ನನ್ನ ತಂಟೆಗೆ ಬಂದ್ರೆ ನಿನ್ನ ಜಾತಕ ಬಿಚ್ಚಿಡುತ್ತೇನೆ: ಎಂ.ಚಂದ್ರಪ್ಪ ತಿಪ್ಪಾರೆಡ್ಡಿಗೆ ಹೀಗೆ ವಾರ್ನ್‌ ಮಾಡಿದ್ದೇಕೆ?

ಚಿತ್ರದುರ್ಗ, ಮಾರ್ಚ್‌, 31: ನಾನು ಸೀಮೆಎಣ್ಣೆ ಮಾರಿ ಜೀವನ ಸಾಗಿಸಿದ್ದೇನೆ, ನಿನ್ನ ಹಾಗೆ ಕರೆಂಟು ಕಳ್ಳತನ ಮಾಡಿ ಜೀವನ ಸಾಗಿಸಿಲ್ಲ ಎಂದು ಮಾಜಿ ಶಾಸಕ ತಿಪ್ಪಾರೆಡ್ಡಿಗೆ ಹಾಲಿ ಶಾಸಕ ಎಂ.ಚಂದ್ರಪ್ಪ ಖಡಕ್ ತಿರುಗೇಟು ನೀಡಿದ್ದಾರೆ. ಹಾಗೆಯೇ ಇನ್ನೇನೆಲ್ಲ ವಾರ್ನ್‌ ಮಾಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ಚಿತ್ರದುರ್ಗ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ ಅವರು ನಾನು ಕಷ್ಟದಿಂದ ಬಂದ ವ್ಯಕ್ತಿ ನನಗೆ ಬಡತನ ಏನೆಂದು ಗೊತ್ತಿದೆ. ನಿನ್ನತರ ಬಂಗಾರದ ಚಮಚ ಇಟ್ಟುಕೊಂಡು ಬಂದವನಲ್ಲ, ಬದಲಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದ ಮತದಾರರು ಐದು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

M Chandrappa direct warning to G H Thippareddy what is the reason

ನಾನು ನಿನ್ನ ಹೆಸರನ್ನು ಹೇಳದೇ ಸಾಮಾನ್ಯವಾಗಿ ಮಾತಾಡಿದ್ದೆ. ಆದರೆ ಕುಂಬಳಕಾಯಿ ಕಳ್ಳ ಎಂದರೆ ನಿನ್ಯಾಕೆ ಹೆಗಲು ಮುಟ್ಟಿಕೊಂಡು ನೋಡ್ತೀಯ, ನಿನ್ನೆ ಪತ್ರಿಕಾ ಗೋಷ್ಠಿಯಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಗಳನ್ನು ಮಾಡಿದ್ದಿಯಾ. ನಾನು ನಿಜವಾಗಿಯೂ ಬಡತನದಿಂದಲೇ ಬಂದಿದ್ದು, ಸೊಸೈಟಿಯಲ್ಲಿ ಅಕ್ಕಿ, ಸೀಮೆ ಎಣ್ಣೆ ಮಾರಿ ಜೀವನ ಮಾಡಿದ್ದೇನೆ ಎಂದರು.

ನಿನ್ನ ಹಾಗೆ ಕರೆಂಟ್ ಕಳವು ಮಾಡಿ ಬದುಕು ಸಾಗಿಸಿಲ್ಲ. ಎಷ್ಟೋ ಜನ ಬಡತನದಲ್ಲಿದ್ದವರು ರಾಜಕೀಯಕ್ಕೆ ಬಂದು ದೊಡ್ಡವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿನಗೆ ಟಿಕೆಟ್ ಕೊಡದಿದ್ದರಿಂದ ಪಕ್ಷೇತರನಾಗಿ ನಿಂತು ಗೆದ್ದಿದ್ದೀಯಾ ಅಂದರೆ ಅಲ್ಲಿಯೂ ಸಹ ನಿನ್ನ ಯೋಗ್ಯತೆ ಗೊತ್ತಾಗಿದೆ ಎಂದರು.

