Zameer Ahmed: ದಿಢೀರ್ ಎದೆ ನೋವು, ಆಸ್ಪತ್ರೆಗೆ ದಾಖಲಾದ ಜಮೀರ್ ಅಹ್ಮದ್
ಚಿತ್ರದುರ್ಗ, ಏಪ್ರಿಲ್. 15: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರು ಬ್ಯುಸಿಯಾಗಿದ್ದಾರೆ. ಇದೇ ರೀತಿ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಚಿತ್ರದುರ್ಗಕ್ಕೆ ಪ್ರಚಾರ ಸಭೆಗೆ ತೆರಳಿದ್ದರು. ಪ್ರಚಾರ ಸಭೆಗೆ ಆಗಮಿಸಿರುವ ಜಮೀರ್ ಅಹ್ಮದ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಸಂಜೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವ ಜಮೀರ್ ಅಹ್ಮದ್ ಕೋಟೆ ನಾಡಿಗೆ ಆಗಮಿಸಿದ್ದರು. ಈ ವೇಳೆ ಎದೆ ನೋವು ಎಂದು ಬಸವೇಶ್ವರ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ. ವೈದ್ಯರು ಜಮೀರ್ ಅಹ್ಮದ್‌ಗೆ ಇಸಿಜಿ, ಇಕೋ ಹಾಗೂ ರಕ್ತ ಪರೀಕ್ಷೆ ನಡೆಸಿದ್ದಾರೆ. ಇಸಿಜಿ, ಇಕೋ ಪರೀಕ್ಷೆ ನಾರ್ಮಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತಷ್ಟು ಮಾಹಿತಿ ಬರಬೇಕಿದೆ.












Click it and Unblock the Notifications