ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಮುಖ್ಯ-ಮುಂ-ತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಲಿಂಗೈಕ್ಯ

By Super
|
Google Oneindia Kannada News

ಚಿತ್ರ-ದು-ರ್ಗ : -ನಾ-ಡೋ-ಜ, ಮಾಜಿ ಮುಖ್ಯ-ಮಂತ್ರಿ ಸಿದ್ದ-ವ-ನ-ಹ-ಳ್ಳಿ ನಿಜ-ಲಿಂ-ಗ-ಪ್ಪ ಮಂಗ-ಳ-ವಾ-ರ ರಾತ್ರಿ 10.30 ರ ಹೊತ್ತಿ-ಗೆ ತಮ್ಮ ಸ್ವಗೃ-ಹ-ದ-ಲ್ಲಿ ನಿಧ-ನ-ರಾ-ದರು. ಅವ-ರಿ-ಗೆ 98 ವರ್ಷ ವಯ-ಸ್ಸಾ-ಗಿ-ತ್ತು .

ಮೂವ-ರು ಪುತ್ರ-ರು, ಆರು ಮಂದಿ ಪುತ್ರಿ-ಯ-ರು, 22 ಜನ ಮೊಮ್ಮ-ಕ್ಕ-ಳು ಹಾಗೂ 29 ಜನ ಮರಿ ಮಕ್ಕ-ಳ-ನ್ನು ಎಸ್ಸೆನ್‌ ಅಗ-ಲಿ-ದ್ದಾ-ರೆ. ಕಳೆದ ತಿಂಗಳು ಚಿತ್ರದುರ್ಗದ ತಮ್ಮ ನಿವಾಸದಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ನಿಜ-ಲಿಂ-ಗ-ಪ್ಪ-ನ-ವರನ್ನು ಬೆಂಗಳೂರಿನ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೃದ-ಯ-ದ ಸೋಂಕು ಹಾಗೂ ಶ್ವಾಸ-ಕೋ-ಶ-ದ ತೊಂದ-ರೆ-ಗ-ಳಿಂ-ದ ಬಳ-ಲು-ತ್ತಿ-ದ್ದ ಅವ-ರ ಆರೋ-ಗ್ಯ ಸ್ಥಿತಿ-ಯ-ಲ್ಲಿ ಸುಧಾ-ರ-ಣೆ ಕಂಡು-ಬ-ರ-ದಿ-ದ್ದ-ರೂ, ಅವ-ರ ಅಪೇ-ಕ್ಷೆ-ಯ ಮೇರೆ-ಗೆ ದುರ್ಗ-ದ ಸ್ವಗೃ-ಹ-ಕ್ಕೆ ಜುಲೈ 27 ರಂದು ವಾಪ-ಸ್ಸು ಕರೆ--ದೊ-ಯ್ಯ-ಲಾ-ಗಿ-ತ್ತು.

ಪಾರದರ್ಶಕತೆಯ ಪ್ರತಿಪಾದಕ : 1902ರ ಡಿಸೆಂಬರ್‌ 10ರಂದು ಜನಿಸಿದ 98 ವರ್ಷ ವಯಸ್ಸಿನ ಎಸ್‌.ನಿಜಲಿಂಗಪ್ಪ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಏಕೀಕರಣಾನಂತರ ರಾಜ್ಯದ ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರದಾಗಿತ್ತು. ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಇರಬೇಕೆಂದು ಸದಾ ಪ್ರತಿಪಾದಿಸುತ್ತಿದ್ದ ಎಸ್ಸೆನ್‌ ಕರ್ನಾಟಕದ ಗಾಂಧೀಜಿ ಎಂದು ಹೆಸರಾಗಿದ್ದರು.

ಕರ್ನಾಟಕ ಸರಕಾರ (ಗಾಂಧಿ ಜಯಂತಿಯ ದಿನದಂದು) 1999ರ ಅಕ್ಟೋಬರ್‌ 2ರಂದು ರಾಜ್ಯದ ಅತ್ಯುನ್ನತ ಪುರಸ್ಕಾರವಾದ ' ಕರ್ನಾಟಕ ರತ್ನ " ನೀಡಿ ಗೌರವಿಸಿತ್ತು.

English summary
Nonegarian S. Nijalingappa passes away
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X