ಕರ್ನಾಟಕದಲ್ಲಿ ಕೋಳಿ ಸಾಕಾಣಿಕೆ ವಿಚಾರದಲ್ಲಿ ರೈತರಿಗೆ ಬಿಗ್ ರಿಲೀಫ್: ಸರ್ಕಾರದಿಂದ ಕನಿಷ್ಠ ದರ ಫಿಕ್ಸ್
ಕೋಳಿ ಸಾಕಾಣಿಕೆಗೆ ಸಂಬಂಧಿಸಿದಂತೆ ಕನಿಷ್ಠ ಸಾಕಾಣಿಕೆ ದರ ನಿಗದಿ ಮಾಡಲಾಗಿದೆ. ಕೋಳಿ ಸಾಕಾಣಿಕೆ ವಿಚಾರದಲ್ಲಿ ರೈತರ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ. ಕಳೆದ ಎಂಟು ತಿಂಗಳಿಂದ ಕನಿಷ್ಠ ಕೋಳಿ ಸಾಕಾಣಿಕೆ ದರವಾಗಿ ಕೆಜಿಗೆ 20 ರೂ ನಿಗದಿ ಮಾಡುವಂತೆ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೋಳಿ ಸಾಕಾಣಿಕೆ ರೈತರು ಹೋರಾಟ ಮಾಡುತ್ತಿದ್ದರು. ಮದ್ಯಂತರ ದರವಾಗಿ 10 ರೂ ನಿಗದಿ ಪಡಿಸಲು ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶಿಸಿದೆ. ಇದು ಕೋಳಿ ಸಾಕಾಣಿಕೆ ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸಮಿತಿ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶುಸಂಗೋಪನ ಇಲಾಖೆಯ ಸಚಿವ ಕೆ.ವೆಂಕಟೇಶ್, ಪಶುಸಂಗೋಪನ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ಕುಕ್ಕಟ ಮಹಾಮಂಡಳಿ ಅಧ್ಯಕ್ಷರಿಗೆ ಆಡಳಿತ ಅಧಿಕಾರಿಗೆ ಕೋಳಿ ಸಾಕಾಣಿಕ ರೈತರ ಪ್ರಮುಖ ಸಮಸ್ಯೆಯಾದ ಕಂಪನಿಗಳಿಂದ ಸಾಕಾಣಿಕ ವೆಚ್ಚವನ್ನು ಮಿನಿಮಮ್ ಸಾಕಾಣಿಕ ವೆಚ್ಚ 20 ರೂಪಾಯಿಗೆ ನಿಗದಿ ಮಾಡಲು ಮನವಿಯನ್ನು ಸಲ್ಲಿಸಿ ಹಲವು ಹಂತದ ಪ್ರತಿಭಟನೆಗಳನ್ನು ನಡೆಸಿ ಒತ್ತಾಯಿಸಲಾಗಿತ್ತು.

ಇದರ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಕೋಳಿ ಸಾಕಾಣಿಕ ರೈತರಿಗೆ ಸಾಲ ಸೌಲಭ್ಯ ಕೋಳಿ ಸಾಕಾಣಿಕ ರೈತರಿಗೆ ಸಹಾಯಧನ ಸೌಲಭ್ಯಗಳನ್ನು ನೀಡಬೇಕೆಂದು ಮನವಿಯನ್ನು ಮನವಿಯನ್ನು ಸಹ ಸಲ್ಲಿಸಲಾಗಿತ್ತು. ಇನ್ನು ಪಶುಸಂಗೋಪನ ಆಯುಕ್ತರು ಕಂಪನಿಗಳು ಮತ್ತು ರೈತರ ಸಭೆಯನ್ನು ನಡೆಸಿದ್ದರು. ನಂತರ 31/1/2026 ರಂದು ಮತ್ತೊಂದು ಸುತ್ತಿನ ಕಂಪನಿಗಳು ಮತ್ತು ರೈತರ ಸಭೆಯನ್ನು ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು ಮತ್ತೆ 11/2/2026 ರಂದು ಕಂಪನಿಗಳನ್ನು ಮಾತ್ರ ಸಭೆ ಕರೆದು ಚರ್ಚೆ ಮಾಡಿ ರೈತರ ಮತ್ತು ಕಂಪನಿಗಳ ಅಭಿಪ್ರಾಯವನ್ನು ಪಡೆದುಕೊಂಡು ಸರ್ಕಾರದ ಹಂತದಲ್ಲಿ ಅಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ನಡೆಸಿದ್ದರು.
