ಅಣು ಸ್ಥಾವರಗಳಿಗೆ ಸೇನೆ ನಿಯೋಜನೆ, ಕೇಂದ್ರ

ಕೈಗಾ ಸ್ಥಾವರದಲ್ಲಿ ಕಳೆದ ತಿಂಗಳು 26 ರಂದು ನಡೆದ ಘಟನೆ ಮಂಗಳವಾರ ಲೋಕಸಭೆಯಲ್ಲಿ ಪ್ರಸ್ತಾಪವಾಯಿತು. ದೇಶದಲ್ಲಿರುವ ಅಣು ಸ್ಥಾವರಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದು, ಇವುಗಳಿಗೆ ಹೆಚ್ಚಿನ ಭದ್ರತೆ ಒದಗಿಸುವುದು ಅತ್ಯಂತ ಸೂಕ್ತ ಎನ್ನುವ ಮಾತು ವ್ಯಕ್ತವಾಯಿತು. ಈ ಕೇಂದ್ರ ಸರಕಾರ ರಾಜ್ಯ ಖಾತೆಯ ಗೃಹ ಸಚಿವ ಎಂ ರಾಮಚಂದ್ರನ್, ಅಣು ಸ್ಥಾವರಗಳ ಭದ್ರತೆಗೆ ಸರಕಾರ ಬದ್ಧವಾಗಿದೆ. ಸಿಐಎಸ್ಎಫ್ ನೊಂದಿಗೆ ಸೇನಾ ರಕ್ಷಣೆಯನ್ನೂ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ಅತ್ಯಂತ ಪ್ರಮುಖ ಎಂದು ಬಿಂಬಿತವಾಗಿರುವ ಅಣು ಸ್ಥಾವರಗಳಿಗೆ ಕಾಪ್ಟರ್ ಮೂಲಕವೂ ರಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ರಾಮಚಂದ್ರನ್ ಭರವಸೆ ನೀಡಿದರು. ಕೈಗಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ತನಿಖೆ ಸಾಗಿದೆ ಎಂದು ಹೇಳಿದರು.
(ಏಜನ್ಸೀಸ್)












Click it and Unblock the Notifications