Daily Horoscope: ಈ ರಾಶಿಯವರ ಎಲ್ಲಾ ಸಮಸ್ಯೆಗಳು ದೂರ!ಅಡೆತಡೆಗಳಿಗೆ ಸಿಗುವುದು ಪರಿಹಾರ

Horoscope July 7: ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಮಂಗಳವಾರ ಮಧ್ಯಾಹ್ನ 3:00 ರಿಂದ 4:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries)

ಇಂದಿನ ದಿನವು ನಿಮಗೆ ಹೊಸ ಅನುಭವಗಳಿಂದ ಕೂಡಿರಲಿದೆ. ಕುಟುಂಬದವರಿಂದ ಬೆಂಬಲ ಸಿಗಲಿದ್ದು, ತಂದೆ-ತಾಯಿಯ ಆಶೀರ್ವಾದ ಲಭಿಸುತ್ತದೆ.ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸುವಿರಿ. ಇದು ಭವಿಷ್ಯದಲ್ಲಿ ಲಾಭ ತಂದುಕೊಡಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ ಸಿಗಲಿದೆ. ಅನಿರೀಕ್ಷಿತ ಮೂಲಗಳಿಂದ ಧನಲಾಭವಾಗಲಿದೆ. ವಿದ್ಯಾರ್ಥಿಗಳ ಯಶಸ್ಸಿನ ಮಟ್ಟವು ಇತರರಿಗಿಂತ ಉತ್ತಮವಾಗಿರುತ್ತದೆ.

Horoscope July 7

ವೃಷಭ ರಾಶಿ (Taurus)

ಇಂದು ನಿಮಗೆ ಅದ್ಭುತವಾದ ದಿನವಾಗಿರಲಿದೆ. ಕೆಲಸದ ಒತ್ತಡದ ನಡುವೆಯೂ ಸೃಜನಶೀಲ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚುತ್ತದೆ. ಮನೆಯ ನವೀಕರಣ ಮತ್ತು ಅಲಂಕಾರದ ವಿಷಯದಲ್ಲಿ ಬದಲಾವಣೆಗಳನ್ನು ಮಾಡಬಹುದು. ಸಂಗಾತಿಯಿಂದ ನಿಮ್ಮ ಕಾರ್ಯಕ್ಕೆ ಶ್ಲಾಘನೆ ಸಿಗುತ್ತದೆ. ಇದು ನಿಮ್ಮ ಮನಸ್ಸಿಗೆ ಸಂತೋಷ ನೀಡುತ್ತದೆ. ದೊಡ್ಡ ಯಶಸ್ಸು ನಿಮ್ಮ ಕೈಸೇರುವ ಯೋಗವಿದೆ.

ಮಿಥುನ ರಾಶಿ (Gemini)

ಇಂದಿನ ದಿನವು ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ.ವ್ಯಾಪಾರದಲ್ಲಿ ಹೊಸ ವ್ಯಕ್ತಿಗಳ ಸಂಪರ್ಕ ಬೆಳೆಯುತ್ತದೆ. ಪ್ರತಿಸ್ಪರ್ಧಿಗಳು ದುರ್ಬಲರಾಗುತ್ತಾರೆ. ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಪರಿಹಾರ ಸಿಗುವುದು. ಆರೋಗ್ಯ ಸುಧಾರಿಸುತ್ತದೆ.ಹೊಸ ಕೆಲಸ ಪ್ರಾರಂಭಿಸಲು ಇದು ಸಕಾಲ.

ಕರ್ಕ ರಾಶಿ (Cancer)

ಇಂದಿನ ದಿನವು ಯಶಸ್ಸಿನ ಹೊಸ ಅವಕಾಶಗಳನ್ನು ಹೊತ್ತು ತರಲಿದೆ. ನಿಮ್ಮ ಆದರ್ಶ ವ್ಯಕ್ತಿತ್ವವು ಇತರರಿಗೆ ಮಾದರಿಯಾಗಲಿದೆ.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಶುಭ ದಿನವಾಗಿರಲಿದೆ. ಬಾಕಿ ಉಳಿದಿರುವ ಹಣ ಮರಳಿ ಸಿಗುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಸಿಂಹ ರಾಶಿ (Leo)

ಇಂದು ನಿಮ್ಮ ದಿನ ಸಾಮಾನ್ಯವಾಗಿರಲಿದೆ. ಒಡಹುಟ್ಟಿದವರ ಸಹಾಯದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಹೊಸ ಆಸ್ತಿ ಖರೀದಿಸುವ ಬಗ್ಗೆ ಯೋಚಿಸುವಿರಿ. ಸರ್ಕಾರಿ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಯಾವ ಕೆಲಸವನ್ನೂ ಮುಂದೂಡಬೇಡಿ. ಹೊಸ ಕೆಲಸ ಮತ್ತು ಸಾಲದ ವಿಷಯಗಳಲ್ಲಿ ಮರುಪರಿಶೀಲನೆ ಅಗತ್ಯವಿದೆ.

