ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಖನ

By Super
|
Google Oneindia Kannada News

ಇಂಟರ್‌ನೆಟ್‌ನಿಂದ ನಮ್ಮ ಜೀವನ ಬದಲಾಗಿದೆ, ಮತ್ತಷ್ಟು ಬದಲಾಗಲಿದೆ ಎಂಬುದು ಎಲ್ಲರಿಗೂ ಗೊತ್ತು. ಕುಳಿತಲ್ಲೇ ನೀವು ಶೇವಿಂಗ್‌ ಬ್ಲೇಡ್‌ಗೆ ಆರ್ಡರ್‌ ಮಾಡಬಹುದು. ಐಸ್‌ಕ್ರೀಂ ಬೇಕೆ, ಅದನ್ನೂ ತರಿಸಿಕೊಳ್ಳಬಹುದು. ಮೊಟ್ಟೆ, ಹಾಲು ಬೇಕೆನಿಸಿದರೆ ಅದನ್ನೂ ಇಂಟರ್‌ನೆಟ್‌ನಲ್ಲಿ ಆರ್ಡರ್‌ ಪಾಸ್‌ ಮಾಡುವ ಮೂಲಕ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಇದರ ಬಗ್ಗೆ ನಮಗೀಗಾಗಲೇ ಗೊತ್ತಿದೆ. ಇಂಟರ್‌ನೆಟ್‌ನ ಕೃಪೆಯಿಂದ ಎಷ್ಟೋ ಜನ ಕೆಲಸಕ್ಕೆಂದು ಕಚೇರಿಗೆ ಹೋಗುವುದೇ ಇಲ್ಲ. ಮನೆಯಲ್ಲೇ ಕಚೇರಿಯ ಕೆಲಸ ಮಾಡಿ ಸಂಬಳ ಪಡೆಯುತ್ತಾರೆ. ಆದರೆ, ಇದು ನಮ್ಮ ಜೀವನಶೈಲಿಯನ್ನು ಬದಲಾಯಿಸುವುದಷ್ಟೇ ಅಲ್ಲ. ಇನ್ನು 50ರಿಂದ 100 ವರ್ಷಗಳಲ್ಲಿ ಮಾನವ ಪ್ರಭೇದದ ಹೆಸರೇ ಬದಲಾಗುತ್ತದೆ. ಈಗ ಹೋಮೋ ಸೇಪಿಯೆನ್ಸ್‌ ಆಗಿರುವ ನಾವು ಮುಂದೆ ಹಾಗೆ ಕರೆಸಿಕೊಳ್ಳುವುದಿಲ್ಲವೇನೋ? ಎಂಬುದು ವಿಜ್ಞಾನಿಗಳ ಅನಿಸಿಕೆ. ಈ ಕುರಿತು ಕೆಲವು ತಜ್ಞರ, ವಿದ್ವಾಂಸರ ಅಭಿಪ್ರಾಯಗಳು ಇಲ್ಲಿವೆ :

ಬರಲಿವೆ ಬುದ್ಧಿ ಇರುವ ಕಂಪ್ಯೂಟರ್‌ಗಳು ಈಗಿನ ಕಂಪ್ಯೂಟರ್‌ಗಳು ಎರೆಹುಳುವಿನ ಮಿದುಳಿನಷ್ಟೂ ಸೂಕ್ಷ್ಮ ಹಾಗೂ ಸಂಕೀರ್ಣವಾಗಿಲ್ಲ. ಮುಂದೆ ತಾಂತ್ರಿಕ ಪ್ರಗತಿಯಿಂದ ಪ್ರಜ್ಞೆ ಇರುವ(ಬುದ್ಧಿ ಇರುವ) ಇಂಟರ್‌ನೆಟ್‌ ಸವಲತ್ತು ಸಿಕ್ಕರೂ ಸಿಗಬಹುದು. ತಮ್ಮದೇ ಭಾವನೆಗಳಿರುವ, ಯೋಚಿಸುವ, ತಂತಾನೇ ಕ್ರಿಯಾಶೀಲವಾಗುವ ಶಕ್ತಿ ಇಂಟರ್‌ನೆಟ್‌ಗೆ ಬಂದರೂ ಬರಬಹುದು ಎನ್ನ್ತುತಾರೆ ಪ್ರಸಿದ್ಧ ಬ್ರಿಟಿಷ್‌ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌. ಸನ್‌ ಮೈಕ್ರೋ ಸಿಸ್ಟಂಸ್‌ನ ವಿಜ್ಞಾನಿ ಬಿಲ್‌ ಜಾಯ್ಸ್‌ ಹೀಗೆ ಹೇಳುತ್ತಾರೆ- ' ಬರುವ ಮುವತ್ತು ವರ್ಷಗಳಲ್ಲಿ ಈಗಿರುವುದಕ್ಕಿಂತ ಎಷ್ಟೋ ಮಿಲಿಯನ್‌ನಷ್ಟು ಹೆಚ್ಚು ಶಕ್ತಿ ಹೊಂದಿದ ಕಂಪ್ಯೂಟರ್‌ಗಳು ಬಳಕೆಗೆ ಬರುತ್ತವೆ.. ಅವುಗಳು ್ಙಥಿಂಕಿಂಗ್‌ ಕಂಪ್ಯೂಟರ್ಙ್‌ಗಳು. ಇಂಥ ಕಂಪ್ಯೂಟರ್‌ಗಳು ್ಙರೋಬೋ ಸ್ಪೀಶೀಸ್ಙ್‌ ಉಗಮಕ್ಕೆ ನಾಂದಿಯಾಗುತ್ತವೆ.ಇವುಗಳಿಗೆ ತಮ್ಮಷ್ಟಕ್ಕೆ ತಾವೇ ಯೋಚಿಸುವ, ಬರೆಯುವ ಜಾಣ್ಮೆ ಇರುತ್ತದೆ'.

