• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬ್ಬಬ್ಬಾ, ಮೂಗಿನಿಂದ ಟೈಪ್ ಮಾಡಿ 9 ಗಿನ್ನೆಸ್ ದಾಖಲೆ ಬರೆದ ವ್ಯಕ್ತಿ

|
Google Oneindia Kannada News

ನವದೆಹಲಿ, ಜೂನ್ 24: ಕೆಲವರು ತಮ್ಮ ವಿನೂತನ ಕೌಶಲದಿಂದಲೇ ಜನಪ್ರಿಯರಾಗುತ್ತಾರೆ. ವಿಭಿನ್ನ, ವಿಚಿತ್ರ ಹವ್ಯಾಸಗಳಿಂದ ಹೆಸರು ಪಡೆಯುತ್ತಾರೆ. ನವದೆಹಲಿಯ ವಿನೋದ್ ಕುಮಾರ್ ಚೌಧರಿ ಕೂಡ ಅಂಥದ್ದೇ ಸಾಲಿಗೆ ಸೇರುವವರು.

ಅವರ ಈ ವಿಭಿನ್ನ ಕೌಶಲವೇ ಅವರಿಗೆ ಒಂಬತ್ತು ಗಿನ್ನೆಸ್ ದಾಖಲೆ ಬರೆಯುವಂತೆ ಪ್ರೇರೇಪಿಸಿದೆ. ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ಎಲ್ಲರೂ ಕೈಗಳಿಂದ ಟೈಪ್ ಮಾಡುವುದು ಸಹಜ. ಆದರೆ ದೆಹಲಿಯ ಜವಹರ ಲಾಲ್ ನೆಹರು ವಿವಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿನೋದ್ ಕುಮಾರ್ ಅವರು ಮೂಗಿನ ಮೂಲಕ ಟೈಪಿಂಗ್ ಮಾಡಬಲ್ಲರು. ಹೀಗೆ ಭಿನ್ನವಾಗಿ ಟೈಪ್ ಮಾಡುವ ಮೂಲಕವೇ ಒಂದಲ್ಲ, ಎರಡಲ್ಲ, ಒಂಬತ್ತು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅಬ್ಬಬ್ಬಾ.ಗಿನ್ನೆಸ್ ದಾಖಲೆ ಮಾಡಿ ಹೂನಗೆ ಚೆಲ್ಲಿದ ಒಂಬತ್ತರ ಪೋರಿ !ಅಬ್ಬಬ್ಬಾ.ಗಿನ್ನೆಸ್ ದಾಖಲೆ ಮಾಡಿ ಹೂನಗೆ ಚೆಲ್ಲಿದ ಒಂಬತ್ತರ ಪೋರಿ !

ವಿವಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ 41 ವರ್ಷದ ವಿನೋದ್ ಕುಮಾರ್ ಚೌಧರಿ ಅತಿ ವೇಗವಾಗಿ ಮೂಗಿನಲ್ಲಿ ಟೈಪ್ ಮಾಡಬಲ್ಲರು. 2014ರಲ್ಲಿ ಹೀಗೆ ಮೂಗಿನಲ್ಲಿ ಟೈಪ್ ಮಾಡಿ ಮೊದಲು ಗಿನ್ನೆಸ್ ದಾಖಲೆ ಸೃಷ್ಟಿಸಿದರು. ಇದಿಷ್ಟೇ ಅಲ್ಲ, ಬಾಯಲ್ಲಿ ಕೋಲು ಹಿಡಿದು ಟೈಪಿಂಗ್ ಮಾಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತಿ ವೇಗವಾಗಿ ಟೈಪಿಂಗ್ ಮಾಡುವುದು... ಹೀಗೆ ಹಲವು ಕೌಶಲಗಳಿಂದ ದಾಖಲೆ ಬರೆದಿದ್ದಾರೆ.