ಕನ್ಯಾ ರಾಶಿ (Virgo)

ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.ಆರ್ಥಿಕ ಲಾಭಕ್ಕೆ ಉತ್ತಮ ಅವಕಾಶಗಳು ದೊರೆಯಲಿವೆ. ನೀವು ಕೈಹಾಕುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದೆ. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವಿರಿ ಮತ್ತು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ತುಲಾ ರಾಶಿ (Libra)

ಇಂದಿನ ದಿನವು ನಿಮಗೆ ಅತ್ಯುತ್ತಮವಾಗಿರಲಿದೆ. ವ್ಯಾಪಾರದ ವಿಷಯಗಳಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳಿತು. ವ್ಯಾಪಾರ ಒಪ್ಪಂದಗಳನ್ನು ಮಾಡುವಾಗ ಆತ್ಮವಿಶ್ವಾಸ ಕಾಯ್ದುಕೊಳ್ಳಿ, ಆದಾಯ ಸುಧಾರಿಸುತ್ತದೆ. ಹೂಡಿಕೆಯ ವಿಷಯದಲ್ಲಿ ಪ್ರಮುಖ ವ್ಯಕ್ತಿಯಿಂದ ಸಲಹೆ ಸಿಗಲಿದೆ.ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಿ.

ವೃಶ್ಚಿಕ ರಾಶಿ (Scorpio)

ಇಂದು ಸಂತೋಷದಿಂದ ತುಂಬಿದ ದಿನ. ಕುಟುಂಬದೊಂದಿಗೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ. ಸಾಹಿತ್ಯ ಕ್ಷೇತ್ರದವರಿಗೆ ದೊಡ್ಡ ಸಿಹಿಸುದ್ದಿ ಸಿಗಲಿದೆ. ವೃತ್ತಿಜೀವನದಲ್ಲಿ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುವಿರಿ. ಮಾನಸಿಕ ಗೊಂದಲಗಳಿಂದ ಮುಕ್ತಿ ಸಿಗಲಿದೆ. ದಾಂಪತ್ಯ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

ಧನು ರಾಶಿ (Sagittarius)

ಇಂದಿನ ದಿನವು ಅದ್ಭುತವಾಗಿರಲಿದೆ. ಶೈಕ್ಷಣಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ರಾಜಕೀಯದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಸರಿಯಾದ ಯೋಜನೆಯೊಂದಿಗೆ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಿರಿ.ಕುಟುಂಬದವರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆಯಿದೆ. ವಿನಾಕಾರಣ ಯಾರಿಗೂ ಸಲಹೆ ನೀಡದಿರುವುದು ಉತ್ತಮ.

ಮಕರ ರಾಶಿ (Capricorn)

ಇಂದು ನಿಮಗೆ ಸಿಹಿಸುದ್ದಿ ಸಿಗಲಿದೆ. ಇಡೀ ದಿನ ಸಂತೋಷದಿಂದ ಕೂಡಿರುವುದು. ಹೊಸ ಸಂಪರ್ಕಗಳಿಂದ ಲಾಭವಾಗಲಿದೆ.ಹೊಸ ಕೆಲಸವನ್ನು ಪ್ರಾರಂಭಿಸುವ ಯೋಚನೆ ಇದ್ದರೆ, ಸದ್ಯಕ್ಕೆ ಮುಂದೂಡುವುದು ಉತ್ತಮ. ಕೌಟುಂಬಿಕ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಮಾತು ಕೇಳಿ.

ಕುಂಭ ರಾಶಿ (Aquarius)

ಇಂದಿನ ದಿನವು ನಿಮಗೆ ಶುಭದಾಯಕವಾಗಿದೆ. ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಕೀರ್ತಿ ಹೆಚ್ಚಾಗಲಿದೆ.ಬಹುಕಾಲದಿಂದ ನಡೆಯುತ್ತಿರುವ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಪ್ತರೊಂದಿಗೆ ಚರ್ಚಿಸುವಿರಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ ಸಿಗಲಿದೆ.

ಮೀನ ರಾಶಿ (Pisces)

ಇಂದು ನಿಮಗೆ ಅದ್ಭುತವಾದ ದಿನವಾಗಿರುತ್ತದೆ. ಕೆಲವು ಪ್ರಭಾವಿ ವ್ಯಕ್ತಿಗಳ ಬೆಂಬಲವು ನಿಮ್ಮ ಉತ್ಸಾಹವನ್ನು ದ್ವಿಗುಣಗೊಳಿಸುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಒಲವು ಇಂದು ಹೆಚ್ಚಾಗುತ್ತದೆ. ಜನರನ್ನು ಮನವೊಲಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸ್ಥಗಿತಗೊಂಡ ಕೆಲಸಗಳನ್ನು ಪುನರಾರಂಭಿಸಲು ಇದು ಸರಿಯಾದ ಸಮಯ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+