ಮದುವೆ ಬಳಿಕ ಕಿರುತೆರೆಗೆ ಕಂಬ್ಯಾಕ್ ಮಾಡಿದ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ; ಹೊಸ ಸೀರಿಯಲ್ ಪ್ರೋಮೋ ರಿಲೀಸ್

'ಅಗ್ನಿಸಾಕ್ಷಿ'ಯ ಸನ್ನಿಧಿಯಾಗಿ, 'ಸೀತಾ ರಾಮ' ಧಾರಾವಾಹಿಯಲ್ಲಿ ಕನ್ನಡಿಗರ ಮನಗೆದ್ದಿದ್ದ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಈಗ ತಮ್ಮ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಪ್ರೈಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದ ನಟಿ, ಮದುವೆಯ ಬೆನ್ನಲ್ಲೇ ಮತ್ತೆ ಬಣ್ಣದ ಲೋಕಕ್ಕೆ ಮರಳುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಹೌದು, ವೈಷ್ಣವಿ ಗೌಡ ಈಗ ಹೊಸ ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮತ್ತೆ ಸಜ್ಜಾಗಿದ್ದು, ಇದರ ಪ್ರೋಮೋ ಕೂಡ ಬಿಡುಗಡೆಯಾಗಿದೆ.

ಹೊಸ ಸೀರಿಯಲ್‌ ಹೆಸರೇನು?

'ಸೀತಾ ರಾಮ' ಸೀರಿಯಲ್‌ನ ಭರ್ಜರಿ ಯಶಸ್ಸಿನ ಬಳಿಕ ವೈಷ್ಣವಿ ಯಾವ ಪ್ರಾಜೆಕ್ಟ್ ಒಪ್ಪಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ 'ಗೆಳತಿ ಗಾಯತ್ರಿ' ಎಂಬ ಹೊಚ್ಚ ಹೊಸ ಧಾರಾವಾಹಿಯಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸೀರಿಯಲ್‌ನ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇತ್ತೀಚೆಗೆ ರಿಲೀಸ್ ಆಗಿರುವ ಪ್ರೋಮೋ ಸಖತ್ ಸೌಂಡ್ ಮಾಡುತ್ತಿದೆ.

Vaishnavi Gowda

ಶ್ರೀಮಂತ ಗೃಹಿಣಿ ಪಾತ್ರದಲ್ಲಿ ವೈಷ್ಣವಿ

ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವೈಷ್ಣವಿ ಗೌಡ ಅವರು 'ಪಾರ್ವತಿ' ಎಂಬ ಶ್ರೀಮಂತ ಗೃಹಿಣಿಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಮನೆ, ಲಕ್ಸುರಿ ಕಾರು, ಸಿಕ್ಕಾಪಟ್ಟೆ ಪ್ರೀತಿ ಮಾಡುವ ಪತಿ ಹೀಗೆ ಎಲ್ಲ ತರಹದ ಸುಖಕರ ಜೀವನ ಪಾರ್ವತಿಯ ಬಳಿ ಇವೆ. ಆದರೆ ಇಷ್ಟೆಲ್ಲಾ ಇದ್ದರೂ ಅವಳ ಮನಸ್ಸಿನಲ್ಲಿ ಒಂದು ದೊಡ್ಡ ಕೊರಗಿದೆ. ಅದೇ ತನ್ನ ಬಾಲ್ಯದ ಆಪ್ತ ಗೆಳತಿ 'ಗಾಯತ್ರಿ'ಯ ನೆನಪು. ಪ್ರೋಮೋದಲ್ಲಿ ಪಾರ್ವತಿ ತನ್ನ ಶಾಲಾ ದಿನಗಳ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ನೋಡುತ್ತಾ ಭಾವುಕಳಾಗುತ್ತಾಳೆ. ರನ್ನಿಂಗ್ ರೇಸ್‌ನಲ್ಲಿ ತಾನು ಗೆಲ್ಲಲಿ ಎಂಬ ಕಾರಣಕ್ಕಾಗಿ ತನಗಾಗಿಯೇ ಸೋಲುತ್ತಿದ್ದ ಗೆಳತಿಯ ನಿಸ್ವಾರ್ಥ ಪ್ರೀತಿಯನ್ನು ನೆನೆದು ಕಣ್ಣೀರಿಡುತ್ತಾಳೆ.

