12 ಜನ್ಮರಾಶಿಯವರ ಉಳಿತಾಯದ ರಹಸ್ಯ! ನಿಮ್ಮ ರಾಶಿಗೆ ಯಾವ ಸೇವಿಂಗ್ಸ್ ಪ್ಲಾನ್ ಬೆಸ್ಟ್?

ಹಣ ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾಗಿ ಉಳಿತಾಯ ಮಾಡುವುದು ಅಷ್ಟೇ ಮುಖ್ಯ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಜನ್ಮರಾಶಿಯವರ ಹಣಕಾಸಿನ ಸ್ವಭಾವ ವಿಭಿನ್ನವಾಗಿರುತ್ತದೆ. ಕೆಲವರು ಹೆಚ್ಚು ಖರ್ಚು ಮಾಡುವವರಾಗಿದ್ದರೆ, ಕೆಲವರು ಸಹಜವಾಗಿಯೇ ಉಳಿತಾಯ ಮಾಡುವವರಾಗಿರುತ್ತಾರೆ. ಹಾಗಾದರೆ 12 ಜನ್ಮರಾಶಿಯವರು ಹೇಗೆ ಉಳಿತಾಯ ಮಾಡಬೇಕು? ಎಲ್ಲಿ ಹಣ ಹೂಡಿಕೆ ಮಾಡಬೇಕು? ಎಲ್ಲಿ ಹೂಡಿಕೆ ಮಾಡಬಾರದು? ಇಲ್ಲಿದೆ ವಿವರ.

ಮೇಷ (Aries)

ಮೇಷ ರಾಶಿಯವರು ಧೈರ್ಯಶಾಲಿಗಳು. ಹೊಸ ಅವಕಾಶ ಕಂಡರೆ ತಕ್ಷಣ ಹಣ ಹೂಡಲು ಮುಂದಾಗುತ್ತಾರೆ. ಆದರೆ ಕೆಲವೊಮ್ಮೆ ಆತುರದಿಂದ ನಿರ್ಧಾರ ತೆಗೆದುಕೊಳ್ಳುವ ಸ್ವಭಾವ ನಷ್ಟಕ್ಕೂ ಕಾರಣವಾಗಬಹುದು. ಇವರಿಗೆ ಉತ್ತಮ ಉಳಿತಾಯದ ವಿಧಾನಗಳು ಸಿಪ್‌, ಪಿಪಿಎಫ್‌, ಎನ್‌ಪಿಎಸ್‌, ತುರ್ತು ನಿಧಿ (Emergency Fund). ಇವರಿಗೆ ದೀರ್ಘಾವಧಿಯ ಹೂಡಿಕೆ ಉತ್ತಮ ಫಲ ನೀಡುತ್ತದೆ. ಹೆಚ್ಚಿನ ಲಾಭದ ಆಸೆಯಿಂದ ಪರಿಶೀಲನೆ ಇಲ್ಲದೆ ಹೂಡಿಕೆ ಮಾಡಿದರೆ ನಷ್ಟ. ಅಪರಿಚಿತ ಕ್ರಿಪ್ಟೋ ಯೋಜನೆಗಳು, ಪರಿಶೀಲಿಸದ ಆನ್‌ಲೈನ್ ಟ್ರೇಡಿಂಗ್ ಯೋಜನೆಗಳು ಇವು ಹಣ ಹೂಡಬಾರದ ಸ್ಥಳ.

Best Savings Plan

ವೃಷಭ (Taurus)

ವೃಷಭ ರಾಶಿಯವರು ಸಹಜವಾಗಿಯೇ ಉಳಿತಾಯ ಪ್ರಿಯರು. ಹಣವನ್ನು ಸುರಕ್ಷಿತವಾಗಿ ಇಡಲು ಇಷ್ಟಪಡುತ್ತಾರೆ. ಇವರಿಗೆ ಉತ್ತಮ ಉಳಿತಾಯದ ವಿಧಾನ ಬ್ಯಾಂಕ್ ಎಫ್‌ಡಿ, ಚಿನ್ನ, ಪಿಪಿಎಫ್‌, ಜಮೀನು. ನಿಧಾನವಾಗಿ ಆದರೆ ಸ್ಥಿರವಾಗಿ ಸಂಪತ್ತು ಹೆಚ್ಚಾಗುತ್ತದೆ. ಅತಿಯಾದ ಸುರಕ್ಷತೆಯ ಮನೋಭಾವದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಹೆಚ್ಚು ಅಪಾಯವಿರುವ ಡೇ ಟ್ರೇಡಿಂಗ್‌ಗಳು ಹಣ ಹೂಡಬಾರದ ಸ್ಥಳ.

