ಕರ್ಣ ಸೀರಿಯಲ್: ಅನಿರೀಕ್ಷಿತ ತಿರುವಿಗೆ ಪ್ರೇಕ್ಷಕರು ಫಿದಾ, ಧಾರಾವಾಹಿ ಕ್ಲೈಮ್ಯಾಕ್ಸ್‌ ಮುನ್ಸೂಚನೆಯೇ

ಕರ್ಣ ಸೀರಿಯಲ್‌ನಲ್ಲಿ ರೋಚಕ ತಿರುವು ಎದುರಾಗಿದ್ದು, ಹೊಸ ಟ್ವಿಸ್ಟ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ಆದರೆ, ಈ ತಿರುವು ಧಾರಾವಾಹಿಯ ಕ್ಲೈಮ್ಯಾಕ್ಸ್‌ನ ಮುನ್ಸೂಚನೆಯೇ ಎನ್ನುವ ಅನುಮಾನ ವೀಕ್ಷಕರಲ್ಲಿ ಮೂಡಲು ಪ್ರಾರಂಭವಾಗಿದೆ. ಈ ಸೀರಿಯಲ್‌ನ ಮುಖ್ಯ ಪಾತ್ರಧಾರಿ ನಿತ್ಯಾ (ನಮ್ರತಾ ಗೌಡ) ಅವರು 22ಕ್ಕೂ ಹೆಚ್ಚು ಎಪಿಸೋಡ್‌ಗಳಿಂದ ಕಾಣಿಸಿಕೊಂಡಿಲ್ಲ. ಅವರ ಪಾತ್ರದಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿತ್ತು. ನಿಧಿ - ಕರ್ಣ ಒಂದಾದ ಮೇಲೆ ನಿತ್ಯಾ ಮನೆಯಿಂದ ಹೊರ ನಡೆದಿದ್ದರು. ಇದಾದ ಮೇಲೆ ಹಲವು ಎಪಿಸೋಡ್‌ಗಳಲ್ಲಿ ನಿತ್ಯಾ ಕಾಣಿಸಿಕೊಂಡಿಲ್ಲ. ನಮ್ರತಾ ಗೌಡ ಅವರು ಸೀರಿಯಲ್‌ನಿಂದ ಹೊರ ಬಂದಿದ್ದಾರೆಯೇ ಎನ್ನುವ ಅನುಮಾನ ಹೆಚ್ಚಾಗುತ್ತಿದೆ. ಆದರೆ, ಈ ಬಗ್ಗೆ ಇದು ವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕರ್ಣ ಸೀರಿಯಲ್‌ನ ಹೊಸ ತಿರುವುಗಳನ್ನು ನೋಡಿದರೆ, ಇದು ಕ್ಲೈಮ್ಯಾಕ್ಸ್‌ನ ಮುನ್ಸೂಚನೆಯೇ ಎನ್ನುವಂತಿದೆ.

ಕರ್ಣ ಸೀರಿಯಲ್‌ನಲ್ಲಿ ರಮೇಶ್ ಪಾತ್ರಧಾರಿಯ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಮಾಲತಿಯ ಮೇಲೆ ಕೈ ಮಾಡುವುದಕ್ಕೆ ಬಂದ ರಮೇಶ್‌ಗೆ ಮಾಲತಿ ತಿರುಗೇಟು ನೀಡಿದ್ದಾಳೆ. ಇಷ್ಟು ವರ್ಷಗಳ ಕಾಲ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದ ಮಾಲತಿ ತಿರುಗಿ ಬಿದ್ದಿರುವುದು ಹಲವರಲ್ಲಿ ಅಚ್ಚರಿ ಹಾಗೂ ಸಂತೋಷವನ್ನುಂಟು ಮಾಡಿದೆ. ನಿಧಿ ಮತ್ತು ಕರ್ಣ ಇಬ್ಬರೂ ಸೇರಿ ಮಾಲತಿಗೆ ಕಾರ್ ಡ್ರೈವಿಂಗ್ ಕ್ಲಾಸ್‌ಗೆ ಸೇರಿಸಿದ್ದರು. ಮಾಲತಿ ಕೆಲವೇ ದಿನಗಳಲ್ಲಿ ಕಾರ್ ಓಡಿಸುವುದನ್ನು ಕಲಿತ್ತಿದ್ದು, ಡ್ರೈವಿಂಗ್ ಲೈಸೆನ್ಸ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಡ್ರೈವಿಂಗ್ ಲೈಸೆನ್ಸ್‌ ಪಡೆದುಕೊಂಡು ಖುಷಿಯಲ್ಲಿ ಓಡಿ ಬಂದಿರುವ ಮಾಲತಿಯ ದೃಶ್ಯಗಳನ್ನು ನೋಡಿಯೇ ಪ್ರೇಕ್ಷಕರು ಖುಷಿಯಾಗಿದ್ದರು. ಅದರೊಂದಿಗೆ ರಮೇಶ್‌ನ ವಿರುದ್ಧವೂ ತಿರುಗಿ ಬಿದ್ದಿರುವುದನ್ನು ನೋಡಿ ಫಿದಾ ಆಗಿದ್ದಾರೆ.

