Kannada: “ಕನ್ನಡ ತುಂಬಾ ಕೆಟ್ಟದಾಗಿ ಕೇಳಿಸುವ ಭಾಷೆ” ಎಂದ ಆಂಧ್ರವಾಲ, ತೆಲುಗು ಲಿಪಿಯೇ ನಮ್ಮದು ಎಂದ ಕನ್ನಡಿಗರು, ವೈರಲ್ ಪೋಸ್ಟ್‌

Kannada: ಕನ್ನಡ ಭಾಷೆಯ ಬಗ್ಗೆ, ಬೆಂಗಳೂರು ಹಾಗೂ ಕರ್ನಾಟಕದ ಬಗ್ಗೆ ನಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡುವುದು ಹಾಗೂ ಟ್ರೋಲ್ ಮಾಡುವುದು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶ ಹಾಗೂ ನೆರೆಯ ರಾಜ್ಯದ ಕೆಲವರು ಸಹ ಈಗ ಟ್ರೋಲ್ ಮಾಡುತ್ತಿರುವುದು ಕನ್ನಡ ಭಾಷೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ವಿಜಯವಾಡ ಮೂಲದ ಮಾಥುರ್ ಪ್ರಾಂಜಲ್ ಎನ್ನುವ ವ್ಯಕ್ತಿ ಕನ್ನಡ ಭಾಷೆಯ ಬಗ್ಗೆ ವ್ಯಂಗ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವುದು ವೈರಲ್ ಆಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಜಯವಾಡ ಮೂಲದ ಮಾಥುರ್ ಪ್ರಾಂಜಲ್ ಎನ್ನುವ ವ್ಯಕ್ತಿ "ಕನ್ನಡ ಭಾಷೆ ಅತ್ಯಂತ ಕೆಟ್ಟದಾಗಿ ಧ್ವನಿಸುವ ಭಾಷೆಯಾಗಿದೆ" ಅಂತ ಪೋಸ್ಟ್‌ ಮಾಡಿದ್ದಾನೆ. ಇದಕ್ಕೆ ಕನ್ನಡಿಗರು ತೀವ್ರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತುಪ್ಪ ಸುರಿಯುವಂತೆ ಕೆಲವು ತೆಲುಗು ಭಾಷಿಗರು "ಈಗ ಕೆಲವು ಕನ್ನಡ ನಾಯಿಗಳು ಬೊಗಳುತ್ತಿವೆ, ಈ ಪೋಸ್ಟ್‌ಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ" ಎಂದು ಕಮೆಂಟ್ ಮಾಡಿದ್ದಾರೆ.

Kannada

ನೀವು ಇಂದು ಬಳಸುತ್ತಿರುವ ಲಿಪಿ, ಚಾಲುಕ್ಯರ ಕಾಲದಲ್ಲಿ ಕನ್ನಡ ರಾಜರು ಪರಿಚಯಿಸಿದ್ದರು. ಕ್ರಿ.ಶ. 6 ರಲ್ಲಿ ಕುಬ್ಜ ವಿಷ್ಣುವರ್ಧನ ಪರಿಚಯಿಸಿದ ಬ್ರಾಹ್ಮಿ ರೂಪದ ಹಳೆಯ ಕನ್ನಡ ಲಿಪಿ. ತೆಲುಗು ಭಾಷೆಯಲ್ಲಿ ಬರೆಯಲು ನಮ್ಮ ಲಿಪಿಯನ್ನು ಬಳಸುವುದು, ಆದರೆ ಕನ್ನಡವನ್ನು ಅಣಕಿಸುವುದು ನಿಮ್ಮ ಮಾನಸಿಕ ಅಸ್ವಸ್ಥತೆಯನ್ನು ತೋರಿಸುತ್ತದೆ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ನಟರಾಜ್ ಕೆವ್ಹಿ ದೂದಿಹಳ್ಳಿ ಅವರು, ವಿಜಯವಾಡದ ಈ ವ್ಯಕ್ತಿಯ ಕೀಳು ಮನಸ್ಸಲ್ಲಿ ಕನ್ನಡದ ಬಗ್ಗೆ ಬಹಳ ಬೇಸರ ತರಿಸಿದೆ. ಇವನ ಪ್ರೊಫೈಲ್ ಲಿಂಕ್ ಕಮೆಂಟಲ್ಲಿದೆ. ಸ್ವಲ್ಪ ಕ್ಲಾಸ್ ತೆಗೆದುಕೊಳ್ಳಿ ಆದರೆ ತೆಲುಗು ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಅಷ್ಟೇ. ತೆಲುಗು ನಮಗೆ ಸಹೋದರಿ ಭಾಷೆ ತೆಲುಗು ಲಿಪಿ ಕೂಡ ಕನ್ನಡದಿಂದ ಎರವಲು ಪಡೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾಸ್ಕರ್ ಹೆಬ್ಬಾರ್ ಎನ್ನುವವರು, ಕನ್ನಡ ಕಸ್ತೂರಿ. ಬರೆದ ಹಾಗೆ ಉಚ್ಚರಿಸಬಹುದಾದ ಭಾಷೆ. ತೆಲುಗು ಹೆಚ್ಚುಕಡಿಮೆ ಹಾಗೆಯೇ ಇದೆ. ಹಿಂದಿ, ತಮಿಳು, ಮಲೆಯಾಳಂ ಭಾಷೆಯ ಉಚ್ಚಾರಣೆ ಬೇರೆ ಥರ ಇರವುದಿಲ್ಲ. ತೆಲುಗಿನಲ್ಲಿ ಸ, ಶ ಉಚ್ಚಾರ ವ್ಯತ್ಯಾಸ ಅಷ್ಟೇ. ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ಹೇಳಿದ್ದಾರೆ. ಅಂಜನ್ ಮೂರ್ತಿ ಎನ್ನುವವರು, ಮನಸ್ಸು ಮತ್ತು ಆತ್ಮ ಕೆಟ್ಟದಾಗಿರುವವರಿಗೆ ಕನ್ನಡ ಕೆಟ್ಟದಾಗಿ ಧ್ವನಿಸಬಹುದು ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದವರ ಕಮೆಂಟ್‌ಗೆ ಕನ್ನಡಿಗರ ಆಕ್ಷೇಪ

ಇನ್ನು ಆಂಧ್ರಪ್ರದೇಶದವರು ದಕ್ಷಿಣ ಭಾರತದ ಬಿಹಾರಿಗಳು ಎಂದು ಕೆಲವು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಸೌತ್ ಬಿಹಾರಿಗರು.. ಅಭಿವೃದ್ಧಿಯಲ್ಲಿ ಶೂನ್ಯ. ಬೆಂಗಳೂರಲ್ಲಿ ಶೇ. 14%, ಚೆನ್ನೈ 20% ಹೈದರಾಬಾದ್ 40% ಇದ್ದಾರೆ. ಆದರೆ ಇವರು ಎಲ್ಲಿಯೂ ಹೊಂದಿಕೊಳ್ಳುವುದಿಲ್ಲ ಎಂದು ಕೆಲವು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+