ಮಿಥುನ (Gemini)

ಮಿಥುನ ರಾಶಿಯವರು ಹೊಸ ಹೊಸ ಯೋಜನೆಗಳತ್ತ ಬೇಗ ಆಕರ್ಷಿತರಾಗುತ್ತಾರೆ. ಒಂದು ಯೋಜನೆಯಿಂದ ಮತ್ತೊಂದಕ್ಕೆ ಜಿಗಿಯುವ ಪ್ರವೃತ್ತಿ ಇರುತ್ತದೆ. ಉತ್ತಮ ಉಳಿತಾಯ ಕ್ರಮವೆಂದರೆ ಸಿಪ್‌, ಮ್ಯೂಚುವಲ್ ಫಂಡ್, Recurring Deposit. ವೈವಿಧ್ಯಮಯ ಹೂಡಿಕೆ ಇವರಿಗೆ ಲಾಭ ತರುತ್ತದೆ. ಪದೇ ಪದೇ ಹೂಡಿಕೆ ಬದಲಾಯಿಸಿದರೆ ನಷ್ಟ. ವದಂತಿಗಳ ಆಧಾರದ ಮೇಲೆ ಷೇರು ಖರೀದಿ ಮಾಡುವುದು ಮಾಡಬಾರದು.

ಇಂದಿನಿಂದ ಈ ರಾಶಿಯವರ ಮೇಲಿರುವುದು ಮಹಾ ಲಕ್ಷ್ಮೀ ಕೃಪೆ: ಹೆಚ್ಚಾಗುವುದು ಸಿರಿ ಸಂಪತ್ತು
ಇಂದಿನಿಂದ ಈ ರಾಶಿಯವರ ಮೇಲಿರುವುದು ಮಹಾ ಲಕ್ಷ್ಮೀ ಕೃಪೆ: ಹೆಚ್ಚಾಗುವುದು ಸಿರಿ ಸಂಪತ್ತು

ಕಟಕ (Cancer)

ಕುಟುಂಬದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಇಷ್ಟಪಡುತ್ತಾರೆ. ಉತ್ತಮ ಉಳಿತಾಯ ಕ್ರಮಗಳು ಪಿಪಿಎಫ್‌, ಎಲ್‌ಐಸಿ, ಆರೋಗ್ಯ ವಿಮೆ, ಮಕ್ಕಳ ಶಿಕ್ಷಣ ನಿಧಿ. ಇದರಿಂದ ಲಾಭ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ. ಭಾವನಾತ್ಮಕವಾಗಿ ಸಂಬಂಧಿಕರಿಗೆ ಸಾಲ ನೀಡಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಣ ಹೂಡಬಾರದ ಸ್ಥಳ- ಸ್ನೇಹಿತರ ಒತ್ತಾಯದ ವ್ಯವಹಾರಗಳು.

ಸಿಂಹ (Leo)

