ವೈರಲ್ ವಿಡಿಯೋ: ನ್ಯೂಜೆರ್ಸಿಯ ತರಕಾರಿ ಸ್ಟೋರ್ ಮುಂದೆ ಜನಸಾಗರ! 'ಅಮೆರಿಕನ್ ಸಬ್ಜಿ ಮಂಡಿ' ಎಂದ ನೆಟ್ಟಿಗರು

ಅಮೆರಿಕದ ನ್ಯೂಜೆರ್ಸಿಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತೀಯ ದಿನಸಿ(ಗ್ರೋಸರಿ) ಅಂಗಡಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಂಗಡಿ ಪ್ರಾರಂಭವಾದ ದಿನದಿಂದೇ ಭಾರಿ ಸಂಖ್ಯೆಯಲ್ಲಿ ಭಾರತೀಯರು ಮುಗಿಬಿದ್ದಿದ್ದು, ಮಳಿಗೆಯ ಮುಂದೆ ಕಿಲೋಮಿಟರ್‍ಗಳಷ್ಟು ಉದ್ದದ ಸಾಲು ಕಂಡುಬಂದಿದೆ. ಅಂಗಡಿಯ ಒಳಗೆ ಮತ್ತು ಹೊರಗೆ ಕಿಕ್ಕಿರಿದು ತುಂಬಿರುವ ಜನರ ದೃಶ್ಯಗಳ ವಿಡಿಯೋಗಳು ವೈರಲ್ ಅಗಿದ್ದು, ಇದನ್ನು ಕಂಡ ನೆಟ್ಟಿಗರು "ಇದು ಅಮೇರಿಕನ್ ಸಬ್ಜಿ ಮಂಡಿ" ಎಂದು ತಮಾಷೆ ಮಾಡುತ್ತಿದ್ದಾರೆ.

ಅಮೇರಿಕದಲ್ಲಿ ಇತ್ತೀಚಿಗೆ ಭಾರತೀಯ ಮೂಲದ ನಿವಾಸಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದರ ನೇರ ಪರಿಣಾಮವಾಗಿ ಭಾರತದ ಸಾಂಪ್ರದಾಯಿಕ ಆಹಾರ ಪದಾರ್ಥಗಳು, ತಾಜಾ ತರಕಾರಿ, ಮಸಾಲೆ ಪದಾರ್ಥಗಳು ಹಾಗೂ ಪ್ರಸಿದ್ಢ ದೇಶಿ ಬ್ರ್ಯಾಂಡೆಡ್ ವಸ್ತುಗಳಿಗೆ ಅಲ್ಲಿನ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಂತು ಸೃಷ್ಟಿಯಾಗಿದೆ. ಒಂದೇ ಸೂರಿನಡಿ ಸಿಗುವ ಎಲ್ಲಾ ವಸ್ತುಗಳ ಅಂಗಡಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಹೊಸ ಸೂಪರ್ ಮಾರ್ಕೆಟ್ ಆರಂಭವಾದ ಮೊದಲ ದಿನವೇ ಸಾವಿರಾರು ಗ್ರಾಹಕರು ಖರೀದಿಗೆ ಮುಗಿಬಿದ್ದಿರುವುದು ಇದಕ್ಕೆ ಸಾಕ್ಷಿಯಾಗಿದೆ.

Viral Video

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದ ವಿಡಿಯೋ

ಆದರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳು ಮತ್ತೊಂದು ಹೊಸ ಚರ್ಚೆಗೆ ಗ್ರಾಸವಾಗಿವೆ. ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಹೆಚ್ಚಾದಾಗ, ಸರತಿ ಸಾಲುಗಳನ್ನು ಉಲ್ಲಂಘಿಸಿದಾಗ ಅಥವಾ ಶಿಸ್ತು ಕಾಪಾಡದೆ ಇದ್ದಾಗ ಭಾರತೀಯರ ನಡವಳಿಕೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿಬರುವುದು ಸಹಜ. ಪ್ರಸ್ತುತ ಮುಂಚೂಣಿಗೆ ಬಂದಿರುವ ಈ ಘಟನೆಯೂ ಅದಕ್ಕೆ ಹೊರತಾಗಿಲ್ಲ ಎಂಬಂತೆ ನೆಟ್ಟಿಗರಿಂದ ವಿಮರ್ಶೆಗೆ ಒಳಗಾಗಿದೆ.

2.9 ಕೋಟಿ ರೂ. ಪ್ಯಾಕೇಜ್ ಬಿಟ್ಟು ಕಿರಾಣಿ ಅಂಗಡಿ ನಡೆಸುತ್ತಿರುವ IIT ವಿದ್ಯಾರ್ಥಿ ವೈರಲ್ ಕಥೆ ಹಿಂದಿನ ಅಸಲಿಯತ್ತೇನು?
2.9 ಕೋಟಿ ರೂ. ಪ್ಯಾಕೇಜ್ ಬಿಟ್ಟು ಕಿರಾಣಿ ಅಂಗಡಿ ನಡೆಸುತ್ತಿರುವ IIT ವಿದ್ಯಾರ್ಥಿ ವೈರಲ್ ಕಥೆ ಹಿಂದಿನ ಅಸಲಿಯತ್ತೇನು?

ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆ:

ಹೊಸ ಮಳಿಗೆಯ ಆರಂಭದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಿಂದ ವಿಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಒಂದು ಕಡೆ, ಜನರು ತೋರುತ್ತಿರುವ ಈ ಭಾರಿ ನೂಕುನುಗ್ಗಲು ಹೊಸ ಅಂಗಡಿಯ ಮೇಲಿನ ಉತ್ಸಾಹಕ್ಕೆ ಸಾಕ್ಷಿ ಎಂದು ಕೆಲವರು ವಿಶ್ಲೇಷಿಸಿದರೆ; ಮತ್ತೊಂದು ಕಡೆ, ಇದೇ ವರ್ತನೆಯು ಸಾರ್ವಜನಿಕ ಶಿಸ್ತು ಮತ್ತು ನಾಗರಿಕ ಪ್ರಜ್ಞೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ: ನೆಟ್ಟಿಗರ ಕಳವಳ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆ ಭಾರತೀಯರ ನಡೆ-ನುಡಿ ಮತ್ತು ಸಂಸ್ಕೃತಿಯ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇನ್ನು ವಿದೇಶಗಳಲ್ಲಿ ನಮ್ಮವರ ಬಗೆಗಿನ ಗೌರವವನ್ನು ಕಡಿಮೆ ಮಾಡುತ್ತದೆ," ಎಂದು ಅವರು ಆತಂಕ ಹಂಚಿಕೊಂಡಿದ್ದಾರೆ.

ಅಮೆರಿಕದಲ್ಲಿ ಮಾತ್ರೆ ಬೆಲೆ 85,000, ಭಾರತದಲ್ಲಿ 35 ರೂ.! ದುಬಾರಿ ಯುಎಸ್‌ ಹೆಲ್ತ್‌ ಕೇರ್‌ ಬಗ್ಗೆ ಅಮೆರಿಕದ ಮಹಿಳೆ ಕಳವಳ
ಅಮೆರಿಕದಲ್ಲಿ ಮಾತ್ರೆ ಬೆಲೆ 85,000, ಭಾರತದಲ್ಲಿ 35 ರೂ.! ದುಬಾರಿ ಯುಎಸ್‌ ಹೆಲ್ತ್‌ ಕೇರ್‌ ಬಗ್ಗೆ ಅಮೆರಿಕದ ಮಹಿಳೆ ಕಳವಳ

"ಇದು ನಮ್ಮ ದೇಶದಲ್ಲಷ್ಟೇ ಅಲ್ಲ, ಅಮೆರಿಕದ ಬೇರೆ ಏರಿಯಾದ ಇಂಡಿಯನ್ ಸ್ಟೋರ್‌ನಲ್ಲೂ ಹೀಗೆಯೇ ಆಗುತ್ತೆ!" ಅಂತ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲಿ ಬೆಂಡೆಕಾಯಿ ತಗೊಳೋಕೆ ಕ್ಯೂ ನಿಲ್ಲದೆ ಮುಂದೆ ಹೋಗಲು ಅವಕಾಶವನ್ನು ಕೊಡಲಿಲ್ಲ ಅಂತ ಗ್ರಾಹಕರೊಬ್ಬರು ನೇರವಾಗಿ ಅಂಗಡಿ ಓನರ್ ಹತ್ರನೇ ಕಂಪ್ಲೇಂಟ್ ಮಾಡಿದ್ದರಂತೆ! ಜನ ಎಲ್ಲೇ ಹೋದ್ರು ಶಿಸ್ತು ಪಾಲಿಸೋದು ಕಷ್ಟ ಅನ್ನೋದಕ್ಕೆ ಇದೂ ಒಂದು ಉದಾಹರಣೆ.

ಈ ಘಟನೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮತ್ತೊಬ್ಬ ನೆಟ್ಟಿಗರು, "ಇಂತಹ ಬೇಜವಾಬ್ದಾರಿ ವರ್ತನೆಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಮತ್ತು ಹೆಸರಿಗೆ ಧಕ್ಕೆ ಉಂಟಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ಪ್ರಾರಂಭವಾದ ಭಾರತದ ಗ್ರೋಸರಿ ಅಂಗಡಿಯ ಉದ್ಘಾಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ದೊಡ್ಡ ಡಿಬೇಟ್‌ಗೆ ಕಾರಣವಾಗಿದೆ!

ಒಬ್ಬ ಬಳಕೆದಾರರು, "ಜಗತ್ತಿನ ಮುಂದೆ ಭಾರತೀಯರ ಬಗ್ಗೆ ಬ್ಯಾಡ್ ಒಪಿನಿಯನ್ ಮೂಡಲು ಇಂಥ ಘಟನೆಗಳೇ ಕಾರಣ," ಅಂತ ಪ್ರತಿಕ್ರಿಯಿಸಿದ್ದಾರೆ, ಇನ್ನೊಂದೆಡೆ, "ಇದು ಜನರಲ್ಲಿರೋ ಮಾಮೂಲಿ ಎಕ್ಸೈಟ್‌ಮೆಂಟ್ ಅಷ್ಟೇ. ಒಂದು ವೈರಲ್ ವಿಡಿಯೋ ಇಟ್ಕೊಂಡು ಎಲ್ಲ ಭಾರತೀಯರನ್ನು ಒಂದೇ ರೀತಿ ನೋಡೋದು ತಪ್ಪು," ಅಂತ ಹಲವರು ಸಪೋರ್ಟ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ನೆಟ್ಟಿಗರನ್ನು ಎರಡು ಬಣಗಳನ್ನಾಗಿ ಮಾಡಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+