ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ

ಚಿತ್ರರ್ದು, ಏಪ್ರಿಲ್‌ 19: ರಾಜ್ಯದಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು, ಕುಟುಂಬದ ಮುಖ್ಯಸ್ಥರಿಂದ 4-5 ಸಾವಿರ ಹಣ ವಸೂಲಿ ಮಾಡುವ ಕಾಂಗ್ರೆಸ್ ಪಿಕ್ ಪಾಕೆಟ್ ಸರ್ಕಾರವಿದೆ. ಅವರು ಇಲ್ಲಿಯವರೆಗೂ ಬಿಜೆಪಿ ಬೈಯುವುದನ್ನು ಬಿಟ್ಟು ಬೇರೆ ಏನು ಅಭಿವೃದ್ದಿ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಆರೋಪಿಸಿದರು.

ನಗರದ ನೆಹರೂ ಮೈದಾನದಲ್ಲಿ ಮಾತನಾಡಿದ ಅವರು, ಕೇವಲ 2 ಸಾವಿರ ಕೊಟ್ಟಿರುವ ಕಾಂಗ್ರೆಸ್, ಬಡವರ ಬೆವರು ಸುರಿಸಿದ ತೆರಿಗೆಯ ಸುಮಾರು ೩೫೦ ಕೋಟಿ ಹಣವನ್ನು ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ. ಅಂದು ನೀರಿಗಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಇಂದು ಸಾರ್ವಜನಿಕರ ಆಸ್ತಿ ಲೂಟಿ ಮಾಡುತ್ತಿದೆ.

We Will Give Justice To The Kadugolla Community Says Former CM HD Kumaraswamy

ಬೆಂಗಳೂರು ಜನತೆಗೆ ಕುಡಿವ ನೀರಿಲ್ಲ. ಆದರೆ ಅಪಾರ್ಟ್ಮೆಂಟ್‌ನಲ್ಲಿ ತಮ್ಮನಿಗೆ ಮತ ನೀಡಿದ್ರೇ ನೀರು ಕೊಡ್ತೀನಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರ ನಡೆಸಲು ಜಾತಿಗಣತಿ ಬೇಕಾಗಿಲ್ಲ. ತಾಯಿ ಹೃದಯ ಬೇಕು ಸಿದ್ದರಾಮಯ್ಯ ಅವರೇ, ಜಾತಿ ವ್ಯವಸ್ಥೆ ಹೋಗಲಾಡಿಬೇಕು ಅನ್ನುತ್ತೀರಾ, ಜಾತಿ-ಜಾತಿ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಿರಾ ಎಂದು ವಾಗ್ದಾಳಿ ನಡೆಸಿದರು.

ಕಾಡುಗೊಲ್ಲ ಸಮಾಜದ ಪರಿಸ್ಥಿತಿ ಅರಿತ ದೇವೆಗೌಡರು ಪ್ರಧಾನಿ ಭೇಟಿ ಮಾಡಿ ನ್ಯಾಯ ದೊರಕಿಸುವಂತೆ ಮನವಿ ಮಾಡಿದ್ದು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ೨-೩ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುವುದು ನಮ್ಮ ಜವಾಬ್ದಾರಿ. ನಾಯಕ ಸಮಾಜಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದು ದೇವೆಗೌಡರು ಎಂದರು.