ಸಿಂಹ ರಾಶಿಯವರಿಗೆ ಐಷಾರಾಮಿ ಜೀವನ ಇಷ್ಟ. ಪ್ರತಿಷ್ಠೆಗಾಗಿ ಹೆಚ್ಚು ಖರ್ಚು ಮಾಡುವ ಪ್ರವೃತ್ತಿ ಇರುತ್ತದೆ. ಇವರಿಗೆ ಉತ್ತಮ ಉಳಿತಾಯ ಎಂದರೆ ಸ್ವಯಂಚಾಲಿತ ಸಿಪ್‌, ನಿವೃತ್ತಿ ಯೋಜನೆ. ಶಿಸ್ತುಬದ್ಧ ಹೂಡಿಕೆಯಿಂದ ಉತ್ತಮ ಸಂಪತ್ತು ನಿರ್ಮಾಣವಾಗುತ್ತದೆ. ಅನಗತ್ಯ ಐಷಾರಾಮಿ ಖರ್ಚುಗಳಿಂದ ಇದ್ದದ್ದೂ ಕಳೆದುಹೋಗುತ್ತದೆ. ತೋರಿಕೆಯ ವ್ಯವಹಾರಗಳು, ಆತುರದ ನಿರ್ಧಾರಗಳಲ್ಲಿ ಹಣ ಹೂಡಬಾರದು.

ಕನ್ಯಾ (Virgo)

ಕನ್ಯಾ ರಾಶಿಯವರು ಲೆಕ್ಕಾಚಾರದಲ್ಲಿ ಪರಿಣತರು. ಹೂಡಿಕೆ ಮಾಡುವ ಮೊದಲು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಾರೆ. ಇವರಿಗೆ ಉತ್ತಮ ಉಳಿತಾಯ ಕ್ರಮ ಎಂದರೆ ಇಂಡೆಕ್ಸ್ ಫಂಡ್, ಪಿಪಿಎಫ್‌, ಎಫ್‌ಡಿ, ಬಾಂಡ್‌ಗಳು. ಕಡಿಮೆ ಅಪಾಯದಲ್ಲಿ ಉತ್ತಮ ಆದಾಯ ಪಡೆಯುತ್ತಾರೆ. ಅತಿಯಾಗಿ ಯೋಚಿಸಿ ಅವಕಾಶ ತಪ್ಪಿಸಿಕೊಳ್ಳುವ ಸ್ವಭಾವದಿಂದ ನಷ್ಟ. ಸಂಪೂರ್ಣ ಮಾಹಿತಿ ಇಲ್ಲದ ಯೋಜನೆಗಳು ಇವರು ಹಣ ಹೂಡಬಾರದ ಸ್ಥಳ.

ಈ ಐದು ರಾಶಿಯವರು ಧರಿಸಬಾರದಂತೆ ಆಮೆ ಉಂಗುರು! ಎದುರಾಗುವುದು ಸಾಲು ಸಾಲು ಕಷ್ಟ
ಈ ಐದು ರಾಶಿಯವರು ಧರಿಸಬಾರದಂತೆ ಆಮೆ ಉಂಗುರು! ಎದುರಾಗುವುದು ಸಾಲು ಸಾಲು ಕಷ್ಟ

ತುಲಾ (Libra)

ತುಲಾ ರಾಶಿಯವರು ಸಮತೋಲನವನ್ನು ಇಷ್ಟಪಡುತ್ತಾರೆ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಇವರಿಗೆ ಉತ್ತಮ ಉಳಿತಾಯ ಎಂದರೆ ಸಿಪ್‌, ಬ್ಯಾಲೆನ್ಸ್ಡ್ ಫಂಡ್, ಎನ್‌ಪಿಎಸ್‌. ಸ್ಥಿರ ಆರ್ಥಿಕ ಬೆಳವಣಿಗೆ ಇವರ ಗುರಿ ಹಾಗೂ ದಾರಿ. ಇತರರ ಸಲಹೆಗೆ ಹೆಚ್ಚು ಮಹತ್ವ ನೀಡಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಒತ್ತಾಯದ ಹೂಡಿಕೆಗಳಲ್ಲಿ ಹಣ ಹೂಡುವುದು ಮಾಡಬಾರದು.