ಇನ್ನು ನೂರು ವರ್ಷಗಳಲ್ಲಿ ಮನುಷ್ಯ ಚಿರಂಜೀವಿ?! ಮನುಷ್ಯ ಸತ್ತ ನಂತರವೂ ಬದುಕಬಲ್ಲನೇ? ಹೌದು ಎನ್ನುತ್ತಾರೆ ಬ್ರಿಟಿಷ್‌ ಟೆಲಿಕಾಂನ ಭವಿಷ್ಯಕಾರ ಇಯಾನ್‌ ಪಿಯರ್‌ಸನ್‌. ಮುಂದಿನ ನೂರು ವರ್ಷಗಳಲ್ಲಿ ಮನುಷ್ಯ ಇಚ್ಛಾಮರಣ ಹೊಂದುವಷ್ಟು ತಾಂತ್ರಿಕ ಪ್ರಗತಿಯಾಗಿರುತ್ತದೆ. ಜೀವನ ಸಾಕೆನಿಸಿದಾಗ ಜೈವಿಕವಾಗಿ ತಾನು ಮೃತನಾಗಬಲ್ಲ. ತನ್ನ ಮೆದುಳನ್ನು ್ಙಆ್ಯನ್‌ರಾಯ್ಡ್ಙ್‌(ಮಾನವ ರೂಪದ ರೊಬೋಟ್‌)ಗೆ ಡವ್ನ್‌ ಲೋಡ್‌ ಮಾಡಿದರೆ, ತಾನು ಸತ್ತ ನಂತರವೂ ತನ್ನದೇ ಮೆದುಳಿರುವ ರೋಬೋ ಕಾರ್ಯ ನಿರ್ವಹಿಸುತ್ತದೆ. ಅಂದರೆ ಇಲ್ಲಿ ಸಾವಿಲ್ಲದ ಮನೆ ಇದೆ, ಸಾಸಿವೆ ಕಾಳೂ ಸಿಗುತ್ತದೆ. ಹೀಗೆ ಸತ್ತ ನಂತರವೂ ಬದುಕು ಮುಂದುವರೆಯುತ್ತದೆ! ಇಂಥ ರೊಬೋಗಳ ವರ್ಗಕ್ಕೆ ಪಿಯರ್‌ಸನ್‌ ್ಙಹೋಮೋ ಸೈಬರ್‌ನೆಟಿಕಸ್ಙ್‌ ಎಂಬ ಹೆಸರನ್ನೂ ಇಟ್ಟಿದ್ದಾರೆ. ಹಿಂದೂ ತತ್ವ ಮಾನವ ಸತ್ತರೂ ಅವನ ಆತ್ಮ ಚಿರಾಯು ಎಂದು ಹೇಳುತ್ತದೆ. ಮನುಷ್ಯ ಸತ್ತಾಗ ಅವನ ಮನಸ್ಸು ಅಥವಾ ಆತ್ಮ ಬೇರೆ ದೇಹವನ್ನು ಸೇರುತ್ತದೆ ಎಂಬುದು ನಂಬಿಕೆ. ಈ ನಂಬಿಕೆಗೆ ಪಿಯರ್‌ಸನ್‌ ತಂತ್ರಜ್ಞಾನದ ಲೇಪ ಹಚ್ಚಿದ್ದಾರೆ.

ಬಿಲ್‌ ಜಾಯ್‌ರ ಗುರಿಯಂತೆ ತಂತ್ರಜ್ಞಾನ ಬೆಳೆದರೆ ನಾವು ಬೇರೆಯದೇ ಪ್ರಪಂಚಕ್ಕೆ ಹೋದಂತಾಗಬಹುದು. ಆಗ ನಾವೀಗಿರುವ ನಕ್ಷತ್ರ ಭೂಮಿಯು ಸಂಪೂರ್ಣ ಹೊಸತಾಗುತ್ತದೆ. ಮನುಷ್ಯ ತನ್ನ ಪ್ರಭೇದವನ್ನೇ ಬದಲಿಸಿಕೊಳ್ಳುವಷ್ಟು ಬೇರೆಯವನಾಗಿರುತ್ತಾನೆ. ಹೀಗಾದಾಗ ನಮ್ಮನ್ನು ಭೂಮಿಗೆ ತಂದ ಭಗವಂತನು ಜನಮನದಿಂದ ಮರೆಯಾಗುವನೇ?

English summary
you are changing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X