We Will Give Justice To The Kadugolla Community Says Former CM HD Kumaraswamy

ನಾವು ಭದ್ರಾ ಯೋಜನೆಗೆ ಅನುಮೋದನೆ ಹಾಗೂ ಚಾಲನೆ ಕೊಟ್ಟಿದ್ದು, ನಾಲ್ಕೈದು ವರ್ಷದಲ್ಲಿಯೇ ಪೂರ್ಣಗೊಳಿಸಲು ತೀರ್ಮಾನಿಸಿದ್ದೆ. ಆದರೆ ತದನಂತರ ಬಂದ ಸರಕಾರ ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಿಲ್ಲ. ಇಂದು ಕೇಂದ್ರ ಬಿಜೆಪಿ ಸರಕಾರ ಭದ್ರಾ ರಾಷ್ಟ್ರೀಯ ಯೋಜನೆ ಘೋಷಿಸಿ, ೫,೩೦೦ಕೋಟಿ ಅನುದಾನ ಮೀಸಲಿಟ್ಟಿದ್ದರೂ, ಕಾಂಗ್ರೆಸ್ ಸರಕಾರ ಬೇಕಾದ ಅಗತ್ಯ ಮಾಹಿತಿ ನೀಡುವ ಜೊತೆಗೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳದೇ ಲೋಪವೆಸಗುತ್ತಿದೆ ಎಂದು ಹೇಳಿದರು.

ಜೆಡಿಎಸ್‌ಗೆ ಸಂಪೂರ್ಣ ಅಧಿಕಾರ ನೀಡಿದ್ದರೆ ಎಲ್ಲಾ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡುತ್ತಿದ್ದೆ. ಆದರೆ ಅಧು ಸಾಧ್ಯವಾಗಲಿಲ್ಲ. ಆದ್ದರಿಂದ ಇಂದು ಅಪ್ಪರ್ ಭದ್ರಾ, ಎತ್ತಿನಹೊಳೆ, ಮೇಕೆದಾಟು, ಮಹಾದಾಯಿ ಮುಂತಾದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ ವಿನಹಃ ಸ್ವಾರ್ಥ ಸಾಧನೆಗಾಗಿ ಅಲ್ಲ ಎಂದರು.

ಅಂದು ರೈತರ ಸಾಲ ಮನ್ನ ಮಾಡಿದ್ದರಿಂದ ಇಂದು ಜನರ ಆಶೀರ್ವಾದ ಸಿಕ್ಕಿದೆ. ನಾನು ಜೀವವಿರುವವರೆಗೂ ನಮ್ಮ ಪಕ್ಷ ಮಾರಾಟ ಮಾಡುವ ಪ್ರಶ್ನೆಯಿಲ್ಲ. ರೈತರ ನೋವಿನ ಬದುಕಿಗಾಗಿ ಕೇಂದ್ರದ ಸಹಕಾರ ಪಡೆಯುತ್ತೇನೆ. ಕುಟುಂಬದ ಸದಸ್ಯ ಎಂದೇ ಭಾವಿಸಿ. ನನ್ನ ಮೇಲೆ ವಿಶ್ವಾಸವಿಡಿ. ೨೮ ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ. ಈ ನಾಡನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ. ಇಲ್ಲವಾದರೆ ರಾಜಕೀಯದಲ್ಲಿ ಮತಕೇಳಲು ಬರುವುದಿಲ್ಲ ಎಂದರು.

ಮೈತ್ರಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಮಾತನಾಡಿ ಪ್ರಧಾನಿ ಮೋದಿ, ದೇವೇಗೌಡರು, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಎಂಬ ನಮ್ಮ ದೈತ್ಯ ಶಕ್ತಿ ನೋಡಿ ಕಾಂಗ್ರೆಸ್ ನಲುಗಿ ಹೋಗಿದೆ. ಸುಳ್ಳು ಭರವಸೆಗಳನ್ನು ನೀಡಿ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಭಿವೃದ್ದಿಯನ್ನೇ ಮರೆತಿದೆ. ರಾಜ್ಯದ ಖಜಾನೆ ಖಾಲಿ ಆಗಿದ್ದು, ದಿವಾಳಿಯಾಗಿದೆ. ದೇಶದ ಬಜೆಟ್ ಗಾತ್ರವೇ 47 ಲಕ್ಷ ಕೋಟಿ. ಆದರೆ ಕಾಂಗ್ರೆಸ್ 50 ಲಕ್ಷ ಕೋಟಿ ಭರವಸೆ ನೀಡಿದೆ. ರಾಜ್ಯದಲ್ಲಿ ಬರಗಾಲ ನಿಭಾಯಿಸುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+