ಜಿಲ್ಲೆಯಲ್ಲಿ ನಾನು ಎಲ್ಲೆ ಹೋದರೂ ಇತರೇ ರಾಜಕೀಯ ಪಕ್ಷದವರು ಕರೆದು ಟಿಕೆಟ್ ನೀಡುತ್ತಾರೆ. ನಿನಗೆ ಆ ಯೋಗ್ಯತೆ ಇಲ್ಲ. ಕಳೆದ ಚುನಾವಣೆಯಲ್ಲಿ 90,000 ಮತದಾರರು ನಿನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಉತ್ತಮ ಕಾಮಗಾರಿಗಳನ್ನು ಮಾಡಿದ್ದೇನೆ. ಈಗಲೂ ಅಲ್ಲಿನ ಜನ ನನ್ನನ್ನು ನೆನೆಸುತ್ತಾರೆ. ಆದರೆ ನಿನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಮಾಡಿ ಅದನ್ನು ಒಡೆಯುವಂತೆ ಮಾಡಲಾಗಿದೆ. ಗುತ್ತಿಗೆದಾರರಿಂದ ಕಮಿಷನ್ ಪಡೆದು ಕ್ಷೇತ್ರದ ಮತದಾರರಿಗೆ ಮೋಸ ಮಾಡಿದ್ದೀಯ ಎಂದು ಆರೋಪಿಸಿದರು.

ಹೊಳಲ್ಕೆರೆ ಕ್ಷೇತ್ರದಲ್ಲಿ ನೀನು ಸತ್ತರೆ ನಿನ್ನ ಹೋರಲು ನಾಲ್ಕು ಜನ ಬರುವುದಿಲ್ಲ. ನನ್ನ ಮಗ ಯಾವಾಗಲೂ ಪೋತಪ್ಪ ನಾಯಕನೇ. ಅವನಿಗಾಗಿ ಯಡಿಯೂರಪ್ಪ ಬಳಿ ಟಿಕೆಟ್ ಕೇಳಿದ್ದು ತಪ್ಪಾ? ನಿನ್ನನ್ನು ಯಡಿಯೂರಪ್ಪನವರು ಮಂತ್ರಿ ಮಾಡಲಿಲ್ಲ ಎಂದು ಕ್ಷೇತ್ರದಲ್ಲಿ ಅವರ ವಿರುದ್ಧ ಧಿಕ್ಕಾರಗಳನ್ನು ಕೂಗಿ ಟಯರ್‌ಗಳನ್ನು ಸುಡಿಸಿದ್ದು ಇನ್ನು ಮರೆತಿಲ್ಲ ಎಂದು ಚಂದ್ರಪ್ಪ ತಿಪ್ಪಾರೆಡ್ಡಿಯ ವಿರುದ್ದ ಕಿಡಿ ಕಾರಿದರು.

ಚಿತ್ರದುರ್ಗ ಸಾರಿಗೆ ಶೌಚಾಲಯದಲ್ಲೂ ಸಹ ಪರ್ಸೆಂಟೇಜ್ ಪಡೆಯುತ್ತೀಯ ಎಂದರೆ ನಿನ್ನ ಯೋಗ್ಯತೆ ಏನೆಂದು ಗೊತ್ತಾಗುತ್ತದೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ನಿನ್ನಷ್ಟೇ ಅರ್ಹತೆ ನನಗೂ ಇದೆ. ನಿನಗೆ ನಾನು ನಿನಗೆ ಅಣ್ಣನ ಸ್ಥಾನ ನೀಡಿದ್ದೆ. ನಿನ್ನ ಹೆಸರು ಹೇಳದೆ ಮಾತಾಡಿದ್ದೆ, ಆದರೆ ನೀನು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದೀಯ. ಇದಕ್ಕೆ ತಕ್ಕ ಪ್ರತಿಫಲ ಮುಂದಿನ ದಿನಗಳಲ್ಲಿ ದೊರೆಯಲಿದೆ ಎಂದರು.

ರೆಡ್ಡಿ ಸಮುದಾಯದಲ್ಲಿ ಜನಿಸಿದ ನೀನು ಸಂಘಟಿಸುವ ಬದಲಿಗೆ ಹೊಡೆಯುವ ಕೆಲಸ ಮಾಡುತ್ತಿದ್ದೀಯ, ಇದೇ ರೀತಿ ಬಿಜೆಪಿ ಪಕ್ಷ ಹೊಡೆಯುವ ಸಂಚು ಮಾಡಿದ್ದೀಯ ಎಂದು ದೂರಿದರು. ಮುಂದಿನ ದಿನಗಳಲ್ಲಿ ನನ್ನ ತಂಟೆಗೆ ಬರಬೇಡ, ನಾನು ಬರುವುದಿಲ್ಲ. ಹಾಗೇನಾದರು ಬಂದರೆ ನಿನ್ನ ಜಾತಕ ಬಿಚ್ಚಿಡುತ್ತೇನೆ ಎಂದು ಚಂದ್ರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+