ವೃಶ್ಚಿಕ (Scorpio)

ವೃಶ್ಚಿಕ ರಾಶಿಯವರು ಹಣಕಾಸಿನ ವಿಚಾರಗಳನ್ನು ಗೌಪ್ಯವಾಗಿಡಲು ಇಷ್ಟಪಡುತ್ತಾರೆ. ಅಪಾಯವನ್ನೂ ತೆಗೆದುಕೊಳ್ಳುವ ಧೈರ್ಯ ಇರುತ್ತದೆ. ದೀರ್ಘಾವಧಿಯ ಷೇರು ಹೂಡಿಕೆ, ಚಿನ್ನ, ಜಮೀನು ಇವು ಉತ್ತಮ ಉಳಿತಾಯ ಕ್ರಮಗಳು. ತಾಳ್ಮೆಯಿಂದ ಉತ್ತಮ ಲಾಭ ಪಡೆಯುತ್ತಾರೆ. ಅತಿಯಾದ ರಿಸ್ಕ್ ತೆಗೆದುಕೊಂಡರೆ ನಷ್ಟವಾಗಲಿದೆ. ಅತಿ ಹೆಚ್ಚು ಲಿವರೇಜ್ ಇರುವ ಟ್ರೇಡಿಂಗ್‌ಗಳು ಇವರು ಹಣ ಹೂಡಬಾರದ ಸ್ಥಳ.

ಧನು (Sagittarius)

ಧನು ರಾಶಿಯವರಿಗೆ ಪ್ರವಾಸ, ಹೊಸ ಅನುಭವಗಳಿಗೆ ಹಣ ಖರ್ಚು ಮಾಡಲು ಇಷ್ಟ. ಪ್ರಯಾಣ ನಿಧಿಯ ಜೊತೆಗೆ ಸಿಪ್‌ ಮತ್ತು ಪಿಪಿಎಫ್‌ ಇವುಗಳು ಉತ್ತಮ ಉಳಿತಾಯ ಕ್ರಮಗಳು. ಗುರಿ ಆಧಾರಿತ ಉಳಿತಾಯ ಇವರಿಗೆ ಯಶಸ್ಸು ತರುತ್ತದೆ. ಯೋಜನೆ ಇಲ್ಲದ ಖರ್ಚು ಮಾಡುವುದು ನಷ್ಟದಾಯಕ. ಅತಿಯಾದ ಊಹಾಪೋಹದ ಹೂಡಿಕೆಗಳು ಹಣ ಹೂಡಬಾರದ ಸ್ಥಳಗಳು.

ಮಕರ (Capricorn)

ಮಕರ ರಾಶಿಯವರು ಶಿಸ್ತುಬದ್ಧರು. ನಿಧಾನವಾಗಿ ದೊಡ್ಡ ಸಂಪತ್ತು ಕಟ್ಟಿಕೊಳ್ಳುವವರಾಗಿರುತ್ತಾರೆ. ಅದಕ್ಕಾಗಿ ಬಹಳ ಸಮಯ ಕಾಯುತ್ತಾರೆ. ಇವರಿಗೆ ಉತ್ತಮ ಉಳಿತಾಯ ಕ್ರಮ ಎಂದರೆ ಇಪಿಎಫ್‌, ಪಿಪಿಎಫ್‌, ಎನ್‌ಪಿಎಸ್‌, ಇಂಡೆಕ್ಸ್ ಫಂಡ್. ದೀರ್ಘಾವಧಿಯಲ್ಲಿ ದೊಡ್ಡ ಆಸ್ತಿ ನಿರ್ಮಾಣವಾಗುತ್ತದೆ. ಅತಿಯಾದ ಮಿತವ್ಯಯದಿಂದ ಜೀವನವನ್ನು ಆನಂದಿಸದೇ ಇರುವುದು ಇವರಿಗಾಗುವ ನಷ್ಟ. ಹಣ ಹೂಡಬಾರದ ಸ್ಥಳವೆಂದರೆ: ಬೇಗ ಶ್ರೀಮಂತರಾಗುವ ಯೋಜನೆಗಳು.

