿ ನೀಡಬಾರದು ಎನ್ನುವುದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ.
ಮನಿಪ್ಲಾಂಟ್ ಜೊತೆಗೆ ಈ ಗಿಡ ನೆಡಿ:
ಮನಿಪ್ಲಾಂಟ್ ಮತ್ತು ತುಳಸಿ ಎರಡೂ ಸುಖ, ಸಮೃದ್ಧಿ, ಸಂತೋಷಕ್ಕೆ ಕಾರಣವಾಗುವ ಸಸಿಗಳು. ಹಾಗಾಗಿ ಇವುಗಳನ್ನು ಒಟ್ಟಿಗೆ ನೆಟ್ಟರೆ ಪ್ರಯೋಜನ ಕೂಡಾ ದುಪ್ಪಟ್ಟಾಗುವುದು.ಈ ಎರಡು ಗಿಡಗಳನ್ನು ಒಟ್ಟಿಗೆ ನೆಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಲು ಪ್ರಾರಂಭಿಸುತ್ತದೆ.
ಹೀಗೆ ಮಾಡಲೇಬಾರದು:
ವಾಸ್ತು ಪ್ರಕಾರ, ಮನಿ ಪ್ಲಾಂಟ್ ಮತ್ತು ತುಳಸಿಯನ್ನು ಮುಳ್ಳಿನ ಗಿಡಗಳ ಬಳಿ ಇರಿಸಲೇಬಾರದು. ಒಂದು ವೇಳೆ ಹೀಗೆ ಮಾಡಿದರೆ ಸಸ್ಯದ ಸಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications