15 ರೂಪಾಯಿ ಆರ್ಡರ್‌ಗೆ 500 ರೂ. ಟಿಪ್ಸ್‌: ಭಾವುಕರಾದ ಬ್ಲಿಂಕಿಟ್ ಡೆಲಿವರಿ ಬಾಯ್, ವಿಡಿಯೋ ವೈರಲ್

ಬ್ಲಿಂಕಿಟ್ ಡೆಲಿವರಿ ಬಾಯ್‌ವೊಬ್ಬರ ಟಿಪ್ಸ್‌ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 15 ರೂಪಾಯಿ ಆರ್ಡರ್ ಮಾಡಿ 500 ರೂಪಾಯಿ ಟಿಪ್ಸ್‌ ಕೊಡಲಾಗಿದೆ. ಇಷ್ಟು ದೊಡ್ಡ ಮಟ್ಟದ ಟಿಪ್ಸ್‌ ಕೊಟ್ಟಿದ್ದಾಕ್ಕೆ ಧನ್ಯವಾದ ಅಂತ ಬ್ಲಿಂಕಿಟ್ ಡೆಲಿವರಿ ಬಾಯ್ ಹೇಳಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬ್ಲಿಂಕಿಟ್‌ನ ಡೆಲಿವರಿ ಬಾಯ್‌ವೊಬ್ಬರು 500 ರೂ. ಟಿಪ್ಸ್‌ ನೀಡಿದ ಗ್ರಾಹಕರಿಗೆ ಧನ್ಯವಾದ ಹೇಳಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜನರ ಮನ್ಸಸ್ಸು ಗೆದ್ದಿದೆ.

ಆನ್‌ಲೈನ್‌ನಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ನೋಡಿದ್ದಾರೆ. ಈ ವಿಡಿಯೋವನ್ನು 13 ಮಿಲಿಯನ್‌ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. 1.6 ಮಿಲಿಯನ್‌ಗೂ ಹೆಚ್ಚು ಲೈಕ್ಸ್‌ಗಳು ಈ ವಿಡಿಯೋಗೆ ಬಂದಿದೆ. ಗ್ರಾಹಕರು ಡೆಲಿವರಿ ಬಾಯ್ ಅವರೊಂದಿಗೆ ನಡೆದುಕೊಂಡ ರೀತಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಳಕೆದಾರರು ಮಾಡಿದ ಕೆಲಸಕ್ಕೆ ನೆಟ್ಟಿಗರ ಭೇಷ್‌ ಎಂದಿದ್ದಾರೆ. ಗ್ರಾಹಕರು ಯಾರು ಎನ್ನುವುದನ್ನು ವೀಡಿಯೊದಲ್ಲಿ ತೋರಿಸಿಲ್ಲ. ಬದಲಾಗಿ, ವಿತರಣೆಯನ್ನು ಪೂರ್ಣಗೊಳಿಸಿದ ಸ್ವಲ್ಪ ಸಮಯದ ನಂತರ ಡೆಲಿವರಿ ಬಾಯ್ ಈ ವಿಡಿಯೋವನ್ನು ಮಾಡಿದ್ದಾರೆ.

Blinkit

ಬ್ಲಿಂಕಿಟ್ ಡೆಲಿವರಿ ಬಾಯ್ 15 ರೂಪಾಯಿ ಆರ್ಡರ್‌ಗೆ ಇಷ್ಟು ದೊಡ್ಡ ಮಟ್ಟದ ಟಿಪ್ಸ್‌ ಎದುರು ನೋಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ನಾನಿಂದು ಒಬ್ಬರಿಗೆ 15 ರೂಪಾಯಿ ಮೊತ್ತದ ಆರ್ಡರ್ ಡೆಲಿವರಿ ಮಾಡಿದೆ. ಅವರು ನನಗೆ ಎಷ್ಟು ಟಿಪ್ಸ್‌ ಕೊಟ್ಟಿದ್ದಾರೆ ಗೊತ್ತಾ ಅಂತ ವಿಡಿಯೋ ಸ್ಟಾರ್ಟ್ ಮಾಡಿದ್ದಾರೆ. ಮುಂದುವರಿದು ಗ್ರಾಹಕರೊಬ್ಬರು ನನಗೆ 500 ರೂಪಾಯಿ ನೋಟ್ ಟಿಪ್ಸ್‌ ಕೊಟ್ಟಿದ್ದಾರೆ. ಅವರು ಮೊದಲು ತಮ್ಮ ದಿನದ ಅಪ್ಲಿಕೇಶನ್‌ನಲ್ಲಿನ ಗಳಿಸಿದ ಮೊತ್ತವನ್ನು ತೋರಿಸಿದ್ದಾರೆ.

ಅದರಲ್ಲಿ ಟಿಪ್ಸ್‌ ಮೊತ್ತ ಬರುವುದಕ್ಕಿಂತಲೂ ಮುಂಚೆ ಕೇವಲ 97 ರೂ.ಗಳಷ್ಟಿತ್ತು. 500 ರೂ. ನೋಟನ್ನು ಎತ್ತಿ ಹಿಡಿದು, ಈ ಮೊತ್ತವು ಎರಡು ದಿನಗಳ ಕೆಲಸದಲ್ಲಿ ನಾನು ಸಾಮಾನ್ಯವಾಗಿ ಗಳಿಸುವ ಮೊತ್ತಕ್ಕೆ ದೊಡ್ಡ ಹಣವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಟಿಪ್‌ ನೋಡಿದ ಅವರು ಭಾವುಕರಾಗಿ ಮಾತನಾಡಿದ್ದಾರೆ. ಗ್ರಾಹಕರಿಗೆ ಪದೇ ಪದೇ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಟಿಪ್‌ ತಮ್ಮ ದಿನವನ್ನು ವಿಶೇಷವಾಗಿಸಿದೆ ಎಂದು ಹೇಳುತ್ತಾ, ಗ್ರಾಹಕರ ದಯೆ ಮತ್ತು ಉದಾರತೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

"ದೀದಿ ಅವರ ಜೀವನದಲ್ಲಿಯೂ ಕಷ್ಟದ ಸಮಯಗಳನ್ನು ಕಂಡಿರಬೇಕು ಮತ್ತು ಅದಕ್ಕಾಗಿಯೇ ಅವರು ನಿಮಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಅನಿಸುತ್ತೆ. ಆ ಯುವತಿಗೆ ಧನ್ಯವಾದಗಳು. ಸಾಮಾನ್ಯವಾಗಿ ಡೆಲಿವರಿ ಭಾಯ್‌ಗೆ 20 ರೂಪಾಯಿ ಅಥವಾ 30 ರೂಪಾಯಿ ಟಿಪ್ಸ್‌ ಕೊಡುತ್ತಾರೆ.

ಇನ್ನು ಬ್ಲಿಂಕಿಟ್ ಡೆಲಿವರಿ ಬಾಯ್‌ ಕಂಟೆಂಟ್‌ ಕ್ರಿಯೇಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ. Instagram ಮತ್ತು YouTube ಎರಡರಲ್ಲೂ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ YouTube ಪ್ರೊಫೈಲ್ ಪ್ರಕಾರ, ಅವರು ತಮ್ಮ ದೈನಂದಿನ ಜೀವನ, ನಿಜ ಜೀವನದ ಅನುಭವಗಳು ಮತ್ತು ಪ್ರಯಾಣಗಳನ್ನು ದಾಖಲಿಸುತ್ತಾರೆ, ಅವರ ಚಾನೆಲ್ ಅನ್ನು ಅವರ ಜೀವನ ಪ್ರಯಾಣದ ದಾಖಲೆ ಎಂದು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+