ಕುಂಭ (Aquarius)

ಕುಂಭ ರಾಶಿಯವರಿಗೆ ಹೊಸ ತಂತ್ರಜ್ಞಾನ ಮತ್ತು ಹೊಸ ಹೂಡಿಕೆಗಳ ಬಗ್ಗೆ ಆಸಕ್ತಿ ಇರುತ್ತದೆ. ಚಿನ್ನದಲ್ಲಿ, ಟೆಕ್ನಾಲಜಿ (ಬಿಟ್‌ಕಾಯಿನ್‌ನಂಥ) ಹಣದಲ್ಲಿ ಆಸಕ್ತಿ ಮೂಡಬಹುದು. ಇವರಿಗೆ ಉತ್ತಮ ಉಳಿತಾಯ ಎಂದರೆ ವೈವಿಧ್ಯಮಯ ಹೂಡಿಕೆ (Diversified Portfolio), ಸಿಪ್‌. ಹೊಸ ಕ್ಷೇತ್ರಗಳಲ್ಲಿ ಉತ್ತಮ ಅವಕಾಶ ಇದೆ. ಹೊಸ ಟ್ರೆಂಡ್‌ಗಳನ್ನು ಅತಿಯಾಗಿ ನಂಬುವುದು ಸಲ್ಲದು. ಪರಿಶೀಲಿಸದ ಸ್ಟಾರ್ಟ್‌ಅಪ್ ಅಥವಾ ಆನ್‌ಲೈನ್ ಯೋಜನೆಗಳು ಇವರು ಹಣ ಹೂಡಬಾರದ ಸ್ಥಳಗಳು.

ಮೀನ (Pisces)

ಮೀನ ರಾಶಿಯವರು ಉದಾರ ಸ್ವಭಾವದವರು. ಇತರರಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತಾರೆ. ತಮಗೂ ಉಳಿಸಲು ಮರೆಯುತ್ತಾರೆ. ಇವರಿಗೆ ಉತ್ತಮ ಉಳಿತಾಯ ಅಂದರೆ ಸ್ವಯಂಚಾಲಿತ ಉಳಿತಾಯ, ಪಿಪಿಎಫ್‌, ಎಫ್‌ಡಿ, ಆರೋಗ್ಯ ವಿಮೆ. ನಿಯಮಿತ ಉಳಿತಾಯದಿಂದ ಆರ್ಥಿಕ ಸ್ಥಿರತೆ ಸಾಧ್ಯ. ಭಾವನಾತ್ಮಕವಾಗಿ ಸಾಲ ನೀಡಿ ಹಣ ಕಳೆದುಕೊಳ್ಳುವುದು ಇವರ ನಷ್ಟ. ಸಂಬಂಧಿಕರು ಅಥವಾ ಸ್ನೇಹಿತರ ಮಾತು ಮಾತ್ರ ನಂಬಿ ಮಾಡುವ ಹೂಡಿಕೆಗಳು ಕಷ್ಟದಾಯಕ.

ಗಮನಿಸಿ : ಜ್ಯೋತಿಷ್ಯವು ವ್ಯಕ್ತಿಯ ಸ್ವಭಾವ ಮತ್ತು ಪ್ರವೃತ್ತಿಗಳ ಬಗ್ಗೆ ಸಾಂಪ್ರದಾಯಿಕ ನಂಬಿಕೆಗಳ ಆಧಾರದ ಮೇಲೆ ಮಾರ್ಗದರ್ಶನ ನೀಡುತ್ತದೆ. ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆದಾಯ, ವಯಸ್ಸು, ಅಪಾಯವನ್ನು ಸಹಿಸಿಕೊಳ್ಳುವ ಸಾಮರ್ಥ್ಯ, ಆರ್ಥಿಕ ಗುರಿಗಳು ಮತ್ತು ತಜ್ಞರ ಸಲಹೆಯನ್ನೂ ಪರಿಗಣಿಸುವುದು ಉತ್ತಮ. ಶಿಸ್ತುಬದ್ಧ ಉಳಿತಾಯ, ವೈವಿಧ್ಯಮಯ ಹೂಡಿಕೆ ಮತ್ತು ದೀರ್ಘಾವಧಿಯ ಯೋಜನೆ ಯಾವುದೇ ರಾಶಿಯವರಿಗೂ ಆರ್ಥಿಕ ಯಶಸ್ಸಿನ ಪ್ರಮುಖ ಸೂತ್ರವಾಗಿದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+