Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Namma Metro) ಸಾರಿಗೆ ಅವಲಂಬಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಮಾರ್ಗಗಳು ಯಾವಾಗ ತೆರೆಯುತ್ತವೆ ಎಂಬುದನ್ನು ಕಾಯುತ್ತಿದ್ದಾರೆ. ಈ ಮಧ್ಯ ಕಾಮಗಾರಿ ಆರಂಭದ ಹಂತದಲ್ಲಿರುವ ನಮ್ಮ ಮೆಟ್ರೋ 3ನೇ ಹಂತದ (Namma Metro 3rd Phase Project) ಯೋಜನೆ ಪೂರ್ಣಗೊಳ್ಳಬೇಕಾದ ಗಡುವು ಮತ್ತೆ ಮುಂದಕ್ಕೆ ಹೋಗಿದೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮಧ್ಯದಲ್ಲಿನ ಸಮನ್ವಯ ಕೊರತಯೇ ಕಾರಣವೆಂದು ತಿಳಿದು ಬಂದಿದೆ. ಹೀಗೆ ಯೋಜನೆ ತಡವಾಗುವುದರಿಂದ ಸುಮಾರು 15,000 ಕೋಟಿ ರೂ.ನಷ್ಟು ಹಣ ಅಧಿಕ ವೆಚ್ಚವಾಗುವ ನಿರೀಕ್ಷೆ ಇದೆ.

ಒಟ್ಟು 44 ಕಿಲೋ ಮೀಟರ್ ಉದ್ದದ ಎರಡು ಎತ್ತರಿಸಿದ ಕಾರಿಡಾರ್ ಒಳಗೊಂಡಿರುವ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಈಗಾಗಲೇ ವಿಳಂಬ ಎದುರಿಸಿತ್ತು. ಇದೀಗ 2030ರಲ್ಲಿ ಪೂರ್ಣಗೊಳ್ಳುವ ಬದಲಾಗಿ 2031ರ ಮೇ ತಿಂಗಳ ಗಡುವು ಪಡೆದಿದೆ. ಇದರಿಂದ ದಿನವೊಂದಕ್ಕೆ ಸುಮಾರು 1-2 ಕೋಟಿ ರೂಪಾಯಿ ವೆಚ್ಚ ಹೆಚ್ಚಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Namma Metro Phase 3 Project

ಸದರಿ ಯೋಜನೆಗೆ 2024ರಲ್ಲೆ ಕೇಂದ್ರ ಅನುಮೋದನೆ

ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರವು 2024ರಲ್ಲಿ ಅನುಮೋದನೆ ನೀಡಿತ್ತು. ಸಿದ್ಧವಾದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಬಳಿಕ ಅಂದಾಜು ವೆಚ್ಚವನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ತಿಳಿಸಿತ್ತು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಇನ್ನು ಮುಂದೆ ನಿಮಾರ್ಣವಾಗುವ ಎತ್ತರಿಸಿದ ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್‌ ಡೆಕ್ಕರ್ ಫ್ಲೈಓವರ್ ನಿರ್ಮಿಸಬೇಕೆಂದು ಸೂಚನೆ ನೀಡಿತು. ಅದರನ್ವಯ ಡಿಪಿಆರ್‌ನಲ್ಲಿ ವಿನ್ಯಾಸ ಬದಲಿಸಲಾಯಿತು, ಈ ಕಾರಣದಿಂದ ಯೋಜನೆ ಆರಂಭ ಮತ್ತೆ ವಿಳಂಬವಾಯಿತು. ಅಗಲೂ ಸಹ ವೆಚ್ಚ ಹೆಚ್ಚಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ನಗರದ ಕೆಂಪಾಪುರ-ಜೆಪಿ ನಗರ ನಾಲ್ಕನೇ ಹಂತ (32.15km) ಹಾಗೂ ಹೊಸಹಳ್ಳಿ-ಕಡಬಗೆರೆವರೆಗೆ (12km) ಎರಡು ಎತ್ತರಿಸಿದ ಕಾರಿಡಾರ್‌ಗಳು ಡಬಲ್ ಡೆಕ್ಕರ್ ಮೇಲ್ಸೇತುವೆ ಸಹಿತ ನಿರ್ಮಾಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಬರೀ ಮೆಟ್ರೋ ಮಾರ್ಗವಾಗಿದ್ದರೆ ಕಡಿಮೆ ವೆಚ್ಚದಲ್ಲಿ ಹಾಗೂ ಬೇಗ ನಿರ್ಮಾಣವಾಗುತ್ತಿತ್ತು. ಆದರೆ ಮೆಟ್ರೋ ಮಾರ್ಗದಲ್ಲಿ ಮೇಲ್ಸೇತುವೆಯೂ ನಿರ್ಮಾಣವಾಗಬೇಕೆಂಬ ಸರ್ಕಾರದ ನಿರ್ಧಾರದಿಂದ ಯೋಜನೆಗೆ ಹೊಸ ಗಡುವು ಪಡೆದುಕೊಂಡಿದೆ. ಇದರ ಬೆನ್ನಲ್ಲೆ ಅನುದಾನ ಕೊರತೆಗೆ ಮತ್ತೆ ಕಾಮಗಾರಿ ತಡವಾಗಿ 2031ಕ್ಕೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮೂಲಗಳು ತಿಳಿಸಿವೆ.

ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನದ ಲೆಕ್ಕ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸಬೇಕು. ಇದರಲ್ಲಿ ರಾಜ್ಯ ಸರ್ಕಾರ ಈವರೆಗೆ ಸುಮಾರು ಶೇ.88 ರಷ್ಟು (59,000ಕೋಟಿ ರೂ.) ನೀಡಿದೆ. ಆದರೆ ಕೇಂದ್ರ ಶೇ.12ರಷ್ಟು ಮಾತ್ರವೇ ಒದಗಿಸಿದೆ. ಈ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸಹಕರಿಸುತ್ತಿಲ್ಲ ಎಂದು ರಾಜ್ಯ ಆರೋಪಿಸಿದೆ. ಈ ಸಮನ್ವಯ ಕೊರತೆಯು ಮೆಟ್ರೋ ಯೋಜನೆ ಹಾಗೂ ಅದಕ್ಕೆ ತಗುಲುವ ಅಂದಾಜು ವೆಚ್ಚದ ಮೇಲಾಗುತ್ತಿದೆ. ಇದರಿಂದ ಕಾಮಗಾರಿ ಸುಮಾರು ಒಂದು ವರ್ಷ ತಡವಾಗಿ ಪೂರ್ಣಗೊಳ್ಳಲಿದೆ. ಇದರಿಂದ ನಿತ್ಯ 1-2 ಕೋಟಿ ರೂ. ವೆಚ್ಚ ಹೆಚ್ಚಾಗಬಹುದು.

ಮೆಟ್ರೋ ಮಾಜಿ ಮುಖ್ಯಸ್ಥರ ಎಚ್ಚರಿಕೆ

ದೆಹಲಿ ಮೆಟ್ರೋ ನಿಗಮದ ಮಾಜಿ ಮುಖ್ಯಸ್ಥರಾದ ಶ್ರೀಧರನ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಮಲ್ಲಿ ಮೊದಲ ಮತ್ತು ಎರಡನೇ ಹಂತದಲ್ಲಿ ಯೋಜನೆ (42ಕಿ.ಮೀ.) ವಿಳಂಬಗೊಂಡಿದ್ದವು. ಇದರಿಂದ 2005ರಲ್ಲಿ 6,385 ಕೋಟಿ ರೂಪಾಯಿ ಎಂದು ಅಂದಾಜಿಸಿದ್ದ ಯೋಜನೆಗೆ 14,133 ಕೋಟಿ ರೂ. ತಗುಲಿತು. ವಿಳಂಬದಿಂದ ಸರ್ಕಾರಕ್ಕೂ ಹೊರೆ ಆಗುತ್ತದೆ. ಜೊತೆಗೆ ಪ್ರಯಾಣಿಕರಿಗೆ ನಿಗದಿತ ಸಮಯಕ್ಕೆ ಮೆಟ್ರೋ ಸೇವೆ ಸಿಗುವುದು ವಿಳಂಬವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+