Vaishnavi Gowda Marriage: 'ಸೀತಾರಾಮ'ನಂತೆ ಮದುವೆಯಲ್ಲಿ ಮಿಂಚಿದ ವೈಷ್ಣವಿ ಗೌಡ ಜೋಡಿ, ಇಲ್ಲಿದೆ ಫೋಟೋಸ್‌
Vaishnavi Gowda Marriage: 'ಸೀತಾರಾಮ'ನಂತೆ ಮದುವೆಯಲ್ಲಿ ಮಿಂಚಿದ ವೈಷ್ಣವಿ ಗೌಡ ಜೋಡಿ, ಇಲ್ಲಿದೆ ಫೋಟೋಸ್‌

"25 ವರ್ಷಗಳಿಂದ ಕಾಯುತ್ತಿದ್ದೇನೆ ಅಂದರೆ ನಿಮಗೂ ಸ್ವಲ್ಪ ಓವರ್ ಅನಿಸಬಹುದು ಅಲ್ವಾ?" ಎನ್ನುತ್ತಲೇ, ತನ್ನ ಜೀವದ ಗೆಳತಿ ಗಾಯತ್ರಿ ಖಂಡಿತ ಮರಳಿ ಬರುತ್ತಾಳೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾಳೆ. ಪ್ರೋಮೋ ನೋಡುತ್ತಿದ್ದರೆ ಇದು ಇಬ್ಬರು ಹೆಣ್ಣುಮಕ್ಕಳ ಸ್ನೇಹದ ಸುತ್ತ ಸಾಗುವ ಅತ್ಯಂತ ಭಾವನಾತ್ಮಕ ಹಾಗೂ ಕುತೂಹಲಕಾರಿ ಕಥೆ ಎಂಬುದು ಸ್ಪಷ್ಟವಾಗುತ್ತದೆ.

ಮದುವೆ ಬಳಿಕ ಬ್ರೇಕ್‌ ಪಡೆದಿದ್ದ ನಟಿ

'ಬಿಗ್ ಬಾಸ್' ರಿಯಾಲಿಟಿ ಶೋನಲ್ಲೂ ಅಬ್ಬರಿಸಿದ್ದ ವೈಷ್ಣವಿ, ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಛತ್ತೀಸ್‌ಗಢ ಮೂಲದ, ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಅನುಕೂಲ್ ಮಿಶ್ರಾ ಅವರೊಂದಿಗೆ ಶಾಸ್ತ್ರೋಕ್ತವಾಗಿ ವೈಷ್ಣವಿ ಮದುವೆ ನಡೆದಿತ್ತು. ಪಕ್ಕಾ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ದ ವೈಷ್ಣವಿ, ಮದುವೆಯಾದ ಮೇಲೂ ತಾವು ನಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದರು. ಅದರಂತೆ ಈಗ ಮದುವೆಯಾದ ದಿನಗಳ ಬೆನ್ನಲ್ಲೇ ಶೂಟಿಂಗ್ ಸೆಟ್‌ಗೆ ಮರಳುವ ಮೂಲಕ ವೃತ್ತಿಬದುಕಿನ ಕಡೆಗೆ ತಮಗಿರುವ ಗೌರವವನ್ನು ಸಾಬೀತುಪಡಿಸಿದ್ದಾರೆ. 'ಸೀತಾ ರಾಮ' ಮುಗಿದ ನಂತರ ವೈಷ್ಣವಿ ಅವರ ಮುದ್ದಾದ ನಟನೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಈ ಹೊಸ ಪ್ರೋಮೋ ಭರ್ಜರಿ ಖುಷಿ ನೀಡಿದ್ದು, ಸೀರಿಯಲ್ ಪ್ರಸಾರಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+