ಇದರ ಮಧ್ಯದಲ್ಲಿ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಕೆಜಿಎಫ್ ಶಾಸಕರು ಡಾಕ್ಟರ್ ರೂಪಕಲಾ ಶಶಿಧರ್ ಅವರು ನಮ್ಮ ಸಂಘದ ಮನವಿಯ ಮೇರೆಗೆ ರೈತರ ಸಮಸ್ಯೆಗಳನ್ನು ಸದನದಲ್ಲಿ ಪ್ರಶ್ನೆ ಮಾಡುವ ಮುಖಾಂತರ ಸರ್ಕಾರದ ಗಮನವನ್ನು ಸೆಳೆದಿದ್ದರು ಪಶುಸಂಗೋಪನ ಸಚಿವರು ಉತ್ತರವಾಗಿ ಸರ್ಕಾರದ ಹಂತದಲ್ಲಿ ಸಮಿತಿಯನ್ನು ರಚನೆ ಮಾಡಿ ಸಮಿತಿಯ ವರದಿ ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ಉತ್ತರದಲ್ಲಿ ತಿಳಿಸಿದರು ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೋಳಿ ಸಾಕಾಣಿಕ ರೈತರಿಗೆ ಆಗುತ್ತಿರುವ ನಷ್ಟವನ್ನು ಪರಿಗಣಿಸಿ ಹಾಗೂ ಆರ್ಥಿಕ ಸಂಕಷ್ಟಕ್ಕೆ ತಕ್ಷಣದ ಪರಿಹಾರ ಕ್ರಮವಾಗಿ ಮಧ್ಯಂತರ ಆದೇಶವಾಗಿ ಕನಿಷ್ಠ ಸಾಕಾಣಿಕ ವೆಚ್ಚ 10 ರೂಪಾಯಿ ನಿಗದಿ ಮಾಡಿ ಸರ್ಕಾರ ಆದೇಶ ಮಾಡಿದೆ.
ಈ ಆದೇಶವನ್ನು ಜಾರಿ ಮಾಡುವ ಕೆಲಸವನ್ನು ಪಶುಭವನದ ಆಯುಕ್ತರಿಗೆ ವಹಿಸಲಾಗಿದೆ ಈ ಎಲ್ಲಾ ಕ್ರಮವನ್ನು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕ ಕ್ಷೇಮಾಭಿವೃದ್ಧಿ ಸಂಘ ಸ್ವಾಗತಿಸುತ್ತೇವೆ.
ಪಶುಸಂಗೋಪನ ಸಚಿವರು ಕೆ ವೆಂಕಟೇಶ್ ಅವರಿಗೆ ಕೆಜಿಎಫ್ ಶಾಸಕ ರೂಪಕಲಾ ಶಶಿಧರ್ ಅವರಿಗೆ ಆಯುಕ್ತರು ಶಿಲ್ಪಾನಾಗ್ ಅವರಿಗೆ ಕುಕ್ಕಟ ಮಹಾಮಂಡಳಿಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಲಾಗಿದೆ. ಸಮಿತಿ ಸಭೆಯು ಆದಷ್ಟು ಶೀಘ್ರವಾಗಿ ನಡೆದು ವೈಜ್ಞಾನಿಕ ರೀತಿಯಲ್ಲಿ ಸ್ವಾಮಿನಾಥನ್ ಆಯೋಗದ ಪ್ರಕಾರ c+2 50% ಲಾಭಾಂಶ ಸೇರಿಸಿ ಬೆಲೆ ನಿಗದಿ ಆಗಬೇಕೆಂದು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 25 ಲಕ್ಷ ಸಾಲ ಸೌಲಭ್ಯ ಮತ್ತು ಸಹಾಯಧನ ಸೌಲಭ್ಯಗಳನ್ನು ಸರ್ಕಾರ ನೀಡಬೇಕು ಎಂದೂ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.












Click it and Unblock the Notifications