Gold Price on July 7th: ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ, ಬೆಂಗಳೂರು ಸೇರಿ ವಿವಿಧೆಡೆ ಎಷ್ಟಿದೆ ದರ?

Gold Rate Today: ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯು ಸತತವಾಗಿ ಮೂರನೇ ದಿನವು ಕುಸಿಯುತ್ತಿದೆ. ಈ ಮೂಲಕ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಂತಾಗಿದೆ. ಜಾಗತಿಕವಾಗಿ ಉಂಟಾದ ಹಲವು ಬದಲಾವಣೆಗಳ ಕಾರಣದಿಂದಾಗಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರ ಇಳಿಮುಖವಾಗಿದೆ. ಇಂದು ಮಂಗಳವಾರ (ಜುಲೈ 7) ರಂದು ಚಿನ್ನದ ಬೆಲೆ ಬರೋಬ್ಬರಿ 1360 ರೂಪಾಯಿ ತಗ್ಗಿದೆ. ಬಿಳಿ ಲೋಹ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಗರಿಷ್ಠ ಬೆಲೆಗೆ ತಲುಪಿದ್ದ ಚಿನ್ನ-ಬೆಳ್ಳಿ ಲೋಹಗಳ ದರಗಳು 2026ರ ಫೆಬ್ರವರಿ ಆರಂಭದಿಂದಲೇ ಇಳಿಕೆಯತ್ತ ಸಾಗಿದವು. ಆಗಾಗ ಕೊಂಚ ಏರಿಕೆ ಕಂಡು ಸಹಿತ ನಿರಂತರವಾಗಿ ಕುಸಿಯಲು ಆರಂಭಿಸಿವೆ. ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ ಬಾಂಡ್‌ಗಳ ಮೇಲಿನ ಬಡ್ಡಿ ದರ ಏರಿಕೆ ಬೆನ್ನಲ್ಲೆ ಚಿನ್ನದ ಮೌಲ್ಯದಲ್ಲಿ ನೆಗಟಿವ್ ಟ್ರೆಂಡಿಂಗ್ ಶುರುವಾಗಿದೆ. ಇನ್ನೂ ಮುಂದಿನ ಅಕ್ಟೋಬರ್ ಹೊತ್ತಿಗೆ ಜಪಾನ್, ಇಂಗ್ಲೆಂಡ್ ಹಾಗೂ ಯುಎಸ್ ಬ್ಯಾಂಕ್‌ಗಳ ಬಾಂಡ್‌ಗಳ ಮೇಲಿನ ಬಡ್ಡಿ ದರ ಏರಿಕೆ ಮಾಡುವ ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

Gold prices

ಬಂಗಾರದ ಬೆಲೆ ಭರ್ಜರಿ ಕುಸಿತ

ಒಂದೇ ದಿನಕ್ಕೆ ಚಿನ್ನ ಬೆಳ್ಳಿ ದರಗಳು ನೆಲಕಚ್ಚಲಿವೆ ಎಂದು ಊಹಿಸಲಾಗಿದೆ. ವರದಿಗಳ ಪ್ರಕಾರ, ಇಂದು ಜುಲೈ 7ರಂದು ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಒಂದು ಗ್ರಾಂಗೆ 136 ರೂ.ನಂತೆ ಹತ್ತು ಗ್ರಾಂಗೆ 1360 ರೂಪಾಯಿ ಕುಸಿದಿದ್ದು, ದರ 1,45, 260 ರೂಪಾಯಿ ಮುಟ್ಟಿದೆ.

Gold Rate Today: ಆಭರಣ ಪ್ರಿಯರಿಗೆ ಸಿಹಿಸುದ್ದಿ, ಬೆಂಗಳೂರು ಸೇರಿ ವಿವಿಧೆಡೆ ಚಿನ್ನದ ಬೆಲೆ ಇಳಿಕೆ, ನಿಮ್ಮೂರಲ್ಲಿ ಎಷ್ಟಿದೆ?
Gold Rate Today: ಆಭರಣ ಪ್ರಿಯರಿಗೆ ಸಿಹಿಸುದ್ದಿ, ಬೆಂಗಳೂರು ಸೇರಿ ವಿವಿಧೆಡೆ ಚಿನ್ನದ ಬೆಲೆ ಇಳಿಕೆ, ನಿಮ್ಮೂರಲ್ಲಿ ಎಷ್ಟಿದೆ?

22 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 125 ರೂ.ನಂತೆ ಹತ್ತು ಗ್ರಾಂಗೆ 1250 ರೂಪಾಯಿ ಇಳಿಕೆ ಆಗಿದ್ದು, ಇದರಿಂದ ಒಟ್ಟು ದರ ಒಂದೇ ದಿನಕ್ಕೆ 1,33,150 ರೂಪಾಯಿ ಕುಸಿತ ಕಂಡಿದೆ. ಇನ್ನೂ 18 ಕ್ಯಾರಟ್‌ನ ಹತ್ತು ಗ್ರಾಂ ಚಿನ್ನದ ಬೆಲೆಯು 1030 ರೂಪಾಯಿಗೆ ಇಳಿಕೆ ಕಾಣುವ ಮೂಲಕ ಒಟ್ಟ ದರ 1,08,940 ರೂಪಾಯಿ ತಲುಪಿದೆ. ಈ ವಾರ ಪೂರ್ಣ ಇದೇ ರೀತಿ ಚಿನ್ನ-ಬೆಳ್ಳಿಯ ದರ ನೆಗಟಿವ್ ಟ್ರೆಂಡ್‌ನಲ್ಲಿ ಮುಂದುವರೆಯುವ ಲಕ್ಷಣಗಳು ಕಾಣುತ್ತಿವೆ.

ಚಿನ್ನದ ಬೆಲೆಯಲ್ಲಿ ಸತತ ಕುಸಿತ

ಬಂಗಾರದ ಬೆಲೆ ಕಳೆದ ವಾರಾಂತ್ಯದಲ್ಲಿ ತಕ್ಕಮಟ್ಟಿನ ಇಳಿಕೆ ಆಗಿ ನಂತರ ಯಥಾ ಸ್ಥಿತಿ ಕಾಯ್ದುಕೊಂಡಿತ್ತು. ಇದೀಗ ಮತ್ತೆ ಭರ್ಜರಿ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಮೂಲಕ ಚಿನ್ನ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್ ದೊರೆತಿದೆ. ಜುಲೈ 4ರಂದು ಒಂದು ಗ್ರಾಂ 22k ಮತ್ತು 24k ಚಿನ್ನವು ಕ್ರಮವಾಗಿ 25 ಮತ್ತು 27 ರೂಪಾಯಿ, ಜುಲೈ 6ರಂದು ಕ್ರಮವಾಗಿ 10 ಮತ್ತು 11ರೂಪಾಯಿ ಹಾಗೂ ಇಂದು ಒಂದೇ ದಿನಕ್ಕೆ ಬರೋಬ್ಬರಿ 125 ಮತ್ತು 136 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿಯ 1 ಕೆಜಿ ದರವು ನೆನ್ನೆ 5000 ರೂಪಾಯಿ ಕುಸಿದಿದ್ದು, ಇಂದು ಒಂದು ಕೆಜಿಗೆ 2,45,000 ಇದ್ದು ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಗರವಾರು ಚಿನ್ನದ ಬೆಲೆ ಮಾಹಿತಿ (1ಗ್ರಾಂ 22k ದರ)

ಬೆಂಗಳೂರು: 13, 315 ರೂ.

ಚೆನ್ನೈ: 13,400 ರೂ.

ಮುಂಬೈ: 13, 315 ರೂ.

ದೆಹಲಿ: 13,330 ರೂ.

ಕೊಲ್ಕತ್ತ: 13, 315 ರೂ.

ಪುಣೆ: 13, 315 ರೂ.

ಅಹ್ಮದಾಬಾದ್: 13, 315 ರೂ.

ಹೈದರಾಬಾದ್: 13, 315 ರೂ.

ಕೇರಳ: 13, 315 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+