"ನಾನು ಚಿಕ್ಕವನಿದ್ದಾಗ ಕ್ರೀಡೆ ಎಂದರೆ ತುಂಬಾ ಇಷ್ಟವಿತ್ತು. ಆದರೆ ಆರೋಗ್ಯ ಸಮಸ್ಯೆಗಳಿಂದ ಕ್ರೀಡೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಆನಂತರ ಕಂಪ್ಯೂಟರ್ ಆಪರೇಟರ್ ಆಗಿದ್ದರಿಂದ, ಅದರಲ್ಲೇ ಏನಾದರೂ ಭಿನ್ನವಾಗಿ ಮಾಡಬೇಕೆಂದು ಯೋಚಿಸಿದೆ. 2014ರಲ್ಲಿ ಮೂಗಿನ ಸಹಾಯದಿಂದ 46.30 ಸೆಕೆಂಡುಗಳಲ್ಲಿ 103 ಅಕ್ಷರಗಳನ್ನು ಟೈಪ್ ಮಾಡುವ ಮೂಲಕ ಮೊದಲ ದಾಖಲೆ ಸೃಷ್ಟಿಸಿದೆ. ಇದು ನನಗೆ ಇನ್ನಷ್ಟು ಪ್ರೋತ್ಸಾಹ ನೀಡಿತು. ಆನಂತರ 2016ರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 6.09 ಸೆಕೆಂಡುಗಳಲ್ಲಿ ಎಲ್ಲಾ ವರ್ಣಾಕ್ಷರಗಳನ್ನು ಟೈಪ್ ಮಾಡಿದೆ. ಆ ವರ್ಷ ಎರಡು ದಾಖಲೆಗಳನ್ನು ಮಾಡಿದೆ" ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ವಿನೋದ್ ಕುಮಾರ್.

2017ರಲ್ಲಿ ಬಾಯಿಯಲ್ಲಿ ಕೋಲು ಹಿಡಿದು 18.65 ಸೆಕೆಂಡುಗಳಲ್ಲಿ ಅತಿ ವೇಗವಾಗಿ ಟೈಪ್ ಮಾಡಿ ದಾಖಲೆ ಸೃಷ್ಟಿಸಿದರು. ಇದೇ ಪ್ರಯತ್ನವನ್ನು 2018ರಲ್ಲಿ 17.69 ಸೆಕೆಂಡು, ನಂತರ 17.01 ಸೆಕೆಂಡುಗಳಲ್ಲಿ ಸಾಧಿಸಿ ತಮ್ಮದೇ ದಾಖಲೆ ಮುರಿದರು. ಮತ್ತೆ 2019ರಲ್ಲಿ ಎಲ್ಲಾ ವರ್ಣಮಾಲೆಗಳನ್ನು 29.53 ಸೆಕೆಂಡುಗಳಲ್ಲಿ ಬೆರಳುಗಳ ಮೂಲಕ ವೇಗವಾಗಿ ಟೈಪ್ ಮಾಡಿ ಮತ್ತೊಂದು ದಾಖಲೆ ನಿರ್ಮಿಸಿದರು.

ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ ಮಹಿಳೆಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ ಮಹಿಳೆ

"ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರಂತೆ ಗಿನ್ನೆಸ್‌ನಲ್ಲಿ 19 ದಾಖಲೆ ನಿರ್ಮಿಸುವ ಬಯಕೆಯಿದೆ. ಇದಕ್ಕಾಗಿ ಪ್ರಯತ್ನ ಮುಂದುವರೆಸುತ್ತೇನೆ" ಎಂದು ಹೇಳುತ್ತಾರೆ ವಿನೋದ್. ಈ ಕೌಶಲವನ್ನು ಬಡ ಹಾಗೂ ಅಂಗವಿಕಲ ಮಕ್ಕಳಿಗೂ ಅವರು ಹೇಳಿಕೊಡುತ್ತಿದ್ದಾರೆ.

English summary
Vinod kumar Chaudhary who is working in JNU, delhi has 9 guinness world record by typing using nose
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X