ಜನರಿಗೆ ನೆಮ್ಮದಿಯ ಸುದ್ದಿ: ರಾಜ್ಯದ ಮೊದಲ 'ಎಬೋಲಾ' ಕೇಸ್ ಟೆಸ್ಟ್ ರಿಪೋರ್ಟ್ ರಿವೀಲ್: ದಿನೇಶ್ ಗುಂಡೂರಾವ್
ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಎಬೋಲಾ ರೋಗ ಪತ್ತೆಯಾಗಿದ್ದು, ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿತ್ತು. ಮತ್ತೆ ಕೊರೋನಾ ರೀತಿಯ ರೋಗದಂತೆ ಇದು ವ್ಯಾಪಿಸಿ ಬಾಧಿಸಲಿದೆ ಎಂದು ಏನೇನೋ ಚಿಂತೆಯಲ್ಲು ಮುಳಗಿದ್ದರು. ಅವರಿಗೀಗ ರಾಜ್ಯ ಆರೋಗ್ಯ ಸಚಿವರು ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಪತ್ತೆ ಆಗಿದೆ ಎನ್ನಲಾಗಿದ ಮೊದಲ 'ಎಬೋಲಾ' ಪ್ರಕರಣ ವೈದ್ಯರ ತಪಾಸಣಾ ವರದಿ ಕುರಿತು ಅವರು ಅಪ್ಡೇಟ್ ನೀಡಿದ್ದಾರೆ.
ಉಗಾಂಡದಿಂದ ಕರ್ನಾಟಕದಿಂದ ಬಂದಿದ್ದ ಮಹಿಳೆಯಲ್ಲಿ ಎಬೋಲಾ ಪ್ರಕರಣ ವರದಿ ಆದ ವಿಷಯ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜನರ ಆತಂಕಗೊಂಡಿದ್ದರು. ಎಬೋಲಾ ಕುರಿತು ಎಕ್ಸ್ ಪೊಸ್ಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, 'ಶಂಕಿತ ಎಬೋಲಾ ಪ್ರಕರಣದ ಪ್ರಯೋಗಾಲಯ ತಪಾಸಣಾ ವರದಿ ಈಗ ಬಂದಿದೆ. ಸಂಪೂರ್ಣವಾಗಿ ವರದಿ 'ನೆಗೆಟಿವ್' ಆಗಿದೆ. ಆ ವ್ಯಕ್ತಿಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಆರೋಗ್ಯ ಇಲಾಖೆಯ ತಜ್ಞ ವೈದ್ಯರು ಖಚಿತಪಡಿಸಿದ್ದಾರೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.

ಶಂಕೆ ವ್ಯಕ್ತವಾದ ತಕ್ಷಣವೇ ಆರೋಗ್ಯ ಇಲಾಖೆಯು ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳ ಅನ್ವಯ ಅತ್ಯಂತ ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ವೈದ್ಯಕೀಯ ನಿಯಮಾವಳಿಗಳನ್ನು ಪಾಲಿಸಿದೆ.
ಆರೋಗ್ಯ ಸವಾಲು ಎದುರಿಸಲು ಸರ್ಕಾರ ಸಿದ್ಧ
ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ರಾಜ್ಯದ ಜನತೆಗೆ ನಾನು ಭರವಸೆ ನೀಡಲು ಬಯಸುತ್ತೇನೆ. ನಮ್ಮ ಆರೋಗ್ಯ ಇಲಾಖೆಯು ಪ್ರತಿಯೊಂದು ಪರಿಸ್ಥಿತಿಯನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ರೀತಿಯ ಸವಾಲನ್ನು ಎದುರಿಸಲು ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಸಂಪೂರ್ಣವಾಗಿ ತಯಾರಾಗಿದೆ ಎಂದು ತಿಳಿಸಿದರು.
ಅನಗತ್ಯ ಆತಂಕ ಬೇಡ ಎಂದ ಸಚಿವ
ಯಾರೂ ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು ಎಂದು ಕಳಕಳಿಯಿಂದ ವಿನಂತಿಸುತ್ತೇನೆ. ವದಂತಿಗಳಿಗೆ ಕಿವಿಗೊಡದೆ, ನಿಗದಿಪಡಿಸಿದ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸರ್ಕಾರ ಮತ್ತು ಆರೋಗ್ಯ ಇಲಾಖೆ ಅಧಿಕೃತವಾಗಿ ಹೊರಡಿಸುವ ಮಾಹಿತಿ ಹಾಗೂ ಪ್ರಕಟಣೆಗಳನ್ನು ಮಾತ್ರ ಪರಿಗಣಿಸಿ, ನಿಯಮ ಪಾಲಿಸಬೇಕು. ನಿಮ್ಮ ಆರೋಗ್ಯದ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಅವರು ಪುನುರಚ್ಚರಿಸಿದರು.
ಎಬೋಲಾ ರೋಗ ಲಕ್ಷಣದ ಮಹಿಳೆ ಕ್ವಾರಂಟೈನ್!
ಉಗಾಂಡಾದಿಂದ ಅಹಮದಾಬಾದ್‌ಗೆ ತೆರಳಿದ್ದ ಮಹಿಳೆಯು ಬೆಂಗಳೂರಿಗೆ ಆಗಮಿಸಿದ್ದರು. ಅವರಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಅವರನ್ನು 21 ದಿನ ಕ್ವಾರಂಟೈನ್‌ನಲ್ಲಿ ಇಡಲು ಆರೋಗ್ಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದೇ ವೇಳೆ ಅವರ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈ ಮೂಲಕ ಕರ್ನಾಟಕಕ್ಕೆ ಎಬೋಲಾ ರೋಗ್ಯ ಅಧಿಕೃತವಾಗಿ ಪ್ರವೇಶಿಸಿದೆ ಎನ್ನಲಾಯಿತು.
ಆದರೆ ಲ್ಯಾಬ್‌ನಿಂದ ಆ ಮಹಿಳೆಯ ವರದಿ ಪ್ರಕಟವಾಗಿದ್ದು, ಅವರಿಗೆ ಯಾವುದೇ ರೋಗವಿಲ್ಲ. ಎಬೋಲಾ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆಂದು ಸ್ವತಃ ಸಚಿವರೇ ತಿಳಿಸಿದ ಮೇಲೆ ಜನರ ಆತಂಕ ದೂರವಾಗಿದೆ. ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.













Click it and Unblock the Notifications