Karna Serial

ಮಾಲತಿ ಡ್ರೈವಿಂಗ್ ಟೆಸ್ಟ್‌ನಲ್ಲಿ ಪಾಸಾಗಿದ್ದು, ಕರ್ಣ - ನಿಧಿ ಬಳಿ ಓಡೋಡಿ ಬಂದಿದ್ದಾರೆ. ಇದನ್ನು ನೋಡಿ ಕರ್ಣ, ಅಮ್ಮನ ಮುಖ ನೋಡ್ರಿ.. ಅಮ್ಮನ ಮುಖ ಫ್ರೈಜ್‌ ಗೆದ್ದ ಮಗುವಿನಂತಿದೆ ಅಂತ ನಿಧಿಗೆ ಹೇಳಿದ್ದಾನೆ. ಇದಕ್ಕೆ ನಿಧಿ ಅವರು ನಿಜಕ್ಕೂ ಮಗುನೇ ಅಂತ ಹೇಳಿದ್ದಾಳೆ. ಮಾಲತಿ ಓಡಿ ಬಂದು ಕರ್ಣ - ನಿಧಿಯನ್ನು ತಬ್ಬಿಕೊಂಡು ಸಾಧಿಸಿಬಿಟ್ಟೆ ಕಣ್ರೋ... ಗಾಡಿ ಎಲ್ಲೂ ಜರ್ಕ್‌ ಆಗಲಿಲ್ಲ ಅಂತ ಹೇಳಿದ್ದಾಳೆ. ಈ ಸಂಭ್ರಮದ ಕ್ಷಣಗಳನ್ನು ವೀಕ್ಷಕರು ಸಹ ಎಂಜಾಯ್ ಮಾಡಿದ್ದಾರೆ.

"ಎಷ್ಟೋ ವರ್ಷಗಳಿಂದ ನನ್ನ ಜೀವನವೇ ಹೀಗೆ. ಅಂದುಕೊಂಡ ಮಾಲತಿಗೆ ,ಕರ್ಣ - ನಿಧಿ ಡ್ರೈವಿಂಗ್ ಕಲಿಸಿದ ವಿಚಾರ ಎಂತಹ ಸಂತೋಷವನ್ನು ತಂದುಕೊಟ್ಟಿತು. ಜೀವನದಲ್ಲಿ ಸದಾ ರಮೇಶನ ಅಂಕೆಯಲ್ಲಿದ್ದ. ಮಾಲತಿಗೆ ,ಇದೆಲ್ಲಾ ಸಂತೋಷವನ್ನು ತಂದುಕೊಟ್ಟಿತು. ಸದಾ ಅಂಕೆಯಲ್ಲಿ ಸರಳವಾಗಿ ಸಂತೋಷವಾದ ಚಿಕ್ಕ ಚಿಕ್ಕ ಕ್ಷಣಗಳು ಹತ್ತಿರವಾಗುವಾಗ ನಿರ್ದೇಶಕರು ತಿಳಿಸಿದ ವಿಚಾರ ಮನಸ್ಸಿಗೆ ಹಿಡಿಸಿತು. ಇನ್ನು ಕರ್ಣ ನಿಧಿ ಮಾಲತಿಯರ ಆಕ್ಟಿಂಗ್ ಸಂತೋಷದ ಕ್ಷಣಗಳು ಮನ ಮುಟ್ಟುವಂತಿತ್ತು." ಅಂತ ವೀಕ್ಷಕರು ಹೇಳುತ್ತಿದ್ದಾರೆ.

ಜೀ ಕನ್ನಡದಲ್ಲಿ ಹೊಸ ಸೀರಿಯಲ್ ಜಗದ್ಧಾತ್ರಿ ಎಂಟ್ರಿ: ಮುಕ್ತಾಯವಾಗಲಿದೆ ಕನ್ನಡದ ಈ ಪ್ರಮುಖ ಧಾರಾವಾಹಿ
ಜೀ ಕನ್ನಡದಲ್ಲಿ ಹೊಸ ಸೀರಿಯಲ್ ಜಗದ್ಧಾತ್ರಿ ಎಂಟ್ರಿ: ಮುಕ್ತಾಯವಾಗಲಿದೆ ಕನ್ನಡದ ಈ ಪ್ರಮುಖ ಧಾರಾವಾಹಿ

ರಮೇಶ್ ವಿರುದ್ಧ ತಿರುಗಿ ಬಿದ್ದ ಮಾಲತಿ

ಇಷ್ಟು ವರ್ಷಗಳ ಕಾಲ ರಮೇಶ್ ಹೇಳಿದಂತೆ ಕೇಳಿಕೊಂಡು ಇದ್ದ ಮಾಲತಿ, ರಮೇಶ್‌ನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಮಾಲತಿ ಕಾರ್ ಡ್ರೈವಿಂಗ್ ಕಲಿಯುತ್ತಿರುವುದಕ್ಕೆ ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅದರು ಆ ರೀತಿ ಅಲ್ಲ ಎಂದು ಸಮಜಾಷಿ ಕೊಡುವಾಗ ನನಗೇ ತಿರುಗಿ ಮಾತನಾಡ್ತೀಯಾ ಅಂತ ಕೈ ಮಾಡುದಕ್ಕೆ ಮುಂದಾಗಿದ್ದಾನೆ. ರಮೇಶ್‌ನ ಕಪಾಳಮೋಕ್ಷ ಮಾಡುವುದನ್ನು ತಡೆಯುವುದಲ್ಲದೆ, ಮಾಲತಿಯೇ ರಮೇಶ್‌ಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ದೃಶ್ಯಗಳಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಆದರೆ ಈ ಹೊಸ ತಿರುವು ಮುಂದಿನ ದಿನಗಳಲ್ಲಿ ಕರ್ಣ ಸೀರಿಯಲ್‌ನ ಕ್ಲೈಮ್ಯಾಕ್ಸ್‌ ಮುನ್ಸೂಚನೆಯೇ ಎನ್ನುವ ಅನುಮಾನವೂ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+